ಸಂಜೆ ಹೊತ್ತಿಗೆ ಏನಾದರೂ ಸ್ಪೆಷಲ್ ಬೇಕಾ? ಪನೀರ್ ಫಿಂಗರ್ಸ್ ಮಾಡಿ ನೋಡಿ..!
ಸಂಜೆ ಸಮಯದಲ್ಲಿ ಏನಾದರೂ ಗರಿಗರಿಯಾದ, ರುಚಿಕರವಾದ ತಿಂಡಿ ತಿನ್ನಬೇಕು ಅನಿಸುತ್ತಿದೆಯಾ? ಹಾಗಾದರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪನೀರ್ ಫಿಂಗರ್ಸ್ ಒಮ್ಮೆ ಮಾಡಿ ನೋಡಿ.

ಸಂಜೆ ಸಮಯದಲ್ಲಿ ಏನಾದರೂ ಗರಿಗರಿಯಾದ, ರುಚಿಕರವಾದ ತಿಂಡಿ ತಿನ್ನಬೇಕು ಅನಿಸುತ್ತಿದೆಯಾ? ಹಾಗಾದರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪನೀರ್ ಫಿಂಗರ್ಸ್ ಒಮ್ಮೆ ಮಾಡಿ ನೋಡಿ.
ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುವ ಈ ಸ್ನ್ಯಾಕ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಪಾರ್ಟಿ, ಗೆಟ್‌ಟುಗೆದರ್ ಅಥವಾ ಸಂಜೆ ಚಹಾ ಜೊತೆ ಸವಿಯಲು ಇದು ಸೂಕ್ತ. ಹಾಗಾದರೆ, ಪನೀರ್ ಫಿಂಗರ್ಸ್ ಮಾಡುವ ಸರಳ ವಿಧಾನ ಇಲ್ಲಿದೆ...
ಬೇಕಾಗುವ ಪದಾರ್ಥಗಳು...
ಪನೀರ್ ಮ್ಯಾರಿನೇಟ್ ಮಾಡಲು...
ಪನೀರ್ – 250 ಗ್ರಾಂ
ಅಚ್ಚಖಾರದ ಪುಡಿ – ½ ಚಮಚ
ಅರಿಶಿನ – ¼ ಚಮಚ
ಗರಂ ಮಸಾಲೆ – ½ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ
ಮಾಡುವ ವಿಧಾನ...
ಪನೀರ್ ಅನ್ನು ಉದ್ದನೆಯ ಬೆರಳಿನಾಕಾರದ ತುಂಡುಗಳಾಗಿ ಕತ್ತರಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ಪನೀರ್ ತುಂಡುಗಳಿಗೆ ಮೆಣಸಿನ ಪುಡಿ, ಅರಿಶಿನ, ಗರಂ ಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ನಿಂಬೆ ರಸ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. 10–15 ನಿಮಿಷ ಮ್ಯಾರಿನೇಟ್ ಮಾಡಲು ಬಿಡಿ.
ಮತ್ತೊಂದು ಪಾತ್ರೆಯಲ್ಲಿ ಮೈದಾ, ಕಾರ್ನ್‌ಫ್ಲೋರ್, ಅಚ್ಚಖಾರದ ಪುಡಿ, ಕರಿಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ಸ್ವಲ್ಪ ನೀರು ಹಾಕಿ ಗಟ್ಟಿಯಾದ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಮ್ಯಾರಿನೇಟ್ ಮಾಡಿದ ಪನೀರ್ ತುಂಡನ್ನು ಮೊದಲು ಮೈದಾ ಮಿಶ್ರಣದಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಚೆನ್ನಾಗಿ ಉರುಳಿಸಿ.
ಎಲ್ಲಾ ಪನೀರ್ ತುಂಡುಗಳಿಗೂ ಇದೇ ರೀತಿ ಕೋಟಿಂಗ್ ಮಾಡಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಪನೀರ್ ಫಿಂಗರ್ಸ್‌ಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಕರಿಯಿರಿ.
ಕರಿದ ಪನೀರ್ ಫಿಂಗರ್ಸ್‌ಗಳನ್ನು ಟಿಶ್ಯೂ ಪೇಪರ್ ಮೇಲೆ ತೆಗೆದು ಹೆಚ್ಚುವರಿ ಎಣ್ಣೆ ಹೀರಿಕೊಳ್ಳಲು ಬಿಡಿ.
ಟಿಪ್ಸ್...
ಇನ್ನಷ್ಟು ಗರಿಗರಿಯಾಗಲು ಪನೀರ್‌ಗೆ ಡಬಲ್ ಕೋಟಿಂಗ್ ಮಾಡಬಹುದು.
ಹೆಚ್ಚು ಎಣ್ಣೆ ಹೀರಿಕೊಳ್ಳದಂತೆ ಎಣ್ಣೆ ಚೆನ್ನಾಗಿ ಬಿಸಿಯಾದ ನಂತರವೇ ಫಿಂಗರ್ಸ್‌ಗಳನ್ನು ಕರಿಯಿರಿ.
ಬೇಕಾದರೆ ಕರಿಯುವ ಬದಲು ಏರ್ ಫ್ರೈಯರ್‌ನಲ್ಲೂ ತಯಾರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



