ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ; 1-0 ಅಂತರದಲ್ಲಿ ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್ ಗೆ ಲಗ್ಗೆ!
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಪ್ರಬಲ ಫ್ರಾನ್ಸ್ ದಾಖಲೆ ನಿರ್ಮಾಣ ಮಾಡಿದ್ದು, ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ.

Published On :
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಪ್ರಬಲ ಫ್ರಾನ್ಸ್ ದಾಖಲೆ ನಿರ್ಮಾಣ ಮಾಡಿದ್ದು, ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ.
ಪಂದ್ಯದ 51ನೇ ನಿಮಿಷದಲ್ಲಿ ಫ್ರಾನ್ಸ್ ಸ್ಟ್ರೈಕರ್ ಉಮ್ಟಿಟಿ ಸಿಡಿಸಿ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್ ತಂಡ ಬೆಲ್ಜಿಯಂ ತಂಡವನ್ನು ರೋಚಕವಾಗಿ ಮಣಿಸಿ 2018ರ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ.
ಪಂದ್ಯದುದ್ದಕ್ಕೂ ಗೆಲುವಿಗಾಗಿ ಬೆಲ್ಜಿಯಂ ತಂಡ ಭಾರಿ ಹರಸಾಹಸವನ್ನೇ ಪಟ್ಟಿತಾದರೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಪ್ರಮುಖವಾಗಿ 51ನೇ ನಿಮಿಷದಲ್ಲಿ ಫ್ರಾನ್ಸ್ ನ ಉಮ್ಟಿಟಿ ಹೆಡ್ ಮಾಡಿ ಗಳಿಸಿದ ಗೋಲು ಬೆಲ್ಜಿಯಂ ತಂಡವನ್ನು ಒತ್ತಡಕ್ಕೆ ನೂಕಿತು. ಪರಿಣಾಮ ಗೋಲು ಗಳಿಸಿದ ಬಳಿಕ ಆಕ್ರಮಣಕಾರಿ ಆಟಕ್ಕೆ ಬೆಲ್ಜಿಯಂ ಮೊರೆ ಹೋಯಿತಾದರೂ ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.
ಅಂತಿಮವಾಗಿ ಪಂದ್ಯದ ಅವಧಿ ಮುಕ್ತಾಯದ ವೇಳೆಗೆ ಬೆಲ್ಜಿಯಂ ತಂಡ 0-1 ಅಂತರದ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಿತ್ತು. ಆ ಮೂಲಕ 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫ್ರಾನ್ಸ್ ತಂಡ ವಿಶ್ವಕಪ್ ಫೈನಲ್ ಹಂತಕ್ಕೇರಿತು.
ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ
ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಭವಿಷ್ಯದ ಮೂಲಕ ಭಾರಿ ಸದ್ದು ಮಾಡಿರುವ ಅಚಿಲ್ಸ್ ಬೆಕ್ಕು ಸೆಮಿ ಫೈನಲ್ ಪಂದ್ಯದ ಕುರಿತು ಭವಿಷ್ಯ ನುಡಿದು ಮತ್ತೆ ಸುದ್ದಿಗೆ ಗ್ರಾಸವಾಗಿತ್ತು. ಸೆಮಿಫೈನಲ್ ನಲ್ಲಿ ಬೆಲ್ಜಿಯಂ ಗೆಲ್ಲಲಿದೆ ಎಂದು ಅಚಿಲ್ಸ್ ಹೇಳಿತ್ತು. ಆದರೆ ಈ ಬಾರಿ ಅಚಿಲ್ಸ್ ಬೆಕ್ಕಿನ ಭವಿಷ್ಯ ಸುಳ್ಳಾಗಿದ್ದು, ಬೆಲ್ಜಿಯಂ ತಂಡ ಸೋತು ಮನೆಯತ್ತ ಮುಖಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
FranceBelgiumಫ್ರಾನ್ಸ್Moscowಮಾಸ್ಕೋಬೆಲ್ಜಿಯಂFIFA World cup 20181st Semifinalಮೊದಲ ಸೆಮಿಫೈನಲ್ಫೀಫಾ ವಿಶ್ವಕಪ್ 2018Achilles Catಅಚಿಲ್ಸ್ ಬೆಕ್ಕು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


