ಬೆಂಗಳೂರಿನಾದ್ಯಂತ ಭಾರಿ ಮಳೆ, ಜನಜೀವನ ಅಸ್ತವ್ಯಸ್ಥ!
ಕಳೆದೆರಡು ದಿನಗಳಿಂದ ಶಾಂತವಾಗಿದ್ದ ಮಳೆರಾಯ ಭಾನುವಾರ ರಾತ್ರಿ ಮತ್ತೆ ಅಬ್ಬರಿಸಿದ್ದು, ತಡರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನಜೀವನ ತೀವ್ರ ಅಸ್ತವಸ್ತವಾಗಿದೆ.

Published On :
ಬೆಂಗಳೂರು: ಕಳೆದೆರಡು ದಿನಗಳಿಂದ ಶಾಂತವಾಗಿದ್ದ ಮಳೆರಾಯ ಭಾನುವಾರ ರಾತ್ರಿ ಮತ್ತೆ ಅಬ್ಬರಿಸಿದ್ದು, ತಡರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನಜೀವನ ತೀವ್ರ ಅಸ್ತವಸ್ತವಾಗಿದೆ.
ಬೆಂಗಳೂರಿನ ಹೃದಯಭಾಗ ಜಯನಗರ, ಸದಾಶಿವ ನಗರವೂ ಸೇರಿದಂತೆ ಲಾಲ್ಬಾಗ್, ವಿಲ್ಸನ್ಗಾರ್ಡನ್, ಕಾರ್ಪೋರೇಷನ್, ಮೆಜೆಸ್ಟಿಕ್ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಗರದ ಬಹುತೇಕ ಅಂಡರ್ ಪಾಸ್ ಗಳು ಜಲಾವೃತ್ತಗೊಂಡಿವೆ. ಇದಲ್ಲದೆ ವಿಜಯನಗರ, ಮೈಸೂರು ರಸ್ತೆ, ಮೇಕ್ರಿಸರ್ಕಲ್, ಬಸವನಗುಡಿ, ಶಿವಾನಂದ ಸರ್ಕಲ್, ಶಾಂತಿನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಪ್ರದೇಶಗಳು ಮಳೆಯಿಂದಾಗಿ ಜಲಾವೃತ್ತಗೊಂಡಿವೆ.
ಮೆಜೆಸ್ಟಿಕ್ ಅಣ್ಣಮ್ಮ ದೇವಿ ದೇಗುಲದ ಗರ್ಭಗುಡಿಗೆ ನುಗ್ಗಿದ ನೀರು, ಪೂಜೆ ತಾತ್ಕಾಲಿಕ ಸ್ಥಗಿತ
ಇತ್ತ ಬೆಂಗಳೂರಿನ ಮೆಜೆಸ್ಚಿಕ್ ಪ್ರದೇಶದಲ್ಲಿರುವ ಐತಿಹಾಸಿಕ ಅಣ್ಣಮ್ಮ ದೇವಿ ದೇಗುಲದ ಗರ್ಭಗುಡಿಗೆ ಮಳೆ ನೀರು ನುಗ್ಗಿದ್ದು, ದೇಗುಲದ ಪೂಜಾ ಕೈಂಕರ್ಯ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ದೇಗುಲದ ಅವರಣದಲ್ಲಿ ಸುಮಾರು 1 ಅಡಿಗಳ ವರೆಗೂ ಮಳೆ ನೀರು ನಿಂತಿದ್ದು, ಇದಲ್ಲದೇ ಒಳಚರಂಡಿ ನೀರು ಕೂಜ ಆವರಣದಲ್ಲಿ ನಿಂತಿರುವುದರಿಂದ ದೇಗುಲದಲ್ಲಿ ದುರ್ವಾಸನೆ ಬೀರುತ್ತಿದೆ. ಪ್ರಸ್ತುತ ದೇಗುಲಕ್ಕೆ ಅಗಮಿಸಿರುವ ಬಿಬಿಎಂಪಿ ಸಿಬ್ಬಂದಿ ನೀರನ್ನು ಹೊರ ಹಾಕುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಕಳೆದವಾರ ಓರ್ವ ಯುವಕ ಕೊಚ್ಚಿ ಹೋಗಿ ಸಾವಿಗೀಡಾಗಿದ್ದ ಶೇಷಾದ್ರಿಪುರಂ ಅಂಡರ್ ಪಾಸ್ ಕೂಡ ನಿನ್ನೆ ಜಲಾವೃತ್ತವಾಗಿತ್ತು. ಇಲ್ಲಿ ಅಧಿಕಾರಿಗಳು ಮುಂಜಾಗ್ರತೆ ವಹಿಸಿ ಅಂಡರ್ ಪಾಸ್ ಬಳಿ ಬ್ಯಾರಿಕೇಡ್ ಹಾಕಿದ್ದರು. ಅಂಡರ್ ಪಾಸ್ ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ ನಿನ್ನೆ ಎರಡು ಕಾರುಗಳು ಅಂಡರ್ ಪಾಸ್ ಕೆಳಗೆ ಸಿಲುಕಿಕೊಂಡಿದ್ದವು. ಬಳಿಕ ಜೆಸಿಬಿ ಸಹಾಯದಿಂದ ಕಾರುಗಳನ್ನು ಹೊರ ತೆಗೆಯಲಾಯಿತು.
ಮಳೆ ಪ್ರಭಾವದಿಂದಾಗಿ ಬಿಬಿಎಂಪಿ ಕೇಂದ್ರ ಕಚೇರಿಗೆ ಸಾವಿರಾರು ದೂರುಗಳು ಬಂದಿವೆ ಎಂದು ತಿಳಿದುಬಂದಿದೆ.
ಮಳೆ ಪ್ರಭಾವದಿಂದಾಗಿ ಬಿಬಿಎಂಪಿ ಕೇಂದ್ರ ಕಚೇರಿಗೆ ಸಾವಿರಾರು ದೂರುಗಳು ಬಂದಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


