ಕೊರೋನಾ ವಿರುದ್ಧ ಹೋರಾಡಲು ಮತ್ತಷ್ಟು ಬಲ: ಮೈಸೂರು ಮೂಲದ ಸಂಸ್ಥೆಯಿಂದ ಔಷಧಿ ಅಭಿವೃದ್ಧಿ!
ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದ್ದು, ಈ ನಡುವಲ್ಲೇ ಮೈಸೂರು ಮೂಲಕ ಕಂಪನಿಯೊಂದು ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಔಷಧಿಯೊಂದನ್ನು ಅಭಿವೃದ್ಧಿಪಡಿಸಿದೆ. ಇದೊಂದು ಮೌಖಿಕ (ಓರಲ್) ಔಷಧಿಯಾಗಿದೆ ಎಂದು ತಿಳಿದುಬಂದಿದೆ.

ಮೈಸೂರು: ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದ್ದು, ಈ ನಡುವಲ್ಲೇ ಮೈಸೂರು ಮೂಲಕ ಕಂಪನಿಯೊಂದು ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಔಷಧಿಯೊಂದನ್ನು ಅಭಿವೃದ್ಧಿಪಡಿಸಿದೆ. ಇದೊಂದು ಮೌಖಿಕ (ಓರಲ್) ಔಷಧಿಯಾಗಿದೆ ಎಂದು ತಿಳಿದುಬಂದಿದೆ.
ಡಿಆರ್'ಎಂ ಇನ್ನೋವೇಶನ್ಸ್ ಕೃತಕ ಬುದ್ಧಿಮತ್ತೆಯನ್ನು ಬಳಸಿ ಈ ಔಷಧಿಯನ್ನು ಅಭಿವೃದ್ಧಿ ಪಡಿಸಿದೆ. ಡಿಆರ್ಎಂ ಎಂಡಿ ಡಾ.ಮಂಜುನಾಥ್ ಬಿ.ಹೆಚ್ ನೇತೃತ್ವದ ತಜ್ಞರ ತಂಡ ಈ ಔಷಧಿಯನ್ನು ಅಭಿವೃದ್ಧಿಪಡಿಸಿದೆ.
ರಾಸಾಯನಿಕ ಜೀವಶಾಸ್ತ್ರದ ಪ್ರಯೋಗಾಲಯ, ಮೈಸೂರು ವಿಶ್ವವಿದ್ಯಾಲಯದ ಸಾವಯವ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಬಸಪ್ಪ ಮತ್ತು ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರೊಫೆಸರ್ ಮಹೇಶ್ ಪಿಎ ಅವರು ಔಷಧಿಯನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಔಷಧಿಯು ಕೋಶ ಆಧಾರಿತ ವ್ಯವಸ್ಥೆಗಳಲ್ಲಿ ವೈರಸ್ ಅನ್ನು ಕೊಲ್ಲುವಲ್ಲಿ ಉತ್ತಮ ಪ್ರತಿಬಂಧಕ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಲಾಗುತ್ತಿದ್ದು, ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಡಾ. ಪ್ರಿಯಾ ಅಬ್ರಹಾಂ, ಡಾ. ಅನಿತಾ ಶೇಟ್ ಮತ್ತು ಡಾ. ಪ್ರಜ್ಞಾ ಜಾಧವ್ ಅವರ ಅಧ್ಯಯನಗಳು ಇದನ್ನು ದೃಢಪಡಿಸಿದೆ.
ಮೈಸೂರಿನ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಪ್ರಾಣಿ ಅಧ್ಯಯನದ ಪ್ರಾಂಶುಪಾಲರಾದ ಡಾ.ಪ್ರಮೋದ್ ಕುಮಾರ್ ಮತ್ತು ಸಂಶೋಧನಾ ಮುಖ್ಯಸ್ಥ ಶರವಣ ಬಾಬು ಅವರು ಈ ಔಷಧವನ್ನು ಮೌಖಿಕವಾಗಿ ನೀಡಬಹುದು ಎಂದು ದೃಢಪಡಿಸಿದ್ದಾರೆ.
ಈ ಔಷಧಿಯು ರಕ್ತ-ಮಿದುಳಿನ ತಡೆಗೋಡೆ ದಾಟುವ ಸಾಮರ್ಥ್ಯವನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಕೊರೋನಾ ಸೋಂಕಿತರು ನರವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ರೆಮ್ಡೆಸಿವಿರ್ ಔಷಧಿ ಆ ತಡೆಗೋಡೆಯನ್ನು ದಾಟುವ ಸಾಮರ್ಥ್ಯವನ್ನು ಹೊಂದಿಲ್ಲ. ನಾವು ಅಭಿವೃದ್ಧಿಪಡಿಸಿರುವ ಈ ಔಷಧಿಯು ಮಾನವನ ಮೇಲೆ ಪ್ರಯೋಗಕ್ಕೆ ಹೋಗಲು ಸಿದ್ಧವಿದೆ ಎಂದು ಡಾ.ಮಂಜುನಾಥ್ ಬಿ.ಹೆಚ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


