ರಾಜ್ಯ

ಬಸ್ ಡ್ರೈವರ್ ಇಮ್ರಾನ್ ಜತೆ ಪ್ರೀತಿ, ಪ್ರೇಮ: ಮದ್ವೆಯಾದ ಮೂರೇ ವರ್ಷಕ್ಕೆ ಆಶಾ ಅನುಮಾಸ್ಪದ ಸಾವು; ಲವ್ ಜಿಹಾದ್ ಆರೋಪ

ಚಿತ್ರದುರ್ಗ ಜಿಲ್ಲೆ ಹೊಸಯಳನಾಡು ಗ್ರಾಮದ ಆಶಾ, ಶಾಲೆಗೆ ಹೋಗುವಾಗ ಬಸ್‌ ಚಾಲಕ ಇಮ್ರಾನ್ ಪರಿಚಯ ಆಗಿತ್ತು. ಅದೇ ಪರಿಚಯ ಪ್ರೀತಿಗೆ ತಿರುಗಿದ್ದು, ಮನೆಯವರ ವಿರೋಧದ ನಡುವೆ ಇಬ್ಬರು ಮದುವೆ ಆಗಿದ್ದರು.

ಬಸ್ ಡ್ರೈವರ್ ಇಮ್ರಾನ್ ಜತೆ ಪ್ರೀತಿ, ಪ್ರೇಮ: ಮದ್ವೆಯಾದ ಮೂರೇ ವರ್ಷಕ್ಕೆ ಆಶಾ ಅನುಮಾಸ್ಪದ ಸಾವು; ಲವ್ ಜಿಹಾದ್ ಆರೋಪ
ಆಶಾ -ಇಮ್ರಾನ್
Published On :

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸಯಳನಾಡು ಗ್ರಾಮದ 30 ವರ್ಷದ ಆಶಾ(30) ಎಂಬ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಆಶಾ ಮಂಗಳವಾರ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಹಲವು ಅನುಮಾನುಗಳು ವ್ಯಕ್ತವಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಆರೋಪ ಮಾಡಿವೆ.

ಚಿತ್ರದುರ್ಗ ಜಿಲ್ಲೆ ಹೊಸಯಳನಾಡು ಗ್ರಾಮದ ಆಶಾ, ಶಾಲೆಗೆ ಹೋಗುವಾಗ ಬಸ್‌ ಚಾಲಕ ಇಮ್ರಾನ್ ಪರಿಚಯ ಆಗಿತ್ತು. ಅದೇ ಪರಿಚಯ ಪ್ರೀತಿಗೆ ತಿರುಗಿದ್ದು, ಮನೆಯವರ ವಿರೋಧದ ನಡುವೆ ಇಬ್ಬರು ಮದುವೆ ಆಗಿದ್ದರು. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಆಶಾ, ಇಮ್ರಾನ್‌ ದಂಪತಿಗೆ ಎರಡೂವರೆ ವರ್ಷದ ಮಗು ಇದೆ.

ಇಂದು ಆಶಾ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಹಿರಿಯೂರು ಆಸ್ಪತ್ರೆಗೆ ಗಾಬರಿಯಲ್ಲಿ ಕರೆ ತಂದಿದ್ದಾನೆ. ಯಾವಾಗ ಆಕೆ ಪ್ರಾಣ ಬಿಟ್ಟಿದ್ದಾಳೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಇಮ್ರಾನ್ ಅಲ್ಲಿಂದ ಪರಾರಿ ಆಗಿದ್ದಾನೆ ಎಂದು ವರದಿಯಾಗಿದೆ.

ವರದಕ್ಷಿಣೆಗಾಗಿ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆಶಾ ಪೋಷಕರು ಆರೋಪಿಸಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ 1 ಲಕ್ಷ ಹಣ ಕೊಟ್ಟಿದ್ದೆವು. ಇಷ್ಟಾದ್ರೂ ಸುಮ್ಮನಾಗಿಲ್ಲ. ಈಗ ನೇಣುಬಿಗಿದು, ಆತ್ಮಹತ್ಯೆ‌ ಕತೆ ಕಟ್ಟಿ ಎಸ್ಕೇಪ್ ಆಗಿದ್ದಾನೆ ಎಂದು ಆಶಾ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಹಿಂದೂ ಸಂಘಟನೆಗಳು ಇದೊಂದು ಲವ್‌ ಜಿಹಾದ್ ಅಂತಾ ಆರೋಪಿಸಿದ್ದು, ತನಿಖೆ ನಡೆಸಿ ಎಂದು ಹಿರಿಯೂರು ನಗರ ಠಾಣೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಿರಿಯೂರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.