ಕ್ಯಾನ್ಸರ್ ಗೆ ಕಂಡುಹಿಡಿದಿದ್ದ ಹೊಸ ಔಷಧ ಕೂಡ ಗೆಳೆಯ ಅನಂತ್ ನನ್ನು ಬದುಕಿಸಲಿಲ್ಲ; ಸದಾನಂದ ಗೌಡ
ಶ್ವಾಸಕೋಶ ಕ್ಯಾನ್ಸರ್ ನ್ನು ಗುಣಪಡಿಸಲು ಹೊಸದಾಗಿ ಅಭಿವೃದ್ಧಿಪಡಿಸಿರುವ ವಿಶೇಷ ಔಷಧಿ ಕೇಂದ್ರ ...

ಕಲಬುರಗಿ: ಶ್ವಾಸಕೋಶ ಕ್ಯಾನ್ಸರ್ ನ್ನು ಗುಣಪಡಿಸಲು ಹೊಸದಾಗಿ ಅಭಿವೃದ್ಧಿಪಡಿಸಿರುವ ವಿಶೇಷ ಔಷಧಿ ಕೇಂದ್ರ ಸಚಿವ ಹೆಚ್ ಎನ್ ಅನಂತ್ ಕುಮಾರ್ ಅವರ ಜೀವ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಜಾರಿ ಖಾತೆ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಕಲಬುರಗಿಯಲ್ಲಿ ಶರಣಬಸವೇಶ್ವರ ವಸತಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆ ಗುಣಪಡಿಸಲು ಈ ವರ್ಷ ಕಂಡುಹಿಡಿದ ವಿಶೇಷ ಔಷಧಿ ಮೂಲಕ ಕೂಡ ಅನಂತ್ ಕುಮಾರ್ ಅವರನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ ಎಂದರು.
ಅನಂತ್ ಕುಮಾರ್ ಅವರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದರು. ಮೋದಿ ಸರ್ಕಾರದ ವಿರುದ್ಧ ನಡೆದ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆ ಸಮಯದಲ್ಲಿ ಅವರ ಕೆಲಸವನ್ನು ಮರೆಯಲೇ ಸಾಧ್ಯವಿಲ್ಲ. ಅವರ ಬುದ್ಧಿಮತ್ತೆಯಿಂದಾಗಿ ಅಂದಿನ ಅವಿಶ್ವಾಸ ನಿರ್ಣಯ ಯಾವುದೇ ಅಡೆತಡೆಗಳಿಲ್ಲದೆ ಶಾಂತವಾಗಿ ನಡೆದು ಸರ್ಕಾರದ ಪರ ಹೆಚ್ಚು ವಿಶ್ವಾಸಮತಗಳು ಬಂದವು. ಆ ಸಮಯದಲ್ಲಿ ಅವರು ತಮ್ಮ ಆರೋಗ್ಯವನ್ನು ಅಲಕ್ಷಿಸಿ ಪಕ್ಷಕ್ಕಾಗಿ ದುಡಿದರು ಎಂದರು.
ಆರಂಭದಲ್ಲಿ ಅವರಿಗೆ ನ್ಯುಮೋನಿಯಾಗೆ ಚಿಕಿತ್ಸೆ ನೀಡಲಾಯಿತು. ಮೂರನೇ ಹಂತದಲ್ಲಿದ್ದಾಗ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಬಹು ಅಂಗಾಂಗ ವೈಫಲ್ಯದಿಂದ ಕೂಡ ಅವರು ಬಳಲುತ್ತಿದ್ದರು ಎಂದರು.
10 ದಿನ ಹಿಂದೆ ಅವರನ್ನು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದೆ. ಆದರೆ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ನನ್ನನ್ನು ಗುರುತಿಸಿದರು. ನಾನು ಉತ್ತಮ ಸ್ನೇಹಿತನನ್ನು ಇಂದು ಕಳೆದುಕೊಂಡಿದ್ದೇನೆ, ಇದು ಪಕ್ಷಕ್ಕೆ ತುಂಬಲಾರದ ನಷ್ಟ ಎಂದಿರುವ ಸದಾನಂದ ಗೌಡ ತಮ್ಮ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


