ವಿಕೆಟ್ ಕಿತ್ತು, ಸಂಭ್ರಮಾಚರಣೆ ವೇಳೆ ಬೌಲರ್ ಮಾಡಿದ ಮ್ಯಾಜಿಕ್ ವೈರಲ್!ಕ್ರಿಕೆಟ್ ಅಂಗಳದಲ್ಲಿ ವಿಚಿತ್ರ ಸಂಭ್ರಮಾಚರಣೆ ಸಾಮಾನ್ಯ. ಆದರೆ ಇಲ್ಲೊಬ್ಬ ಬೌಲರ್ ವಿಕೆಟ್ ಕಿತ್ತು ಸಂಭ್ರಮದ ವೇಳೆ ಮ್ಯಾಜಿಕ್ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ಪಂತ್!ಟೀಮ್ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಇದೇ ಭಾನುವಾರ ಆರಂಭವಾಗುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ-20 ಸರಣಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ನ ಬೌಲಿಂಗ್ ದಂತಕಥೆ ಬಾಬ್ ವಿಲ್ಲೀಸ್ ನಿಧನಇಂಗ್ಲೆಂಡ್ನ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾದ ಬಾಬ್ ವಿಲ್ಲೀಸ್ (Bob Willis) ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಐಸಿಸಿ ಟೆಸ್ಟ್ ರ್ಯಾಂಕಿಂಗ್: ಸ್ಟೀವ್ ಸ್ಮಿತ್ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬುಧವಾರ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಬೆಳಗಾವಿ ಪ್ಯಾಂಥರ್ಸ್ ತಂಡದ ನಿರ್ದೇಶಕ ಸುಧೀಂದ್ರ ಶಿಂಧೆ ಬಂಧನಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಹೊಸ ಹೊಸ ಹೆಸರುಗಳು ತಳುಕು ಹಾಕಿಕೊಳ್ಳುತ್ತಿದ್ದು, ಈಗ ಸಿಸಿಬಿ ಪೊಲೀಸರು ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ) ಸದಸ್ಯರೊಬ್ಬರನ್ನು ಬಂಧಿಸಿದ್ದಾರೆ.
ರಣಜಿ: ಕರ್ನಾಟಕದ ಸಂಭಾವ್ಯ ತಂಡ ಪ್ರಕಟಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿ ಹಾಗೂ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಮೇಲೆ ಕಣ್ಣು ನೆಟ್ಟಿದ್ದು, ಸಂಭಾವ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
2020ರ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಹೆಸರಿಲ್ಲಇದೇ 19 ರಂದು ಕೋಲ್ಕತಾದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯ ಆಟಗಾರರ ಹರಾಜು ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಹೆಸರು ಇಲ್ಲ
ರಾತ್ರಿ ಟ್ರೋಫಿ ಗೆದ್ದು ಬೆಳಗ್ಗೆ ನಟಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆನಿನ್ನೆಯಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಕರ್ನಾಟಕದ ಮುಡಿಗೇರಿಸಿ ಸಂಭ್ರಮಿಸಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಇಂದು ತಮಿಳು ನಟಿ ಆಶ್ರಿತಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬದುಕಿನ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಭವಿಷ್ಯದಲ್ಲಿ ವಾರ್ನರ್ ನನ್ನ ದಾಖಲೆ ಮುರಿಯಲಿದ್ದಾರೆ- ಬ್ರಿಯಾನ್ ಲಾರಾಪಾಕಿಸ್ತಾನ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ತ್ರಿ ಶತಕ ಪೂರೈಸಿ ಬ್ರಿಯಾನ್ ಲಾರಾ ಅವರ 400 ರನ್ ದಾಖಲೆ ಮುರಿಯುವತ್ತ ಸಾಗುತ್ತಿದ್ದ ವೇಳೆ ಡಿಕ್ಲೇರ್ ಘೋಷಿಸಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ನಿರ್ಧಾರಕ್ಕೆ ಸ್ವತಃ ವೆಸ್ಟ್ ಇಂಡೀಸ್ ದಂತಕತೆಯೇ ಬೇಸರ ವ್ಯಕ್ತಪಡಿಸಿದ್ದಾರೆ.
ಅಂಡರ್ 19 ವಿಶ್ವಕಪ್ ಗೆ ಭಾರತ ತಂಡ ಪ್ರಕಟ; ಪ್ರಿಯಂ ಗಾರ್ಗ್ ಸಾರಥ್ಯ!ಮುಂದಿನ ವರ್ಷ ನಡೆಯಲಿರುವ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಉದಯೋನ್ಮುಖ ಆಟಗಾರ ಪ್ರಿಯಂ ಗಾರ್ಗ್ ಸಾರಥ್ಯವಹಿಸಿದ್ದಾರೆ.
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!
ರಾಜಕೀಯಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral