ಫೀಫಾ ವಿಶ್ವಕಪ್ 2018: ಸೆಮಿಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂಗೆ ಗೆಲುವು, ಅಚಿಲ್ಸ್ ಬೆಕ್ಕು ಭವಿಷ್ಯ!
ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಮಂಗಳವಾರ ಬೆಲ್ಜಿಯಂ ಮತ್ತು ಪ್ರಬಲ ಫ್ರಾನ್ಸ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಬೆಲ್ಡಿಯಂ ತಂಡ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.

Published On :
ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಮಂಗಳವಾರ ಬೆಲ್ಜಿಯಂ ಮತ್ತು ಪ್ರಬಲ ಫ್ರಾನ್ಸ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಬೆಲ್ಡಿಯಂ ತಂಡ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.
ಹೌದು.. ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸೋಲು ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಏತನ್ಮಧ್ಯೆ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಭವಿಷ್ಯದ ಮೂಲಕ ಭಾರಿ ಸದ್ದು ಮಾಡಿರುವ ಅಚಿಲ್ಸ್ ಬೆಕ್ಕು ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಸೆಮಿಫೈನಲ್ ಪಂದ್ಯದ ಕುರಿತ ಭವಿಷ್ಯ ನುಡಿಯುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಟೂರ್ನಿಯಲ್ಲಿ ಸದ್ಯ ಎರಡೂ ತಂಡಗಳು ಸಮಬಲವಾಗಿದ್ದು, ಈ ಹಿಂದಿನ ಅಂಕಿ ಅಂಶಗಳು ಫ್ರಾನ್ಸ್ ಪರ ಇದೆ.
ಅಚಿಲ್ಸ್ ಪ್ರಕಾರ ಇಂದು ಗೆಲ್ಲುವವರು ಯಾರು?
ಇಂದು ನಡೆಯುವ ಮೊದಲ ಸೆಮಿಫೈನಲ್ ನಲ್ಲಿ ಪಂದ್ಯದಲ್ಲಿ ಪ್ರಬಲ ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಬೆಲ್ಜಿಯಂ ತಂಡ ಮಣಿಸಲಿದೆ ಎಂದು ಅಚಿಲ್ಸ್ ಬೆಕ್ಕು ಭವಿಷ್ಯ ನುಡಿದಿದೆ. ಈ ಹಿಂದೆ ಆಚಿಲ್ಸ್ ನುಡಿದಿದ್ದ ಭವಿಷ್ಯ ನಿಜವಾಗಿದ್ದು ಉದ್ಘಾಟನಾ ಪಂದ್ಯದಲ್ಲಿ ರಷ್ಯಾ ಗೆಲುವು ಸಾಧಿಸಲಿದೆ ಎಂದಿತ್ತು. ಅದರಂತೆ ರಷ್ಯಾ ಹಾಗೂ ಸೌದಿ ಅರೇಬಿಯಾ ನಡುವಣ ಪಂದ್ಯದಲ್ಲಿ ರಷ್ಯಾ 5-0 ಅಂತರದ ಗೆಲುವು ದಾಖಲಿಸಿತ್ತು.
ಇದೀಗ ಸೆಮಿಸ್ ಬಗ್ಗೆ ಆಚಿಲ್ಸ್ ಭವಿಷ್ಯ ನುಡಿದಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದೆ ಎಂದು ಕಾದು ನೋಡಬೇಕು. ಬಿಳಿ ಬಣ್ಣದ ಆಚಿಲ್ಸ್ ಗೆ ಕಿವಿ ಕೇಳದಿರುವುದು ವಿಶೇಷ. ನೀಲಿ ಕಂಗಳನ್ನು ಹೊಂದಿರುವ ಈ ಬೆಕ್ಕು ಭವಿಷ್ಯ ನುಡಿಯುವ ಮೂಲಕ ಪ್ರಸಿದ್ದಿ ಪಡೆದಿತ್ತು. ಇಂದು ರಾತ್ರಿ 11.30ಕ್ಕೆ ಮೊದಲ ಸೆಮಿ ಫೈನಲ್ ಪಂದ್ಯ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
FranceBelgiumಫ್ರಾನ್ಸ್Moscowಮಾಸ್ಕೋಬೆಲ್ಜಿಯಂFIFA World cup 20181st Semifinalಮೊದಲ ಸೆಮಿಫೈನಲ್ಫೀಫಾ ವಿಶ್ವಕಪ್ 2018Achilles Catಅಚಿಲ್ಸ್ ಬೆಕ್ಕು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


