ಟಿಕ್‌ಟಾಕ್ ನಿಂದ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಪರೀಕ್ಷೆ!
ಟಿಕ್‌ಟಾಕ್ ಮಾಲೀಕ ಬೈಟ್‌ಡ್ಯಾನ್ಸ್ ಇಂಕ್, ಈಗ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಅನ್ನು ಪರೀಕ್ಷಿಸುತ್ತಿದೆ. ಏಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಹೊಸ ಅಪ್ಲಿಕೇಶನ್ ರೆಸ್ಸೊ ಲಭ್ಯವಿದೆ.

ಟಿಕ್‌ಟಾಕ್ ಯುವ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ನೆಚ್ಚಿನದಾಗಿದೆ. ಡ್ಯಾನ್ಸ್ ನಿಂದ ಕಿರು ನಟನೆ ತುಣುಕುಗಳವರೆಗೆ, ಅಭಿಮಾನಿಗಳು ಯಾವಾಗಲೂ ಅಪ್ಲಿಕೇಶನ್‌ನಲ್ಲಿ ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಇತರ ಸಾಮಾಜಿಕ ಮಾಧ್ಯಮ ಜಾಲಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಟಿಕ್‌ಟಾಕ್ ಮಾಲೀಕ ಬೈಟ್‌ಡ್ಯಾನ್ಸ್ ಇಂಕ್, ಈಗ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಅನ್ನು ಪರೀಕ್ಷಿಸುತ್ತಿದೆ. ಏಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಹೊಸ ಅಪ್ಲಿಕೇಶನ್ ರೆಸ್ಸೊ ಲಭ್ಯವಿದೆ.
ಸೆನ್ಸಾರ್ ಟವರ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಆರು ತಿಂಗಳ ಹಿಂದೆ ಪ್ರಾರಂಭವಾದಾಗಿನಿಂದ, ರೆಸ್ಸೊವನ್ನು ಐಒಎಸ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ನಾದ್ಯಂತ ಸುಮಾರು 27,000 ಬಳಕೆದಾರರು ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಬೀಜಿಂಗ್ ಮೂಲದ ಈ ಕಂಪನಿಯು ಭಾರತದ ಟಿ-ಸೀರೀಸ್ ಮತ್ತು ಟೈಮ್ಸ್ ಮ್ಯೂಸಿಕ್ ನಿಂದ ಹಕ್ಕುಗಳನ್ನು ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


