ರಾಜ್ಯ

ಬೃಹತ್ ಗಾತ್ರದ ಹನುಮನ ಪ್ರತಿಮೆ ಸಾಗಿದ ದಾರಿಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಸಂಚಾರ ಅಸ್ತವ್ಯಸ್ತ

ವಿಶ್ವದಲ್ಲಿಯೇ ಅತಿ ಉದ್ದದ 750 ಟನ್ ತೂಕದ 62 ಅಡಿ ಎತ್ತರದ ಹನುಮನ ಮೂರ್ತಿ ನಗರದ ಮೂಲಕ ಸಾಗಿದ ಹಿನ್ನೆಲೆಯಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿನ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದರೆ, ಒಳಚರಂಡಿ ವ್ಯವಸ್ಥೆ ಕಟ್ಟಿಕೊಂಡು ನಗರದ ರಸ್ತೆಗಳು ಹಾನಿಗೊಳ್ಳಗಾಗಬೇಕಾಯಿತು.

ಬೃಹತ್ ಗಾತ್ರದ ಹನುಮನ ಪ್ರತಿಮೆ ಸಾಗಿದ ದಾರಿಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಸಂಚಾರ ಅಸ್ತವ್ಯಸ್ತ
ಬೃಹತ್ ಗಾತ್ರದ ಹನಮನ ಪ್ರತಿಮೆ
Published On :

ಬೆಂಗಳೂರು: ವಿಶ್ವದಲ್ಲಿಯೇ ಅತಿ ಎತ್ತರದ 750 ಟನ್ ತೂಕದ 62 ಅಡಿ ಉದ್ದದ ಹನುಮನ ಮೂರ್ತಿ ನಗರದ ಮೂಲಕ ಸಾಗಿದ ಹಿನ್ನೆಲೆಯಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿನ  ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದರೆ, ರಸ್ತೆಗಳಲ್ಲಿ ಗುಂಡಿ ಬಿದ್ದು, ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುವಂತಾಯಿತು.

ಕೋಲಾರದ ಮೂಲಕ ಇದನ್ನು ತರಲಾಗಿದ್ದು, ಬಿಬಿಎಂಪಿ ಅನುಮತಿ ಪಡೆದು 300 ಚಕ್ರದ ಟ್ರಕ್ ನಲ್ಲಿ ಈ ಮೂರ್ತಿಯನ್ನು ಗೆದ್ದಲಹಳ್ಳಿಗೆ ಸಾಗಿಸಲಾಯಿತು. ಮುಂದಿನ ವರ್ಷದ ರಾಮನವಮಿಗೂ ಮುಂಚಿತವಾಗಿ ಏಪ್ರಿಲ್ ತಿಂಗಳೊಳಗೆ ಈ ಪ್ರತಿಮೆಯನ್ನು ಹೆಣ್ಣೂರು ಮುಖ್ಯರಸ್ಥೆಯ ರೈಲ್ವೆ ಸೇತುವೆ ಮುಂಭಾಗ  ಪ್ರತಿಷ್ಠಾಪಿಸಲಾಗುತ್ತಿದೆ.

 ಗೆದ್ದಲಹಳ್ಳಿ ನಿವಾಸಿ ಮುಕುಂದ್ ಸುಬ್ರಹ್ಮಣ್ಯ ಪ್ರಕಾರ, ಪ್ರತಿಮೆ ಸಾಗಿಸಿದ ಕಾಚರಕನಹಳ್ಳಿ ಲಿಂಗರಾಜಪುರಂ ಮುಖ್ಯ ರಸ್ತೆಯಲ್ಲಿ  5 ವಿದ್ಯುತ್ ಕಂಬಗಳು ನೆಲಕ್ಕುರಳಿ ಬಿದ್ದರೆ,  ರಸ್ತೆಯಲ್ಲಿ ಎರಡು ಅಡಿ ಉದ್ದ ಗುಂಡಿ ಬಿದ್ದಿವೆ ಎಂದು ತಿಳಿಸಿದರು.

62 ಅಡಿ ಉದ್ದದ 750 ಟನ್ ತೂಕದ ಬೃಹತ್ ಹನಮನ ಪ್ರತಿಮೆಯನ್ನು ನಿನ್ನೆ ದಿನ ಹೆಚ್ ಬಿಆರ್ ಲೇಔಟ್ ನ ಮುಖ್ಯರಸ್ತೆಯ ಕಾಚರಕನಹಳ್ಳಿ ಮೂಲಕ ಸಾಗಿಸಲಾಗಿತ್ತು. ಇದರಿಂದಾಗಿ ಹೆಣ್ಣೂರು ಮುಖ್ಯರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.

 ಈ ಪ್ರತಿಮೆ ಸಾಗಿಸಲು ಶ್ರೀ ರಾಮ ಚೈತನ್ಯ ವರ್ಧಿನಿ ಟ್ರಸ್ಟ್ ಅನುಮತಿ ಪಡೆದಿರುವುದಾಗಿ ಬಿಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಮೂರ್ತಿ ಸಾಗಿಸುವ ರಸ್ತೆಯಲ್ಲಿ ಹಾನಿ ಸಂಭವಿಸಿದ್ದರೆ ದುರಸ್ತಿ ಮಾಡಿಸಿಕೊಡುವ ಜವಾಬ್ದಾರಿ ಟ್ರಸ್ಟ್ ನವರದಾಗಿರುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.