ಔಷಧಿ

ಆಯುಷ್ ಇಲಾಖೆ ಅಡಿಯಲ್ಲಿರುವ ಎಲ್ಲಾ ಔಷಧಿಗಳು FDA ವ್ಯಾಪ್ತಿಗೆ: ರಾಜ್ಯ ಸರ್ಕಾರ
ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಕೇವಲ ಎರಡು ದಿನಗಳಲ್ಲಿ ಹಿಂಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಈ ಹಿಂದೆ, ಒಂದು ಔಷಧವನ್ನು ಗುಣಮಟ್ಟವಲ್ಲ (NSQ) ಎಂದು ಗುರುತಿಸಿದರೆ, ಅದನ್ನು ಔಷಧಾಲಯಗಳು ಮತ್ತು ವಿತರಕರಿಂದ ಹಿಂತಿರುಗಿಸಲು 30 ದಿನಗಳವರೆಗೆ ತೆಗೆದುಕೊಳ್ಳಲಾಗುತ್ತಿತ್ತು.

ಅಸ್ತಮಾ ನಿವಾರಣೆಗೆ ಮಾತ್ರೆ: ಉಚಿತ ಔಷಧಿಗಾಗಿ ಕೊಪ್ಪಳದ ಗ್ರಾಮಕ್ಕೆ ಸಾವಿರಾರು ಜನ ಭೇಟಿ!
ಈ ಔಷಧಿ ಪಡೆಯಲು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಜನರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಅಗತ್ಯ ಔಷಧಗಳ ಬೆಲೆಯಲ್ಲಿ ಶೇ 12.12 ರಷ್ಟು ಹೆಚ್ಚಳ: ಜನೌಷಧಿ ಕೇಂದ್ರಗಳ ಬಳಕೆ ಮಾಡುವಂತೆ ತಜ್ಞರ ಸಲಹೆ
ಅಗತ್ಯ ಔಷಧಗಳ ಬೆಲೆಯನ್ನು ಶೇ 12.12 ರಷ್ಟು ಏರಿಕೆ ಮಾಡಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಸೋಮವಾರ ಅನುಮೋದನೆ ನೀಡಿದ್ದು, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳ ಖರೀದಿ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಭಾರತ ಸಿದ್ಧಪಡಿಸಿದ ಕೆಮ್ಮಿನ ಸಿರಪ್‌ನಿಂದ 18 ಮಕ್ಕಳ ಸಾವು: ಗ್ಯಾಂಬಿಯಾ ಬಳಿಕ ಇದೀಗ ಉಜ್ಬೇಕಿಸ್ತಾನದಿಂದ ಆರೋಪ
ಕಳೆದ ಕೆಲ ತಿಂಗಳ ಹಿಂದೆ ಗ್ಯಾಂಬಿಯಾ ದೇಶದ ಸುಮಾರು 70 ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಕಾರಣ ಎಂದು ಆರೋಪ ಮಾಡಲಾಗಿತ್ತು. ಇದೀಗ ಉಜ್ಬೇಕಿಸ್ತಾನವೂ ಕೂಡ ಇದೇ ರೀತಿಯ ಆರೋಪವೊಂದನ್ನು ಮಾಡಿದೆ.

ಪತಂಜಲಿ ಉತ್ಪನ್ನ ಸೇರಿ 16 ಭಾರತೀಯ ಕಂಪನಿಗಳ ಔಷಧಿ ಆಮದು ನಿಷೇಧಿಸಿದ ನೇಪಾಳ
ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧೀಯ ಕಂಪನಿಗಳ ಔಷಧಗಳ ಆಮದನ್ನು ನೇಪಾಳ ನಿಷೇಧಿಸಿದೆ.

ಔಷಧ ಸೇವನೆಗಿಂತ ಜೀವನಶೈಲಿ ಬದಲಾವಣೆ ಪರಿಣಾಮಕಾರಿ (ಕುಶಲವೇ ಕ್ಷೇಮವೇ)
ಸಾಮಾನ್ಯವಾಗಿ ಒಂದು ವರ್ಷಕ್ಕೆ ಜನರು ವೈದ್ಯರ ಫೀಸು ಕಟ್ಟುತ್ತಾ ಔಷಧಿಗಳನ್ನು ನುಂಗಲು ಕೊಡುವಷ್ಟು ಗಮನ ತಮ್ಮ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ತಂದುಕೊಂಡು ಆರೋಗ್ಯಕರವಾಗಿ ಇರಲು ಕೊಡದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

ಬ್ಲ್ಯಾಕ್ ಫಂಗಸ್ ಔಷಧಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಹೈಕೋರ್ಟ್
ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಔಷಧದ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಜೀವ ರಕ್ಷಕ ಔಷಧಿ, ವೈದ್ಯಕೀಯ ಸಲಕರಣೆಗಳ ಮೇಲಿನ ಜಿಎಸ್'ಟಿ ರದ್ದುಪಡಿಸಿ: ಕೇಂದ್ರಕ್ಕೆ ಪ್ರಿಯಾಂಕಾ ಗಾಂಧಿ ಆಗ್ರಹ
ಕೊರೋನಾ ಸಾಂಕ್ರಾಮಿಕ ರೋಗ ವಿರುದ್ಧ ಹೋರಾಡಲು ಬಳಕೆ ಮಾಡುತ್ತಿರುವ ಔಷಧಿಗಳು, ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ರದ್ದುಪಡಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಆಗ್ರಹಿಸಿದ್ದಾರೆ.

ಕೊರೋನಾ ವಿರುದ್ಧ ಹೋರಾಡಲು ಮತ್ತಷ್ಟು ಬಲ: ಮೈಸೂರು ಮೂಲದ ಸಂಸ್ಥೆಯಿಂದ ಔಷಧಿ ಅಭಿವೃದ್ಧಿ!
ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದ್ದು, ಈ ನಡುವಲ್ಲೇ ಮೈಸೂರು ಮೂಲಕ ಕಂಪನಿಯೊಂದು ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಔಷಧಿಯೊಂದನ್ನು ಅಭಿವೃದ್ಧಿಪಡಿಸಿದೆ. ಇದೊಂದು ಮೌಖಿಕ (ಓರಲ್) ಔಷಧಿಯಾಗಿದೆ ಎಂದು ತಿಳಿದುಬಂದಿದೆ.

