ಅಡುಗೆ

ಮಸಾಲಾ ಪುರಿ | Masala Puri recipe in Kannada

ಸಂಜೆಯ ತಿಂಡಿಗೆ ಏನಾದರೂ ಚಾಟ್ ತಿನ್ನಬೇಕು ಎನ್ನಿಸಿದರೆ ಮೊದಲು ನೆನಪಾಗುವುದು ಮಸಾಲಾ ಪುರಿ. ಕೆಲವೇ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ರುಚಿಕರವಾದ ಸ್ಟ್ರೀಟ್‌ ಸ್ಟೈಲ್‌ ಮಸಾಲಾ ಪುರಿಯನ್ನು ಸುಲಭವಾಗಿ ತಯಾರಿಸಬಹುದು. ಅದರ ಸಂಪೂರ್ಣ ರೆಸಿಪಿ ಇಲ್ಲಿದೆ.

ಮಸಾಲಾ ಪುರಿ | Masala Puri recipe in Kannada
ಮಸಾಲಾ ಪುರಿ
Published On :

ಸಂಜೆಯ ತಿಂಡಿಗೆ ಏನಾದರೂ ಚಾಟ್ ತಿನ್ನಬೇಕು ಎನ್ನಿಸಿದರೆ ಮೊದಲು ನೆನಪಾಗುವುದು ಮಸಾಲಾ ಪುರಿ. ಕೆಲವೇ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ರುಚಿಕರವಾದ ಸ್ಟ್ರೀಟ್‌ ಸ್ಟೈಲ್‌ ಮಸಾಲಾ ಪುರಿಯನ್ನು ಸುಲಭವಾಗಿ ತಯಾರಿಸಬಹುದು. ಅದರ ಸಂಪೂರ್ಣ ರೆಸಿಪಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು...

  • ಬಟಾಣಿ ಮಸಾಲೆಗೆ

  • ಒಣ ಬಿಳಿ ಬಟಾಣಿ – 1 ಬಟ್ಟಲು

  • ಈರುಳ್ಳಿ – 2 (ಸಣ್ಣದಾಗಿ ಕತ್ತರಿಸಿದ್ದು)

  • ಟೊಮ್ಯಾಟೊ – 2 (ಸಣ್ಣದಾಗಿ ಕತ್ತರಿಸಿದದ್ದು)

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಹಸಿಮೆಣಸಿನಕಾಯಿ – 2

  • ಅರಿಶಿನ – ¼ ಚಮಚ

  • ಅಚ್ಚ ಖಾರದ ಪುಡಿ – 1 ಚಮಚ

  • ದನಿಯಾ ಪುಡಿ – 1 ಚಮಚ

  • ಜೀರಿಗೆ ಪುಡಿ – ½ ಚಮಚ

  • ಗರಂ ಮಸಾಲಾ – ½ ಚಮಚ

  • ಪಾವ್ ಭಾಜಿ ಮಸಾಲಾ – 1 ಚಮಚ (ಐಚ್ಛಿಕ)

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – 2 ಚಮಚ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

ಹಸಿರು ಚಟ್ನಿಗೆ ಬೇಕಾಗುವ ಪದಾರ್ಥಗಳು....

  • ಕೊತ್ತಂಬರಿ ಸೊಪ್ಪು – 1 ಬಟ್ಟಲು

  • ಪುದೀನಾ – ½ ಬಟ್ಟಲು

  • ಹಸಿಮೆಣಸಿನಕಾಯಿ – 2

  • ನಿಂಬೆರಸ – 1 ಚಮಚ

  • ಉಪ್ಪು – ಸ್ವಲ್ಪ

ಸರ್ವ್ ಮಾಡಲು ಬೇಕಾಗುವ ಪದಾರ್ಥಗಳು...

  • ಪುರಿಗಳು – 12 ರಿಂದ 15 (ಪುಡಿಮಾಡಿದವು)

  • ಸಣ್ಣದಾಗಿ ಕತ್ತರಿಸಿದ ಈರುಳ್ಳಿ

  • ಸಣ್ಣದಾಗಿ ಕತ್ತರಿಸಿದ ಟೊಮ್ಯಾಟೊ

  • ಸೇವ್

  • ಕೊತ್ತಂಬರಿ ಸೊಪ್ಪು

  • ಚಾಟ್ ಮಸಾಲಾ (ಐಚ್ಛಿಕ)

  • ನಿಂಬೆ ರಸ

ಮಾಡುವ ವಿಧಾನ...

  • ಒಣ ಬಟಾಣಿಯನ್ನು 8 ಗಂಟೆ ಅಥವಾ ರಾತ್ರಿ ಪೂರ್ತಿ ನೆನೆಸಿಡಿ. ಕುಕ್ಕರ್‌ನಲ್ಲಿ ಉಪ್ಪು ಸೇರಿಸಿ 4–5 ವಿಸಿಲ್ ಬರುವವರೆಗೆ ಚೆನ್ನಾಗಿ ಬೇಯಿಸಿ.

  • ಇದೀಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.

  • ಇದಕ್ಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಸೇರಿಸಿ. ಬಳಿಕ ಟೊಮ್ಯಾಟೊ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ.

  • ನಂತರ ಅರಿಶಿನ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಮತ್ತು ಪಾವ್ ಭಾಜಿ ಮಸಾಲಾ ಸೇರಿಸಿ.

  • ಬೇಯಿಸಿದ ಬಟಾಣಿ ಮತ್ತು ಅದರ ನೀರನ್ನು ಸೇರಿಸಿ 10–15 ನಿಮಿಷ ಕುದಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು, ರುಚಿ ಪರೀಕ್ಷಿಸಿ ಉಪ್ಪು ಸೇರಿಸಿ. ಮಸಾಲೆ ಸ್ವಲ್ಪ ದಪ್ಪವಾಗಿರಲಿ.

  • ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.

ಹಸಿರು ಚಟ್ನಿ ಮಾಡುವ ವಿಧಾನ..

  • ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಮಸಾಲಾ ಪುರಿ ಸಿದ್ಧಪಡಿಸುವುದು

  • ಒಂದು ತಟ್ಟೆಯಲ್ಲಿ ಪುರಿಗಳನ್ನು ಸಣ್ಣ ತುಂಡುಗಳಾಗಿ ಮುರಿಯಿರಿ.

  • ಅದರ ಮೇಲೆ ಬಟಾಣಿ ಮಸಾಲೆ ಸುರಿಯಿರಿ. ಹಸಿರು ಚಟ್ನಿ ಹಾಕಿ.

  • ಈರುಳ್ಳಿ, ಟೊಮ್ಯಾಟೊ ಮತ್ತು ಸೇವ್ ಹಾಕಿ.

  • ಕೊತ್ತಂಬರಿ ಸೊಪ್ಪು, ಚಾಟ್ ಮಸಾಲಾ ಹಾಗೂ ನಿಂಬೆರಸ ಹಾಕಿ ತಕ್ಷಣವೇ ಸವಿಯಿರಿ.

ಟಿಪ್ಸ್...

  • ಬೆಂಗಳೂರಿನ ಸ್ಟ್ರೀಟ್‌ಸ್ಟೈಲ್ ರುಚಿ ಬೇಕಾದರೆ ಸ್ವಲ್ಪ ಪಾವ್ ಭಾಜಿ ಮಸಾಲಾ ಮತ್ತು ಒಂದು ಚಿಟಿಕೆ ಬ್ಲ್ಯಾಕ್ ಸಾಲ್ಟ್ ಸೇರಿಸಿ.

  • ಮಸಾಲೆ ಸ್ವಲ್ಪ ಖಾರ ಮತ್ತು ಸ್ವಲ್ಪ ಸಿಹಿ ಇದ್ದರೆ ರುಚಿ ಇನ್ನಷ್ಟು ಚೆನ್ನಾಗಿರುತ್ತದೆ.

  • ಪುರಿ ಮೆತ್ತಗಾಗದಂತೆ ಮಸಾಲೆ ಹಾಕಿದ ಕೂಡಲೇ ತಿನ್ನುವುದು ಉತ್ತಮ.

  • ಬೇಕಾದರೆ ಹುಣಸೆ-ಖರ್ಜೂರದಿಂದ ಮಾಡಿದ ಸಿಹಿ ಚಟ್ನಿಯನ್ನೂ ಸೇರಿಸಿದರೆ ರುಚಿ ಇನ್ನಷ್ಟು ಚೆನ್ನಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.