ಕ್ರಿಕೆಟ್

ಪಾಕಿಸ್ತಾನ ಸೂಪರ್ ಲೀಗ್ ತೊರೆಯುವಂತೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಡೆರಿಲ್ ಮಿಚೆಲ್‌ ಸೇರಿದಂತೆ ವಿದೇಶಿ ಆಟಗಾರರಿಗೆ ಎಚ್ಚರಿಕೆ!

ಕ್ರಿಕೆಟ್ ಅನ್ನು ಕ್ರೀಡೆಯಾಗಿ ವಿರೋಧಿಸುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿ ಸದ್ಯದ ಭದ್ರತಾ ಪರಿಸ್ಥಿತಿಯು ಅಂತರರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಉನ್ನತ ಮಟ್ಟದ ಪಂದ್ಯಾವಳಿಯನ್ನು ನಡೆಸಲು ಸೂಕ್ತವಲ್ಲ ಎಂದು ಗುಂಪು ವಾದಿಸಿದೆ.

ಪಾಕಿಸ್ತಾನ ಸೂಪರ್ ಲೀಗ್ ತೊರೆಯುವಂತೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಡೆರಿಲ್ ಮಿಚೆಲ್‌ ಸೇರಿದಂತೆ ವಿದೇಶಿ ಆಟಗಾರರಿಗೆ ಎಚ್ಚರಿಕೆ!
ಸ್ಟೀವ್ ಸ್ಮಿತ್ - ಡೇವಿಡ್ ವಾರ್ನರ್
Published On :

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೇವಲ ಎರಡು ನಗರಗಳಲ್ಲಿ ಮತ್ತು ಮುಚ್ಚಿದ ಬಾಗಿಲುಗಳ ಹಿಂದೆ 2026ರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆವೃತ್ತಿಯನ್ನು ಆಯೋಜಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಭಾನುವಾರ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಸರ್ಕಾರದ ನಿರ್ದೇಶನವನ್ನು ದೃಢಪಡಿಸಿದರು. ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಇಂಧನ ಬೆಲೆಗಳು ಗಗನಕ್ಕೇರುತ್ತಿರುವುದು ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳಾಗಿವೆ. ಇದೀಗ, ಪಿಎಸ್ಎಲ್‌ನಲ್ಲಿ ಭಾಗವಹಿಸಲಿರುವ ವಿದೇಶಿ ಆಟಗಾರರನ್ನು ಪಂದ್ಯಾವಳಿಯಿಂದ ಹಿಂದೆ ಸರಿಯುವಂತೆ ಅಥವಾ ಭೀಕರ ಪರಿಣಾಮಗಳನ್ನು ಎದುರಿಸುವಂತೆ ಬೆದರಿಕೆ ಒಡ್ಡಲಾಗಿದೆ ಎಂದು ವರದಿಗಳು ಹೊರಬಿದ್ದಿವೆ.

ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಡೆರಿಲ್ ಮಿಚೆಲ್‌ ಅವರಂತಹ ವಿದೇಶಿ ಆಟಗಾರರು ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿ ಪಾಕಿಸ್ತಾನದ ಸಶಸ್ತ್ರ ಪ್ರತಿಪಕ್ಷ ಗುಂಪು (AOG) ಜಮಾತ್-ಉಲ್-ಅಹ್ರಾರ್ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಿದೆ. ಆಟಗಾರರು ಟಿ20 ಲೀಗ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದರೆ, ಅವರ ಸುರಕ್ಷತೆ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ ಎಂದು ಗುಂಪು ತೀವ್ರ ಎಚ್ಚರಿಕೆ ನೀಡಿದೆ.

ಕ್ರಿಕೆಟ್ ಅನ್ನು ಕ್ರೀಡೆಯಾಗಿ ವಿರೋಧಿಸುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿ ಸದ್ಯದ ಭದ್ರತಾ ಪರಿಸ್ಥಿತಿಯು ಅಂತರರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಉನ್ನತ ಮಟ್ಟದ ಪಂದ್ಯಾವಳಿಯನ್ನು ನಡೆಸಲು ಸೂಕ್ತವಲ್ಲ ಎಂದು ಗುಂಪು ವಾದಿಸಿದೆ.

'ಸಂಬಂಧಿತ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ನಾವು ಸಲಹೆ ನೀಡಲು ಬಯಸುತ್ತೇವೆ. ಅವರಿಗೆ ಏನಾದರೂ ಸಂಭವಿಸಿದರೆ, ಅದು ನಮ್ಮ ಜವಾಬ್ದಾರಿಯಲ್ಲ. ನಾವು ಈಗಾಗಲೇ ನಮ್ಮ ಎಚ್ಚರಿಕೆ ನೀಡಿದ್ದೇವೆ' ಎಂದು ಜಮಾತ್-ಉಲ್-ಅಹ್ರಾರ್‌ನ ಕಮಾಂಡರ್ ದಿ ಸಂಡೇ ಗಾರ್ಡಿಯನ್‌ಗೆ ತಿಳಿಸಿದ್ದಾರೆ.

ಆಟಗಾರರು ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ ಗುಂಪು ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕೇಳಿದಾಗ, 'ನಮ್ಮ ಸಾಮರ್ಥ್ಯದಲ್ಲಿ ನಾವು ಏನು ಬೇಕಾದರೂ ಮಾಡುತ್ತೇವೆ. ಆದರೆ, ಪಂದ್ಯಗಳು ನಡೆಯಲು ನಾವು ಬಿಡುವುದಿಲ್ಲ. ಪಂದ್ಯಾವಳಿ ನಡೆಯದಂತೆ ಮತ್ತು ಆಟಗಾರರು ಮೈದಾನಕ್ಕೆ ಇಳಿಯದಂತೆ ತಡೆಯಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ' ಎಂದರು.

ಈ ವರ್ಷದ PSL ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಆಡಮ್ ಜಂಪಾ ಸೇರಿದಂತೆ ಹಲವಾರು ಉನ್ನತ ಮಟ್ಟದ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ. ಜೊತೆಗೆ, ಇಂಗ್ಲೆಂಡ್‌ನ ಮೊಯಿನ್ ಅಲಿ ಮತ್ತು ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಕೂಡ ಇದ್ದಾರೆ. ಪಿಸಿಬಿ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದರೂ, ಇತ್ತೀಚಿನ ಬದಲಾವಣೆಗಳಿಗೆ ಅಧಿಕೃತವಾಗಿ ಈ ಬೆದರಿಕೆಗಳು ಕಾರಣ ಎಂದು ಹೇಳಲಾಗಿಲ್ಲ. ಮಾರ್ಚ್ 26 ರಂದು ಈ ಆವೃತ್ತಿ ಆರಂಭವಾಗಲಿದ್ದು, ಇದೀಗ ಎಲ್ಲರ ಕಣ್ಣುಗಳು ಪಿಸಿಬಿ ಮತ್ತು ಅಂತರರಾಷ್ಟ್ರೀಯ ಆಟಗಾರರ ಮೇಲೆ ನೆಟ್ಟಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.