ಕೆಂಪೇಗೌಡ ವಿಮಾನ ನಿಲ್ದಾಣ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಜಪ್ತಿ: ಪ್ರಯಾಣಿಕನಿಂದ 15 ಕೆಜಿ ಗಾಂಜಾ ವಶ
ಸೂರಜ್ ಸೂರ್ಯವಂಶಿ ಎಂದು ಗುರುತಿಸಲಾದ ಆರೋಪಿಯನ್ನು, ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಟರ್ಮಿನಲ್-2ರಲ್ಲಿ (T2) ಏರ್ ಇಂಟೆಲಿಜೆನ್ಸ್ ಯುನಿಟ್ (AIU) ತಂಡ ತಡೆದು ತಪಾಸಣೆ ನಡೆಸಿತು.

ಕೆಂಪೇಗೌಡ ವಿಮಾನ ನಿಲ್ದಾಣ–ಕೋಝಿಕ್ಕೋಡ್ ನಡುವೆ ಆಗಸ್ಟ್ 15ರಿಂದ KSRTC ಫ್ಲೈಬಸ್ ಸೇವೆ
ಪ್ರತಿದಿನ ಎರಡು ಬಸ್‌ಗಳು ಸಂಚರಿಸಲಿದ್ದು, ಯಲಹಂಕ, ಹೆಬ್ಬಾಳ, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟ, ಮಾನಂತವಾಡಿ ಮತ್ತು ಕಲ್ಪೆಟ್ಟ ಮಾರ್ಗವಾಗಿ ಕೋಝಿಕ್ಕೋಡ್ ಗೆ ತೆರಳಲಿವೆ.

IndiGo: ಮತ್ತೆ 550 ವಿಮಾನ ರದ್ದು; ಸಂಸ್ಥೆಯ 20 ವರ್ಷದ ಇತಿಹಾಸದಲ್ಲಿ ಇದೇ ಮೊದಲು!
ಕ್ಯಾಬಿನ್ ಸಿಬ್ಬಂದಿ ಸಮಸ್ಯೆಗಳು ಮತ್ತು ತಂತ್ರಜ್ಞಾನ ಸಮಸ್ಯೆಗಳು ಸೇರಿದಂತೆ ಹಲವಾರು ಅಂಶಗಳಿಂದಾಗಿ ವಿಮಾನಯಾನ ಸಂಸ್ಥೆಯು ಗಮನಾರ್ಹ ವಿಮಾನ ಅಡಚಣೆಗಳನ್ನು ಎದುರಿಸುತ್ತಿದೆ.

'ಭರವಸೆ ಈಡೇರಿಸಲು ಸಾಧ್ಯವಾಗಲಿಲ್ಲ.. ಸಮಸ್ಯೆ ಬಗೆಹರಿಸಲು ಪ್ರಯತ್ನ': IndiGo ಸಿಇಒ ವಿಷಾದ
ಇಂಡಿಗೋ ಏರ್‌ಲೈನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗುರುವಾರ ಕಂಪನಿಯು "ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುವ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

IndiGo: ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದು, 'ಮುಚ್ಕೊಂಡ್ ಮನೆಗೆ ಹೋಗಿ..' 'crew shortage'ಗೆ ಪ್ರಯಾಣಿಕರ ಆಕ್ರೋಶ!
ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿದ್ದಾರೆ.

KIA ನಲ್ಲಿರುವ BESCOM EV ಚಾರ್ಜಿಂಗ್ ಸ್ಟೇಷನ್‌ನಲ್ಲಿ ವಿದ್ಯುತ್ ಸಂಗ್ರಹಕ್ಕೆ ಬಳಸಲ್ಪಟ್ಟ ಬ್ಯಾಟರಿಗಳ ಉಪಯೋಗ!
ಈಗಿರುವ ಬೆಸ್ಕಾಂನ 224ಕೆವಿ ಪವರ್ ಸ್ಟೇಷನ್ ಜಾಗದಲ್ಲಿ ಈ ಬಳಸಿದ ಕಾರು ಬ್ಯಾಟರಿ ಕೇಂದ್ರ ತಲೆ ಎತ್ತಲಿದೆ. ಇದು ವಿಮಾನ ನಿಲ್ದಾಣದ ಪಾರ್ಕಿಂಗ್ ವಲಯದಿಂದ 1.5 ಕಿಮೀ ದೂರದಲ್ಲಿದೆ. ಈ ಕೇಂದ್ರದಲ್ಲಿ ಒಮ್ಮೆಗೆ 24 ವಾಹನಗಳನ್ನು ಚಾರ್ಜ್ ಮಾಡಬಹುದು. ಮೂರು ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸಹ ಇಲ್ಲಿ ಸ್ಥಾಪಿಸಲಾಗುತ್ತಿದೆ.

ಕೊನೆಗೂ ಬಾರದ ಪ್ರಜ್ವಲ್ ರೇವಣ್ಣ: ವಿಮಾನ ನಿಲ್ದಾಣದಲ್ಲಿ ಕಾದು ಸುಸ್ತಾದ SIT ಅಧಿಕಾರಿಗಳು
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಅಶ್ಲೀಲ ವಿಡಿಯೊ ಪ್ರಕರಣದ ಆರೋಪ ಹೊತ್ತು ಜರ್ಮನಿಯಲ್ಲಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ಬಂದಿಲ್ಲ. ನಿನ್ನೆ ಕೊನೆ ಕ್ಷಣದಲ್ಲಿ ಅವರು ಟಿಕೆಟ್ ಬುಕ್ ಮಾಡಿ ಮಧ್ಯರಾತ್ರಿ ವಿಮಾನವೇರಿ ಬೆಂಗಳೂರಿಗೆ ಬರಬೇಕಾಗಿತ್ತು.

ಕೆಂಪೇಗೌಡ ಏರ್ ಪೋರ್ಟ್ ರೈಲುಗಳ ಸಂಚಾರ ಚಿಕ್ಕಬಳ್ಳಾಪುರವರೆಗೆ ವಿಸ್ತರಣೆ: ನೈರುತ್ಯ ರೈಲ್ವೆ
ಸಾರ್ವಜನಿಕರ ಒತ್ತಾಸೆಯ ಮೇರೆಗೆ ನೈರುತ್ಯ ರೈಲ್ವೆ ವಿಭಾಗ ಬೆಂಗಳೂರಿನಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ ಕಡೆಗೆ ಚಲಿಸುವ ಮೂರು ರೈಲುಗಳನ್ನು ಇದೇ ಡಿಸೆಂಬರ್ 11ರಿಂದ ಚಿಕ್ಕಬಳ್ಳಾಪುರದವರೆಗೆ ಹೆಚ್ಚುವರಿ 22 ಕಿ.ಮೀ ವಿಸ್ತರಿಸಿದೆ. ದೇವನಹಳ್ಳಿ ನಿಲ್ದಾಣದಿಂದ ಹೊರಡುವ ಮೂರು ರೈಲುಗಳು ಡಿಸೆಂಬರ್ 11ರಿಂದ ಚಿಕ್ಕಬಳ್ಳಾಪುರದಿಂದ ಸಂಚಾರ ಆರಂಭಿಸಲಿವೆ.

ಬೆಂಗಳೂರು ಬಂದ್ ಎಫೆಕ್ಟ್: 13 ವಿಮಾನ ರದ್ದು, ಪ್ರಯಾಣಿಕರಿಗೆ ಅನಾನುಕೂಲ
ಕಾವೇರಿಗಾಗಿ ಮಂಗಳವಾರ ನಡೆದ ನಡೆದ ಬಂದ್ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ಬರಬೇಕಿದ್ದ 13 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

