ರಾಜ್ಯ

'ಸ್ವಾತಂತ್ರ್ಯ ಬೇಕಿತ್ತು ಅದಕ್ಕೆ ತಂದೆಯನ್ನೆ ಕೊಂದೆ' ಪೊಲೀಸರ ಮುಂದೆ ಹಂತಕಿ ಮಗಳ ತಪ್ಪೊಪ್ಪಿಗೆ

ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

'ಸ್ವಾತಂತ್ರ್ಯ ಬೇಕಿತ್ತು ಅದಕ್ಕೆ ತಂದೆಯನ್ನೆ ಕೊಂದೆ' ಪೊಲೀಸರ ಮುಂದೆ ಹಂತಕಿ ಮಗಳ ತಪ್ಪೊಪ್ಪಿಗೆ
Published On :

ಬೆಂಗಳೂರು: ರಾಜಾಜಿನಗರದ ಬಟ್ಟೆ ವ್ಯಾಪಾರಿ 41 ವರ್ಷದ ಜೈಕುಮಾರ್ ಜೈನ್ ಅವರನ್ನು ಹದಿನಾರರ ಹರೆಯದ ಮಗಳೇ ಪ್ರಿಯಕರನ ಜೊತೆ ಸೇರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾಗಿ ಆಕೆ  ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ

ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಸ್ನೇಹಿತರನ್ನು ಭೇಟಿಯಾಗಲು  ಅವರ ಜೊತೆ ಮಾರುಕಟ್ಟೆಗೆ ಹೋಗಲು ಬಿಡುತ್ತಿರಲಿಲ್ಲ. ಮೊಬೈಲ್ ಪೋನ್ ಕಸಿದುಕೊಂಡು ಮುಚ್ಚಿಟ್ಟಿದ್ದರು. ಇಂಟರ್ ನೆಂಟ್ ನ್ನು ಮಿತವಾಗಿ ಬಳಸುವಂತೆ ಹೇಳುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಿದ್ದಾಗಿ  ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. 

ಪ್ರಿಯಕರ ಪ್ರವೀಣ್ ನನ್ನು ಕದ್ದುಮುಚ್ಚಿ ಭೇಟಿಯಾಗುತ್ತಿದ್ದ ಬಾಲಕಿ ಶನಿವಾರ ಆತನೊಂದಿಗೆ ಸೇರಿ ಆಕೆಯ ತಂದೆ ಜೈಕುಮಾರ್ ಜೈನ್ ನನ್ನು ಕೊಲೆ ಮಾಡಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಜೈಕುಮಾರ್  ಜೈನ್ ಗೆ ಊಟದ ನಂತರ ನಿದ್ದೆ ಮಾತ್ರೆ ಬೆರೆಸಿದ್ದ ಜ್ಯೂಸ್ ಕುಡಿಸಿದ್ದಳು. ನಂತರ ಆತ ಮಲಗಿದ ಎರಡು ಗಂಟೆ ಬಳಿಕ ಪ್ರವೀಣ್ ನನ್ನು ಮನೆಗೆ ಕರೆಸಿಕೊಂಡು, ತಂದೆಗೆ 25 ಕಡೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಮೃತದೇಹವನ್ನು  ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿಗೂಢವಾಗಿ ಕೊಲೆಯಾಗಿದ್ದ  ಜೈಕುಮಾರ್  ಜೈನ್ ಪುತ್ರಿಯ ಪ್ರಿಯಕರ ಬಗ್ಗೆ ಮಾಹಿತಿ ದೊರೆತ ನಂತರ ಆಕೆಯನ್ನು ವಿಚಾರಿಸಿದಾಗ  ತಪ್ಪೊಪ್ಪಿಕೊಂಡಳು ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.