ಮೇಲುಕೋಟೆ ಪುಳಿಯೋಗರೆ ರುಚಿಗೆ ಮನಸೋತಿದ್ದೀರಾ? ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ...
ಮೇಲುಕೋಟೆ ಎಂದಾಕ್ಷಣ ನೆನಪಾಗುವುದು ಅಲ್ಲಿನ ಪ್ರಸಿದ್ಧ ಪುಳಿಯೋಗರೆ. ಹುಣಸೆಹಣ್ಣಿನ ಹುಳಿ, ಖಾರ, ಬೆಲ್ಲದ ಸಿಹಿ ಹಾಗೂ ವಿಶೇಷ ಮಸಾಲೆಯ ಪರಿಮಳದಿಂದ ಕೂಡಿರುವ ಈ ಪುಳಿಯೋಗರೆ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದೆ.

ಮೇಲುಕೋಟೆ ಎಂದಾಕ್ಷಣ ನೆನಪಾಗುವುದು ಅಲ್ಲಿನ ಪ್ರಸಿದ್ಧ ಪುಳಿಯೋಗರೆ. ಹುಣಸೆಹಣ್ಣಿನ ಹುಳಿ, ಖಾರ, ಬೆಲ್ಲದ ಸಿಹಿ ಹಾಗೂ ವಿಶೇಷ ಮಸಾಲೆಯ ಪರಿಮಳದಿಂದ ಕೂಡಿರುವ ಈ ಪುಳಿಯೋಗರೆ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದೆ.
ದೇವಸ್ಥಾನದ ಪ್ರಸಾದವಾಗಿಯೂ ಜನಪ್ರಿಯವಾಗಿರುವ ಮೇಲುಕೋಟೆ ಶೈಲಿಯ ಪುಳಿಯೋಗರೆಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಅನ್ನಕ್ಕೆ ಈ ಗೊಜ್ಜು ಬೆರೆಸಿ ಸವಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ. ಮನೆಯಲ್ಲಿ ಸಿಗುವ ಸರಳ ಪದಾರ್ಥಗಳಿಂದಲೇ ರುಚಿಕರವಾದ ಮೇಲುಕೋಟೆ ಶೈಲಿಯ ಪುಳಿಯೋಗರೆ ತಯಾರಿಸುವ ವಿಧಾನ ಇಲ್ಲಿದೆ...
ಬೇಕಾಗುವ ಪದಾರ್ಥಗಳು...
ಪುಳಿಯೋಗರೆ ಗೊಜ್ಜಿಗೆ:
ಹುಣಸೆಹಣ್ಣು – ಒಂದು ನಿಂಬೆ ಗಾತ್ರ
ಒಣ ಮೆಣಸಿನಕಾಯಿ – 8–10
ಧನಿಯಾ – 2 ಚಮಚ
ಮೆಂತ್ಯ – ½ ಚಮಚ
ಎಳ್ಳು – 1 ಚಮಚ
ಒಣ ತೆಂಗಿನ ತುರಿ – 2 ಚಮಚ
ಕಡಲೆಬೇಳೆ – 1 ಚಮಚ
ಉದ್ದಿನಬೇಳೆ – 1 ಚಮಚ
ಬೆಲ್ಲ – 1–2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ¼ ಚಮಚ
ಎಣ್ಣೆ – 3–4 ಚಮಚ
ಒಗ್ಗರಣೆಗೆ...
ಸಾಸಿವೆ – 1 ಚಮಚ
ಕಡಲೆಬೇಳೆ – 1 ಚಮಚ
ಉದ್ದಿನಬೇಳೆ – 1 ಚಮಚ
ಕಡಲೆಬೀಜ – 2 ಚಮಚ
ಒಣ ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಇಂಗು – ಚಿಟಿಕೆ
ಬೇಯಿಸಿದ ಅನ್ನ – 3 ಬಟ್ಟಲು
ಎಳ್ಳೆಣ್ಣೆ – 1–2 ಚಮಚ
ಮಾಡುವ ವಿಧಾನ...
ಮೊದಲು ಹುಣಸೆಹಣ್ಣನ್ನು ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ ಗಟ್ಟಿಯಾದ ಹುಣಸೆ ರಸ ತೆಗೆದುಕೊಳ್ಳಿ.
ಬಾಣಲೆಯಲ್ಲಿ ಧನಿಯಾ, ಮೆಂತ್ಯ, ಎಳ್ಳು, ಕಡಲೆಬೇಳೆ, ಉದ್ದಿನಬೇಳೆ ಹಾಗೂ ಒಣ ಮೆಣಸಿನಕಾಯಿಯನ್ನು ಪ್ರತ್ಯೇಕವಾಗಿ ಅಥವಾ ಕಡಿಮೆ ಉರಿಯಲ್ಲಿ ಹುರಿಯಿರಿ.
ಕೊನೆಯಲ್ಲಿ ಒಣ ತೆಂಗಿನ ತುರಿ ಸೇರಿಸಿ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ. ನಂತರ ಎಲ್ಲವನ್ನೂ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಕಡಲೆಬೀಜ ಹಾಕಿ ಕೆಂಪಗೆ ಹುರಿದು ಪಕ್ಕಕ್ಕಿಟ್ಟುಕೊಳ್ಳಿ. ಇದೇ ಎಣ್ಣೆಗೆ ಸಾಸಿವೆ ಸಿಡಿಸಿ. ಕಡಲೆಬೇಳೆ, ಉದ್ದಿನಬೇಳೆ, ಒಣ ಮೆಣಸಿನಕಾಯಿ ಹಾಗೂ ಕರಿಬೇವು ಹಾಕಿ ಹುರಿಯಿರಿ. ಇಂಗು ಸೇರಿಸಿ. ಇದಕ್ಕೆ ಹುಣಸೆ ರಸ, ಅರಿಶಿನ ಮತ್ತು ಉಪ್ಪು ಹಾಕಿ ಕುದಿಸಿ.
ಹುಣಸೆ ರಸದ ಹಸಿ ವಾಸನೆ ಹೋಗಿ ಮಿಶ್ರಣ ಸ್ವಲ್ಪ ಗಟ್ಟಿಯಾಗುವಾಗ ತಯಾರಿಸಿದ ಪುಳಿಯೋಗರೆ ಪುಡಿ ಹಾಗೂ ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಎಣ್ಣೆ ಮೇಲಕ್ಕೆ ಬಂದು ಗೊಜ್ಜು ಗಟ್ಟಿಯಾದಾಗ ಒಲೆಯಿಂದ ಇಳಿಸಿ. ಇದನ್ನು ಸಂಪೂರ್ಣ ತಣ್ಣಗಾಗಲು ಬಿಡಿ.
ಬೇಯಿಸಿ ತಣ್ಣಗಾದ ಅನ್ನಕ್ಕೆ ಸ್ವಲ್ಪ ಎಳ್ಳೆಣ್ಣೆ ಹಾಕಿ, ಬೇಕಾದಷ್ಟು ಪುಳಿಯೋಗರೆ ಗೊಜ್ಜು ಹಾಗೂ ಕಡಲೆಬೀಜ ಸೇರಿಸಿ ನಿಧಾನವಾಗಿ ಕಲಸಿ. ರುಚಿ ಚೆನ್ನಾಗಿ ಹದವಾಗಲು ಕನಿಷ್ಠ 20–30 ನಿಮಿಷ ಮುಚ್ಚಿಡಿ. ನಂತರ ಬಡಿಸಿದರೆ ಮೇಲುಕೋಟೆ ಶೈಲಿಯ ರುಚಿಕರ ಪುಳಿಯೋಗರೆ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



