ಹಾಗಲಕಾಯಿ ಕಹಿ ಕಡಿಮೆ ಮಾಡುವ ಸುಲಭ ಟ್ರಿಕ್: ಈ ವಿಧಾನದಲ್ಲಿ ಮಾಡಿ ರುಚಿಕರವಾದ ಪಲ್ಯ..!
ಕಹಿ ರುಚಿಯಿಂದಾಗಿ ಹಾಗಲಕಾಯಿ ಎಂದಾಕ್ಷಣ ಹಲವರು ಮೂಗು ಮುರಿಯುವುದುಂಟು. ಆದರೆ, ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಇದೇ ಹಾಗಲಕಾಯಿಯಿಂದ ರುಚಿಕರವಾದ ಪಲ್ಯ ಮಾಡಬಹುದು.

ಕಹಿ ರುಚಿಯಿಂದಾಗಿ ಹಾಗಲಕಾಯಿ ಎಂದಾಕ್ಷಣ ಹಲವರು ಮೂಗು ಮುರಿಯುವುದುಂಟು. ಆದರೆ, ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಇದೇ ಹಾಗಲಕಾಯಿಯಿಂದ ರುಚಿಕರವಾದ ಪಲ್ಯ ಮಾಡಬಹುದು. ಕಹಿ, ಸಿಹಿ ಹಾಗೂ ಹುಳಿ ರುಚಿಗಳ ಸರಿಯಾದ ಸಂಯೋಜನೆಯೊಂದಿಗೆ ತಯಾರಿಸುವ ಹಾಗಲಕಾಯಿ ಪಲ್ಯ ಅನ್ನ, ಸಾರು, ರಸಂ ಜೊತೆಗೆ ಸವಿಯಲು ತುಂಬಾ ರುಚಿಯಾಗಿರುತ್ತದೆ. ಮನೆಯಲ್ಲಿರುವ ಸರಳ ಸಾಮಗ್ರಿಗಳಿಂದಲೇ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಪಲ್ಯವನ್ನು ನೀವೂ ಒಮ್ಮೆ ಮಾಡಿ ನೋಡಿ.
ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು:
ಹಾಗಲಕಾಯಿ – 4 ರಿಂದ 5
ಈರುಳ್ಳಿ – 2
ಹಸಿಮೆಣಸಿನಕಾಯಿ – 2
ಸಾಸಿವೆ – ½ ಚಮಚ
ಜೀರಿಗೆ – ½ ಚಮಚ
ಕಡಲೆಬೇಳೆ - ಸ್ವಲ್ಪ
ಉದ್ದಿನಬೇಳೆ - ಸ್ವಲ್ಪ
ಅರಿಶಿನ – ¼ ಚಮಚ
ಖಾರದ ಪುಡಿ – 1 ಚಮಚ
ದನಿಯಾ ಪುಡಿ – ½ ಚಮಚ
ಬೆಲ್ಲ – 1 ಚಮಚ
ಹುಣಸೆಹಣ್ಣಿನ ರಸ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಕರಿಬೇವು – ಸ್ವಲ್ಪ
ಕಡಲೆಬೇಳೆ – 1 ಚಮಚ
ಉದ್ದಿನಬೇಳೆ – ½ ಚಮಚ
ಮಾಡುವ ವಿಧಾನ...
ಮೊದಲು ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು, ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಬೀಜಗಳು ಗಟ್ಟಿಯಾಗಿದ್ದರೆ ತೆಗೆದುಹಾಕಿ. ಕಹಿ ಸ್ವಲ್ಪ ಕಡಿಮೆ ಮಾಡಲು ಹಾಗಲಕಾಯಿಗೆ ಸ್ವಲ್ಪ ಉಪ್ಪು ಹಾಕಿ 10–15 ನಿಮಿಷ ಬದಿಗಿಡಬಹುದು. ನಂತರ ಅದರಲ್ಲಿರುವ ನೀರನ್ನು ಹಿಂಡಿ ತೆಗೆದುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕಡಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. ನಂತರ ಕರಿಬೇವು ಮತ್ತು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿ ಹುರಿಯಿರಿ.
ಈಗ ಹೆಚ್ಚಿದ ಈರುಳ್ಳಿ ಹಾಕಿ ಮೃದುವಾಗುವವರೆಗೆ ಹುರಿಯಿರಿ. ನಂತರ ಹಾಗಲಕಾಯಿ ಸೇರಿಸಿ ಚೆನ್ನಾಗಿ ಕಲಸಿ, ಮಧ್ಯಮ ಉರಿಯಲ್ಲಿ ಬೇಯಿಸಿ.
ಹಾಗಲಕಾಯಿ ಸ್ವಲ್ಪ ಮೃದುವಾದ ಬಳಿಕ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 5–7 ನಿಮಿಷ ಬೇಯಿಸಿ. ಮಧ್ಯೆ ಮಧ್ಯೆ ಕಲಿಸುತ್ತಿರಿ.
ಹಾಗಲಕಾಯಿ ಚೆನ್ನಾಗಿ ಬೇಯಿಸಿ, ಸ್ವಲ್ಪ ಹುರಿದ ನಂತರ ಬೆಲ್ಲ ಮತ್ತು ಹುಣಸೆಹಣ್ಣಿನ ರಸ ಸೇರಿಸಿ. ಇವೆರಡೂ ಹಾಗಲಕಾಯಿಯ ಕಹಿಯನ್ನು ಸಮತೋಲನಗೊಳಿಸಿ ಪಲ್ಯಕ್ಕೆ ಸಿಹಿ-ಹುಳಿ ರುಚಿ ನೀಡುತ್ತವೆ.
ಇನ್ನೂ 2–3 ನಿಮಿಷ ಚೆನ್ನಾಗಿ ಹುರಿದ ಬಳಿಕ ಗ್ಯಾಸ್ ಆಫ್ ಮಾಡಿ. ಇದೀಗ ರುಚಿಯಾದ ಹಾಗಲಕಾಯಿ ಪಲ್ಯ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



