ಬಾಲಕಿ

'ನಾವು ದಲಿತರು ಅಂತ ಹೀಗೆ ಮಾಡೋದಾ ಸರ್?': ಬಾಲಕಿಯ ಪ್ರಶ್ನೆಗೆ ಸಚಿವ ಶಿವಲಿಂಗೇ ಗೌಡ ಗರಂ; Video
ಗ್ರಾಮವೊಂದರಲ್ಲಿ ಮೂಲಸೌಕರ್ಯ ಹಾಗೂ ಇತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಚಿವರ ಮುಂದೆ ಅಹವಾಲು ತೋಡಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಬಾಲಕಿ, ತಮ್ಮ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾ ನಾವು ದಲಿತರು ಅಂತ ಹೀಗೆ ಮಾಡೋದಾ ಸರ್ ಎಂದು ನೇರವಾಗಿ ಪ್ರಶ್ನಿಸಿದ್ದಾಳೆ.

ಕಲಬುರಗಿ: ಮನೆಯಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ
ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಇದೇ ರೀತಿಯ ದಾಳಿಗಳನ್ನು ತಡೆಯಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸ್ಥಳೀಯರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ ಹೇಳಿಕೆ; Video
ಕೈಮುಗಿದು ಕಾಣಿಸಿಕೊಂಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಅದರ ನೈಜತೆಯನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (TNIE) ಸ್ವತಂತ್ರವಾಗಿ ದೃಢೀಕರಿಸಿಲ್ಲ.

ಬೆಂಗಳೂರು: ಬಾಲಕಿ ಮೇಲೆ ನಾಯಿಗಳ ದಾಳಿ; ಉತ್ತರ ನಗರ ಪಾಲಿಕೆಯಿಂದ ಶ್ವಾನ ಹಿಡಿಯುವ ಕಾರ್ಯಾಚರಣೆ!
ಬಾಲಕಿ ನಿರ್ಮಾಣ ಸ್ಥಳದ ಬಳಿಯಲ್ಲಿರುವ ಶೆಡ್‌ನಿಂದ ಹೊರ ಬಂದ ತಕ್ಷಣವೇ ಬೀದಿ ನಾಯಿಗಳ ಗುಂಪೊಂದು ಅವಳ ಮೇಲೆ ಬೆನ್ನಟ್ಟಿ ದಾಳಿ ಮಾಡಿತು. ಆಕೆಯ ಕೂಗು ಕೇಳಿ, ಹತ್ತಿರದ ನಿವಾಸಿಗಳು ನಾಯಿಗಳನ್ನು ಓಡಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

ಬೆಂಗಳೂರಿನಲ್ಲಿ ದಾರುಣ ದುರಂತ: ಗೇಟ್ ಕುಸಿದುಬಿದ್ದು 5 ವರ್ಷದ ಬಾಲಕಿ ಸಾವು..!
ಘಟನೆಯಲ್ಲಿ ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಚಿಕ್ಕಮಗಳೂರು: ಚಂದ್ರದ್ರೋಣ ಬೆಟ್ಟದ ತಪ್ಪಲಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶವವಾಗಿ ಪತ್ತೆ
ಮೊನ್ನೆ ಮಂಗಳವಾರ ಸಂಜೆ ಮಾಣಿಕ್ಯಾಧಾರ ಜಲಪಾತ ವೀಕ್ಷಿಸಲು ಹೋಗುವಾಗ ಬಾಲಕಿ ಕಣ್ಮರೆಯಾಗಿದ್ದಳು.

ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ: ಕಲ್ಲಿನಿಂದ ಜಜ್ಜಿ 4 ವರ್ಷದ ಬಾಲಕಿ ಬರ್ಬರ ಹತ್ಯೆ; ಅತ್ಯಾಚಾರ ಶಂಕೆ..!
ಬಾಲಕಿ ಗುರುವಾರ ಸಂಜೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು. ಪೋಷಕರು ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಪೊಲೀಸರಿಗೆ ದೂರು ನೀಡಿದ್ದರು.

ಶಿರಸಿ: 50 ಅಡಿ ಆಳದ ಬಾವಿಗೆ ಬಿದ್ದ ಎರಡು ವರ್ಷದ ಬಾಲಕಿ; ಪ್ರಾಣದ ಹಂಗು ತೊರೆದು ರಕ್ಷಣೆ; ಯುವಕನ ಸಾಹಸಕ್ಕೆ ಮೆಚ್ಚುಗೆ..!
ಭುವಿ (2) ಎಂಬ ಬಾಲಕಿ ಮನೆಯ ಬಳಿ ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬಾವಿಗೆ ಬಿದ್ದಿದ್ದಾಳೆ. ಮನೆಯವರೆಲ್ಲರೂ ಕೆಲಸದಲ್ಲಿ ಮಗ್ನರಾಗಿದ್ದಾಗ, ಮಗು ಆಟವಾಡುತ್ತಾ ಮುಂಭಾಗದಲ್ಲಿದ್ದ ತೆರೆದ ಬಾವಿಗೆ ಬಿದ್ದಿದೆ.

Ludo ಕಾಯಿನ್ ನುಂಗಿ 8 ವರ್ಷದ ಬಾಲಕಿ ಉಸಿರುಗಟ್ಟಿ ಸಾವು..!
ಶನಿವಾರ ಮಧ್ಯಾಹ್ನ ತಮ್ಮ ಸಹೋದರ ಮತ್ತು ಸಹೋದರಿಯೊಂದಿಗೆ ಲೂಡೋ ಆಟ ಆಡುತ್ತಿದ್ದ ಸಂದರ್ಭದಲ್ಲಿ, ತನುಷ್ಕಾ ಆಟದ ಕಾಯಿನ್'ನ್ನು ಆಕಸ್ಮಿಕವಾಗಿ ನುಂಗಿದ್ದಾಳೆ.

