ಕ್ರಿಕೆಟ್

'ಹಾರ್ದಿಕ್ ಪಾಂಡ್ಯ ಒಪ್ಪಿಕೊಂಡಿದ್ದಾರೆ; MI ಸೋಲಿನ ಹೊಣೆಯನ್ನು ಸೂರ್ಯಕುಮಾರ್ ಯಾದವ್, ಬುಮ್ರಾ ಕೂಡ ಹೊರಬೇಕು'

ಮುಂಬೈ ತಂಡದ ದಿಗ್ಗಜರ ಫಾರ್ಮ್ ಕಳವಳಕಾರಿಯಾಗಿದೆ. ಸೂರ್ಯಕುಮಾರ್ ಯಾದವ್ 8 ಪಂದ್ಯಗಳಲ್ಲಿ 20ರ ಸರಾಸರಿಯಲ್ಲಿ ಕೇವಲ 162 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ವೇಗಿ ಜಸ್ಪ್ರೀತ್ ಬುಮ್ರಾ ಎಂಟು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ ಪಡೆದಿದ್ದಾರೆ.

'ಹಾರ್ದಿಕ್ ಪಾಂಡ್ಯ ಒಪ್ಪಿಕೊಂಡಿದ್ದಾರೆ; MI ಸೋಲಿನ ಹೊಣೆಯನ್ನು ಸೂರ್ಯಕುಮಾರ್ ಯಾದವ್, ಬುಮ್ರಾ ಕೂಡ ಹೊರಬೇಕು'
ಹಾರ್ದಿಕ್ ಪಾಂಡ್ಯ
Published On :

ಮುಂಬೈ ಇಂಡಿಯನ್ಸ್ (MI) ತಂಡ ಐಪಿಎಲ್ 2026ನೇ ಆವೃತ್ತಿಯಲ್ಲಿ ಈಗಾಗಲೇ ಆಡಿರುವ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋಲು ಕಾಣುವ ಮೂಲಕ ಪ್ಲೇಆಫ್‌ಗೆ ತಲುಪುವ ನಿರೀಕ್ಷೆಗಳ ಮೇಲೆ ತಡೆಯುಂಟುಮಾಡಿದೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಹಿಂದಿನ ಪಂದ್ಯದಲ್ಲಿ 243 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಬಳಿಕ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ವಿರುದ್ಧ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವೆಸ್ಟ್ ಇಂಡೀಸ್‌ನ ಮಾಜಿ ವೇಗದ ಬೌಲರ್ ಮತ್ತು ಖ್ಯಾತ ನಿರೂಪಕ ಇಯಾನ್ ಬಿಷಪ್, ಮುಂಬೈ ತಂಡದ ಕಳಪೆ ಪ್ರದರ್ಶನದ ಹೊಣೆಯನ್ನು ಹಾರ್ದಿಕ್ ಮಾತ್ರ ತೆಗೆದುಕೊಳ್ಳಬಾರದು. ಡಗೌಟ್‌ನಲ್ಲಿರುವ ಇತರ ದೊಡ್ಡ ಹೆಸರುಗಳು ಸಹ ಹೊರಬೇಕು ಎಂದು ಹೇಳಿದ್ದಾರೆ.

'ಅವರ (MI) ಯಶಸ್ಸಿನ ಕೊರತೆಯನ್ನು ಒಬ್ಬ ವ್ಯಕ್ತಿಯ ಜವಾಬ್ದಾರಿ ಎಂದು ಹೇಳಲು ಆಗುವುದಿಲ್ಲ. ಹಾರ್ದಿಕ್ ತಮ್ಮ ಫಾರ್ಮ್ ಉತ್ತಮವಾಗಬೇಕಿತ್ತು ಎಂದು ಒಪ್ಪಿಕೊಂಡಿದ್ದಾರೆ. ತಂತ್ರದ ದೃಷ್ಟಿಯಿಂದ, ಬಹುಶಃ ಅವರು ಸ್ವಲ್ಪ ವಿಭಿನ್ನವಾಗಿ ಕಾರ್ಯನಿರ್ವಹಿಸಬಹುದಾಗಿತ್ತು. ಅವರಿಗೆ ತಮ್ಮ ದೊಡ್ಡ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ' ಎಂದು ಇಯಾನ್ ಬಿಷಪ್ NDTVಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಒಬ್ಬ ನಾಯಕನಾಗಿ, ನೀವು ಎಲ್ಲ ಯೋಜನೆಗಳನ್ನು ಹೊಂದಬಹುದು. ಆದರೆ, ನಿಮ್ಮ ಆಟಗಾರರು ಪ್ರದರ್ಶನ ನೀಡದಿದ್ದರೆ, ನೀವು ತೊಂದರೆಯಲ್ಲಿರುತ್ತೀರಿ. ಕೀರನ್ ಪೊಲಾರ್ಡ್ ಅಥವಾ ಮಹೇಲಾ ಜಯವರ್ಧನೆ ಹೇಳಿದಂತೆ, ಇದರಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ಒಬ್ಬ ವ್ಯಕ್ತಿ ಮಾತ್ರ ಆಪಾದನೆಯನ್ನು ತೆಗೆದುಕೊಳ್ಳಬೇಕೆಂದು ನಾನು ಭಾವಿಸುವುದಿಲ್ಲ' ಎಂದು ಇಎಸ್‌ಪಿಎನ್‌ಕ್ರಿಕ್‌ಇಫೊ ತಜ್ಞ ಬಿಷಪ್, ಐಪಿಎಲ್ 2026ರ 'ರಿವೆಂಜ್ ವೀಕ್' ಸುತ್ತಲಿನ ಸಂವಾದದಲ್ಲಿ ಹೇಳಿದರು.

ಮುಂಬೈ ತಂಡದ ದಿಗ್ಗಜರ ಫಾರ್ಮ್ ಕಳವಳಕಾರಿಯಾಗಿದೆ. ಸೂರ್ಯಕುಮಾರ್ ಯಾದವ್ ಎಂಟು ಪಂದ್ಯಗಳಲ್ಲಿ 20ರ ಸರಾಸರಿಯಲ್ಲಿ ಕೇವಲ 162 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ವೇಗಿ ಜಸ್ಪ್ರೀತ್ ಬುಮ್ರಾ ಎಂಟು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ ಐಪಿಎಲ್‌ನಲ್ಲಿ ಅತ್ಯಂತ ಕಠಿಣ ಆವೃತ್ತಿಯನ್ನು ಎದುರಿಸುತ್ತಿದ್ದಾರೆ.

2026ರ ಟಿ20 ವಿಶ್ವಕಪ್ ಗೆದ್ದ ನಂತರ ಬುಮ್ರಾ ಮತ್ತು ಸೂರ್ಯಕುಮಾರ್ ಅವರಂತಹ ಆಟಗಾರರು ದೀರ್ಘ ವಿರಾಮ ಪಡೆದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಬಿಷಪ್ ಸಲಹೆ ನೀಡಿದರು.

'ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ತವರಿನಲ್ಲಿ ಟಿ20 ವಿಶ್ವಕಪ್ ಗೆಲ್ಲಲು ಅಪಾರ ಪ್ರಮಾಣದ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವ್ಯಯಿಸಿರಬೇಕು. ಅದಕ್ಕಾಗಿಯೇ, ನಿರಂತರವಾಗಿ ಆಡುವ ಬದಲು ವಿಶ್ರಾಂತಿ ಪಡೆಯಲು, ಚೇತರಿಸಿಕೊಳ್ಳಲು, ಅವರ ಪ್ರದರ್ಶನವನ್ನು ಪರಿಶೀಲಿಸಲು ಮತ್ತು ಅವರ ಕೌಶಲ್ಯಗಳನ್ನು ಸುಧಾರಿಸಲು ಅವರಿಗೆ ವಿರಾಮ ನೀಡಬೇಕಾಗಿತ್ತು, ವಿಶೇಷವಾಗಿ ಬುಮ್ರಾಗೆ' ಎಂದು ಬಿಷಪ್ ಹೇಳಿದರು.

ಐಪಿಎಲ್ 2026ರ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಯಾವುದೇ ಅವಕಾಶವನ್ನು ಉಳಿಸಿಕೊಳ್ಳಲು ಎಂಐ ತನ್ನ ಉಳಿದ ಆರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.