ಮೆಂತ್ಯೆ ಸೊಪ್ಪಿನಿಂದ ಮಾಡಿ ನೋಡಿ ಈ ಟೇಸ್ಟಿ ಮೊಟ್ಟೆ ಫ್ರೈ: ರುಚಿ ಮರೆಯೋಕೆ ಆಗಲ್ಲ!
ಮೆಂತ್ಯೆ ಸೊಪ್ಪಿನಿಂದ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಮಾಡುವ ಪಲ್ಯದ ಬದಲು ಮೊಟ್ಟೆ ಜೊತೆ ಸೇರಿಸಿ ರುಚಿಯಾದ ಫ್ರೈ ಮಾಡಿ ನೋಡಿ. ಮೆಂತ್ಯೆ ಸೊಪ್ಪಿನ ಪರಿಮಳ, ಮಸಾಲೆಗಳ ರುಚಿ ಹಾಗೂ ಮೊಟ್ಟೆಯ ಸವಿರುಚಿ ಒಟ್ಟಾಗಿ ಸೇರಿ ಈ ಖಾದ್ಯವನ್ನು ಮತ್ತಷ್ಟು ವಿಶೇಷವಾಗಿಸುತ್ತದೆ.

ಮೆಂತ್ಯೆ ಸೊಪ್ಪಿನಿಂದ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಮಾಡುವ ಪಲ್ಯದ ಬದಲು ಮೊಟ್ಟೆ ಜೊತೆ ಸೇರಿಸಿ ರುಚಿಯಾದ ಫ್ರೈ ಮಾಡಿ ನೋಡಿ. ಮೆಂತ್ಯೆ ಸೊಪ್ಪಿನ ಪರಿಮಳ, ಮಸಾಲೆಗಳ ರುಚಿ ಹಾಗೂ ಮೊಟ್ಟೆಯ ಸವಿರುಚಿ ಒಟ್ಟಾಗಿ ಸೇರಿ ಈ ಖಾದ್ಯವನ್ನು ಮತ್ತಷ್ಟು ವಿಶೇಷವಾಗಿಸುತ್ತದೆ.
ಬೆಳಗಿನ ಉಪಾಹಾರಕ್ಕಾಗಲಿ, ಮಧ್ಯಾಹ್ನದ ಊಟಕ್ಕಾಗಲಿ ಅಥವಾ ರಾತ್ರಿ ಊಟಕ್ಕಾಗಲಿ ಸುಲಭವಾಗಿ ತಯಾರಿಸಬಹುದಾದ ಈ ಮೆಂತ್ಯೆಸೊಪ್ಪಿನ ಮೊಟ್ಟೆ ಫ್ರೈ ಅನ್ನ, ಚಪಾತಿ ಮತ್ತು ರೊಟ್ಟಿಯೊಂದಿಗೆ ಸವಿಯಲು ಹೇಳಿ ಮಾಡಿಸಿದ ಖಾದ್ಯ.
ಬೇಕಾಗುವ ಪದಾರ್ಥಗಳು...
ಮೊಟ್ಟೆ – 4
ಮೆಂತ್ಯೆ ಸೊಪ್ಪು – 1 ಕಟ್ಟು
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸಿನಕಾಯಿ – 2
ಬೆಳ್ಳುಳ್ಳಿ – 4 ಎಸಳು
ಅರಿಶಿನ – ¼ ಚಮಚ
ಖಾರದ ಪುಡಿ – ½ ಚಮಚ
ಧನಿಯಾ ಪುಡಿ – ½ ಚಮಚ
ಸಾಸಿವೆ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ...
ಮೊದಲು ಮೆಂತ್ಯೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಹಾಕಿ ಈರುಳ್ಳಿ ಮೃದುವಾಗುವವರೆಗೆ ಹುರಿಯಿರಿ.
ನಂತರ ಹೆಚ್ಚಿದ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ. ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈಗ ಮೆಂತ್ಯೆ ಸೊಪ್ಪು ಹಾಕಿ 3–4 ನಿಮಿಷ ಹುರಿಯಿರಿ.
ಮೆಂತ್ಯೆ ಸೊಪ್ಪು ಚೆನ್ನಾಗಿ ಬೆಂದ ಬಳಿಕ ಮೊಟ್ಟೆಗಳನ್ನು ಒಂದೊಂದಾಗಿ ಒಡೆದು ಬಾಣಲೆಗೆ ಹಾಕಿ. ಮೊಟ್ಟೆಯನ್ನು ಸೊಪ್ಪಿನ ಮಿಶ್ರಣದೊಂದಿಗೆ ಚೆನ್ನಾಗಿ ಕಲಸುತ್ತಾ ಹುರಿಯಿರಿ. ಮೊಟ್ಟೆ ಸಂಪೂರ್ಣವಾಗಿ ಬೇಯುವವರೆಗೆ 3–5 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಒಮ್ಮೆ ಕಲಸಿದರೆ ರುಚಿಯಾದ ಮೆಂತ್ಯೆಸೊಪ್ಪಿನ ಮೊಟ್ಟೆ ಫ್ರೈ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



