ಅಡುಗೆ

ಗೋರಿಕಾಯಿ ಶೇಂಗಾ ಪಲ್ಯ ಹೀಗೆ ಮಾಡಿ; ಊಟದ ರುಚಿಯೇ ಡಬಲ್..!

ಸರಳ ಪದಾರ್ಥಗಳಲ್ಲೇ ಸುಲಭವಾಗಿ ತಯಾರಿಸಬಹುದಾದ ಗೋರಿಕಾಯಿ ಶೇಂಗಾ ಪಲ್ಯ ಅನ್ನ, ರೊಟ್ಟಿ ಹಾಗೂ ಚಪಾತಿ ಜೊತೆ ಸವಿಯಲು ಉತ್ತಮ ಆಯ್ಕೆಯಾಗಿದೆ.

ಗೋರಿಕಾಯಿ ಶೇಂಗಾ ಪಲ್ಯ ಹೀಗೆ ಮಾಡಿ; ಊಟದ ರುಚಿಯೇ ಡಬಲ್..!
ಗೋರಿಕಾಯಿ ಶೇಂಗಾ ಪಲ್ಯ
Published On :

ಗೋರಿಕಾಯಿ ಬಳಸಿ ಹಲವು ಬಗೆಯ ಪಲ್ಯ ಮಾಡಬಹುದು. ಅದಕ್ಕೆ ಹುರಿದ ಶೇಂಗಾ ಪುಡಿ ಸೇರಿಸಿದರೆ ಪಲ್ಯದ ರುಚಿ ಮತ್ತಷ್ಟು ಹೆಚ್ಚುತ್ತದೆ. ಸರಳ ಪದಾರ್ಥಗಳಲ್ಲೇ ಸುಲಭವಾಗಿ ತಯಾರಿಸಬಹುದಾದ ಗೋರಿಕಾಯಿ ಶೇಂಗಾ ಪಲ್ಯ ಅನ್ನ, ರೊಟ್ಟಿ ಹಾಗೂ ಚಪಾತಿ ಜೊತೆ ಸವಿಯಲು ಉತ್ತಮ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು...

  • ಗೋರಿಕಾಯಿ – ½ ಕೆ.ಜಿ

  • ಶೇಂಗಾ – ½ ಬಟ್ಟಲು

  • ಈರುಳ್ಳಿ – 1

  • ಹಸಿಮೆಣಸಿನಕಾಯಿ – 2

  • ಸಾಸಿವೆ – ½ ಚಮಚ

  • ಉದ್ದಿನಬೇಳೆ – ½ ಚಮಚ

  • ಜೀರಿಗೆ – ½ ಚಮಚ

  • ಅರಿಶಿನ – ¼ ಚಮಚ

  • ಅಚ್ಚ ಖಾರದ ಪುಡಿ – ½ ಚಮಚ

  • ತೆಂಗಿನ ತುರಿ – 2 ಚಮಚ

  • ಕರಿಬೇವು – ಸ್ವಲ್ಪ

  • ಎಣ್ಣೆ – 2 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲು ಗೋರಿಕಾಯಿಯನ್ನು ಚೆನ್ನಾಗಿ ತೊಳೆದು, ಎರಡೂ ಬದಿಯ ತುದಿಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಶೇಂಗಾವನ್ನು ಬಾಣಲೆಯಲ್ಲಿ ಹುರಿದು, ತಣ್ಣಗಾದ ಬಳಿಕ ಸ್ವಲ್ಪ ಪುಡಿ ಮಾಡಿಕೊಳ್ಳಿ.

  • ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. ನಂತರ ಕರಿಬೇವು, ಸೀಳಿದ ಹಸಿಮೆಣಸಿನಕಾಯಿ ಹಾಗೂ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ.

  • ಈರುಳ್ಳಿ ಸ್ವಲ್ಪ ಮೃದುವಾದ ಬಳಿಕ ಗೋರಿಕಾಯಿ, ಅರಿಶಿನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಗೋರಿಕಾಯಿ ಮೃದುವಾಗುವವರೆಗೆ ಬೇಯಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಚಿಮುಕಿಸಿ.

  • ಗೋರಿಕಾಯಿ ಬೇಯಿಸಿದ ಬಳಿಕ ಅಚ್ಚ ಖಾರದ ಪುಡಿ ಹಾಗೂ ಹುರಿದ ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ತೆಂಗಿನ ತುರಿ ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಹುರಿದರೆ ರುಚಿಯಾದ ಗೋರಿಕಾಯಿ ಶೇಂಗಾ ಪಲ್ಯ ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.