ಎರಡು ರಾಜ್ಯಗಳ ಕಾವೇರಿ ಹೋರಾಟ: ಎರಡು ವಧುಗಳ ಮದುವೆ ಕಥೆ
ಕಾವೇರಿ ಗಲಭೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸರು 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು,...

ಹೊಸೂರು: ಕಾವೇರಿ ಗಲಭೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸರು 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಇದರ ಬಿಸಿ ಮದುವೆಗೆ ತಯಾರಾಗಿದ್ದ ವಧು ವರರಿಗೂ ತಟ್ಟಿದೆ.
ರಂಜಿತ್ ಮತ್ತು ಸೌಮ್ಯ ಬುಧವಾರ ಬೆಳಗ್ಗೆ ಕರ್ನಾಟಕದಲ್ಲೇ ವಿವಾಹ ನಡೆಯಬೇಕಿತ್ತು.ಆದರೆ ಬೆಂಗಳೂರಿನಲ್ಲಿ ಉಂಟಾದ ಕಾವೇರಿ ಗಲಾಟೆಯಿಂದಾಗಿ ಇಲ್ಲಿ ಮದುವೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ತಮ್ಮ ಮದುವೆಯನ್ನು ತಮಿಳುನಾಡಿನಲ್ಲೇ ಮಾಡಿಕೊಳ್ಳಲು ಯೋಜಿಸಿದ್ದರು. ಆದರೆ ತಮ್ಮ ಊರಿಗೆ ತೆರಳಲು ಬಸ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಜೆಸಿ ನಗರದಿಂದ ಅತ್ತಿಬೆಲೆ ವರೆಗೂ ಬಸ್ ನಲ್ಲಿ ಬಂದ ಜೋಡಿ, ಅಲ್ಲಿಂದ ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ವರೆಗೂ ಆಟೋದಗಲ್ಲಿ ಬಂದು, ಅಲ್ಲಿಂದ ಸುಮಾರು 300 ಮೀಟರ್ ವರೆಗೂ ಬಸ್ ಗಾಗಿ ನಡೆದು ಕೊಂಡೇ ಸಾಗಿದ ದೃಶ್ಯ ಕಂಡು ಬಂತು. ನಂತರ ಕರ್ನಾಟಕ ಗಡಿ ದಾಟಿ ತಮಿಳುನಾಡು ಬಸ್ ನಿಲ್ದಾಣಕ್ಕೆ ಸೇರಿ ಅಲ್ಲಿಂದ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು.
ಇನ್ನೂ ಮತ್ತೊಬ್ಬ ವಧು ಪ್ರೇಮ ಎಂಬಾಕೆಗೆ ವಿವಾಹ ನಿಶ್ಚಯವಾಗಿದ್ದು, ಬುಧುವಾರ ತಮಿಳುನಾಡಿನ ವಾನಿಯಂಬಾಡಿಯಲ್ಲಿ ಮದುವೆ ಏರ್ಪಾಡಿಗಿತ್ತು. ಆಕೆ ಬೆಂಗಳೂರಿನಿಂದ ತಮಿಳುನಾಡಿಗೆ ತೆರಳಲು ಹರಸಾಹಸ ಪಡಬೇಕಾಯಿತು. ಯಾವುದೇ ವಾಹನ ಸಿಗದ ಕಾರಣ ಪ್ರೇಮಾ ಕರ್ನಾಟಕ- ತಮಿಳುನಾಡು ಬಾರ್ಡರ್ ವರೆಗೂ ನಡೆದುಕೊಂಡೇ ಸಾಗಬೇಕಾದ ಅನಿವಾರ್ಯತೆ ಎದುರಾಯಿತು.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಹೋರಾಟದಿಂದಾಗಿ ವಧು ವರರಿಗೂ ಬಿಸಿ ಮುಟ್ಟಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


