ಹೆಚ್'ಡಿಕೆ ಪ್ರಮಾಣ ವಚನ: ವಿಐಪಿಗಳ ಒಂದು ಟೀ, ಕಾಫಿಗಾಗಿ ರೂ.1,450 ಖರ್ಚು ಮಾಡಿದ್ದ ಸರ್ಕಾರ!
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಮಾರಂಭಕ್ಕೆ ಬಂದಿದ್ದ ವಿಐಪಿಗಳ ಒಂದು ಟೀ, ಕಾಫಿಗೆ ಹೆಚ್.ಡಿ.ಕುಮಾರಸ್ವಾಮಿಯವರು ಬರೋಬ್ಬರಿ ರೂ.1,450 ಖರ್ಚು ಮಾಡಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ...

Published On :
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಮಾರಂಭಕ್ಕೆ ಬಂದಿದ್ದ ವಿಐಪಿಗಳ ಒಂದು ಟೀ, ಕಾಫಿಗೆ ಹೆಚ್.ಡಿ.ಕುಮಾರಸ್ವಾಮಿಯವರು ಬರೋಬ್ಬರಿ ರೂ.1,450 ಖರ್ಚು ಮಾಡಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ರಾಜ್ಯದ ವಿಧಾನಸಭೆ ಚುನಾವಣಾಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದ ಬಳಿಕ ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. ನಂತರ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಿಂದಾಗಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು.
ಮೇ.23 ರಂದು ಹೆಚ್.ಡಿ.ಕುಮಾರಸ್ವಾಮಿಯವರು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿವಿಧ ರಾಜ್ಯಗಳ ರಾಜಕೀಯ ಪಕ್ಷಗಳ ನಾಯಕರು ಅತಿಥಿಗಳಾಗಿ ಆಗಮಿಸಿದ್ದರು.
ಸುಮಾರು 300 ಅಧಿಕಾರಿಗಳು ಸಮಾರಂಭಕ್ಕೆ ಆಗಮಿಸಿದ್ದರು. 300 ಅತಿಥಿಗಳಲ್ಲಿ ಒಬ್ಬೊಬ್ಬ ಅತಿಥಿಗಳಿಗೆ ನೀಡಲಾಗಿದ್ದ ಟೀ, ಕಾಫಿಗಳಿಗೆ ಬರೋಬ್ಬರಿ ರೂ.1,450 ಖರ್ಚು ಮಾಡಲಾಗಿದ್ದು, ಒಟ್ಟಾರೆ ಬಿಲ್ ಮೊತ್ತ ರೂ.4.35ಲಕ್ಷವಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಟೀ ಹಾಗೂ ಕಾಫಿಗಳ ಜೊತೆಗೆ ತಿಂಡಿ, ತಿನಿಸುಗಳನ್ನು ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಕುಮಾರಸ್ವಾಮಿಗೂ ಮುನ್ನ ಬಿ.ಎಸ್.ಯಡಿಯೂರಪ್ಪ ಅವರೂ ಕೂಡ ಮೇ.17ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಈ ವೇಳೆ ಸಮಾರಂಭಕ್ಕೆ ಆಗಮಿಸಿದ್ದ ಒಬ್ಬೊಬ್ಬ ಅತಿಥಿಗಳ ಟೀ, ಕಾಫಿಗಳಿಗೆ ರೂ.530 ಖರ್ಚು ಮಾಡಲಾಗಿತ್ತು. ಒಟ್ಟಾರೆ ವೆಚ್ಚ ರೂ.15.93 ಲಕ್ಷವಾಗಿತ್ತು. ಸಮಾರಂಭದಲ್ಲಿ ಒಬ್ಬೊಬ್ಬ ಸಚಿವರ ಟೀ, ಕಾಫಿಗಳಿಗೆ ರೂ.360 ಖರ್ಚಾಗಿದ್ದು, ಒಟ್ಟಾರೆ ರೂ.12.74ಲಕ್ಷ ವೆಚ್ಚವಾಗಿದೆ. ಈ ಮೂರು ಸಮಾರಂಭ ಹಾಗೂ ಕಾರ್ಯಕ್ರಗಳಿಗೂ ಒಟ್ಟಾರೆ ವೆಚ್ಚ ರೂ.33.02 ಲಕ್ಷವೆಚ್ಚವಾಗಿದೆ.
ಸಮಾರಂಭಗಳ ಖರ್ಚು, ವೆಚ್ಚಗಳಲ್ಲಿ ಹಗರಣಗಳು ನಡೆದಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಆರ್'ಟಿಐ ಕಾರ್ಯಕರ್ತ ನರಸಿಂಹ ಮೂರ್ತಿಯವರು ಭ್ರಷ್ಟ್ರಾಚಾರ ನಿಗ್ರಹ ದಳ ಅಥವಾ ಲೋಕಾಯುಕ್ತ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಈಗಾಗಲೇ ಆರ್'ಟಿಐ ನಿಂದ ಖರ್ಚು, ವೆಚ್ಚಗಳ ಮಾಹಿತಿಗಳನ್ನು ಪಡೆದಿರುವ ಮೂರ್ತಿಯವರು ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ಮೊರೆ ಹೋಗಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಮೂರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವ್ಯಯ ಮಾಡಿರುವ ಪ್ರತೀಯೊಂದು ತಿನಿಸು ಹಾಗೂ ವಸ್ತುಗಳ ವೆಚ್ಚ ಕುರಿತ ಮಾಹಿತಿ ಕೇಳಲಾಗಿತ್ತು. ಆದರೆ, ಅತಿಥಿ ಗೃಹದ ಆಡಳಿತ ಮಂಡಳಿಯವರು ನಿರಾಕರಿಸಿದ್ದಾರೆ. ಸರ್ಕಾರ ಖರ್ಚು ವೆಚ್ಚಗಳ ಕುರಿತ ಮಾಹಿತಿಗಳನ್ನು ಮರೆಮಾಚುತ್ತಿದೆ ಎಂದು ನರಸಿಂಹ ಮೂರ್ತಿಯವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnatakaಕರ್ನಾಟಕChief Ministerಮುಖ್ಯಮಂತ್ರಿHD KumaraswamyCoffeeಸಮಾರಂಭವೆಚ್ಚಪ್ರಮಾಣವಚನTeaexpenditureಹೆಚ್.ಡಿ.ಕುಮಾರಸ್ವಾಮಿಕಾಫಿಟೀswearing Ceremony
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


