2017ರ ಭಾರತೀಯ ಫುಟ್ಬಾಲ್ ಸಂಸ್ಥೆಯ ಪ್ರಶಸ್ತಿ ಪ್ರಕಟ: ಸುನಿಲ್ ಚೇಟ್ರಿಗೆ ವರ್ಷದ ಆಟಗಾರ ಪ್ರಶಸ್ತಿ ಗರಿ
ಭಾರತೀಯ ಫುಟ್ಬಾಲ್ ಸಂಸ್ಥೆ (ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್-IAFF) ತನ್ನ 2017ನೇ ಸಾಲಿನ ಪ್ರಶಸ್ತಿ ಪ್ರಕಟ ಮಾಡಿದ್ದು, ಭಾರತ ತಂಡದ ಸ್ಟಾರ್ ಆಟಗಾರ ಸುನಿಲ್ ಚೇಟ್ರಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Published On :
ಮುಂಬೈ: ಭಾರತೀಯ ಫುಟ್ಬಾಲ್ ಸಂಸ್ಥೆ (ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್-IAFF) ತನ್ನ 2017ನೇ ಸಾಲಿನ ಪ್ರಶಸ್ತಿ ಪ್ರಕಟ ಮಾಡಿದ್ದು, ಭಾರತ ತಂಡದ ಸ್ಟಾರ್ ಆಟಗಾರ ಸುನಿಲ್ ಚೇಟ್ರಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
33ವರ್ಷದ ಸುನಿಲ್ ಚೇಟ್ರಿ ಇತ್ತೀಚೆಗಷ್ಟೇ ತಮ್ಮ ನೂರನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಭಾರತದ ಪರ 100 ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು. ಇದಕ್ಕೂ ಮೊದಲು ಭಾರತದ ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅವರು ಭಾರತದ ಪರ 100 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಚೇಟ್ರಿ ಅಪೂರ್ವ ಸಾಧನೆಗಾಗಿ ಐಎಎಫ್ಎಫ್ ಸಂಸ್ಥೆ ವರ್ಷದ ಆಟಗಾರ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ಇದೇ ಚೇಟ್ರಿ ಬೆಂಗಳೂರು ಎಫ್ ಸಿ ತಂಡದ ಪರ ಆಡುತ್ತಿದ್ದಾರೆ.
ಅಂತೆಯೇ ಭಾರತದ ಮಹಿಳಾ ಫುಟ್ಬಾಲ್ ನ ಸ್ಟಾರ್ ಆಟಗಾರ್ತಿ ಕಮಲಾದೇವಿ ಅವರೂ ಕೂಡ ಮಹಿಳೆಯರ ತಂಡದಿಂದ ವರ್ಷದ ಆಟಗಾರ್ತಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಳಿದಂತೆ ಈ ಹಿಂದೆ ನಡೆದ ನಾಲ್ಕು ರಾಷ್ಟ್ರಗಳ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಯುವ ಆಟಗಾರ ಅನಿರುದ್ಧ ತಾಪಾ 2017ನೇ ಸಾಲಿನ ಅತ್ಯುತ್ತಮ ಉದಯೋನ್ಮುಖ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದೇ ರೀತಿ ಮಹಿಳಾ ತಂಡ ಯುವ ಆಟಗಾರ್ತಿ ಇ ಪಂತೋಯ್ ಅವರು ಮಹಿಳೆಯರ ವಿಭಾಗದ ಉದಯೋನ್ಮುಖ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಕೇರಳ ಫುಟ್ಬಾಲ್ ಸಂಸ್ಥೆಗೆ ಈ ಬಾರಿಯೂ ಉತ್ತಮ ಕ್ರೀಡಾಭಿವೃದ್ಧಿ ಕಾರ್ಯಕ್ರಮಗಳ ನೀಡಿದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಅಂತೆಯೇ ಭಾರತೀಯ ಫುಟ್ಬಾಲ್ಗೆ ದೀರ್ಘಕಾಲದ ಕೊಡುಗೆ ನೀಡಿದ ಅತ್ಯುತ್ತಮ ಸಂಸ್ಥೆ ವಿಭಾಗದಲ್ಲಿ ಖ್ಯಾತ ದ್ವಿಚಕ್ರವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೋಕಾರ್ಪ್ ಗೆ ಪ್ರಶಸ್ತಿ ದಕ್ಕಿದೆ. 2017ನೇ ಸಾಲಿನ ಉತ್ತಮ ರೆಫರಿ ವಿಭಾಗದಲ್ಲಿ ಸಿಆರ್ ಕೃಷ್ಣನ್ ಮತ್ತು 2017ನೇ ಸಾಲಿನ ಸಹಾಯಕ ರೆಫರಿ ವಿಭಾಗದಲ್ಲಿ ಅಸ್ಸಾಂನ ಸುಮಂತಾ ದತ್ತಾ ಅವರಿಗೆ ಪ್ರಶಸ್ತಿ ಲಭಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
FootballMumbaiಮುಂಬೈಫುಟ್ಬಾಲ್Sunil ChhetriAIFFಸುನಿಲ್ ಚೇಟ್ರಿAIFF Awards 2017ಐಎಎಫ್ಎಫ್ಐಎಎಫ್ಎಫ್ ಪ್ರಶಸ್ತಿಗಳು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


