ಕ್ರಿಕೆಟ್

Video: ದೆಹಲಿ ಬೀದಿಯಲ್ಲಿ RCB ಆಟಗಾರರ ಗಲ್ಲಿ ಕ್ರಿಕೆಟ್; Tim David ಸಿಕ್ಸರ್ ಗಳ ಸುರಿಮಳೆ!

ಇಂದು ದೆಹಲಿ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಆಟಗಾರರು ಬಿಡುವಿನ ಸಂದರ್ಭದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

Video: ದೆಹಲಿ ಬೀದಿಯಲ್ಲಿ RCB ಆಟಗಾರರ ಗಲ್ಲಿ ಕ್ರಿಕೆಟ್; Tim David ಸಿಕ್ಸರ್ ಗಳ ಸುರಿಮಳೆ!
ಗಲ್ಲಿ ಕ್ರಿಕೆಟ್ ಆಡಿದ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೇಫರ್ಡ್
Published On :

ನವದೆಹಲಿ: ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತದಲ್ಲಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಮತ್ತು ವಿಂಡೀಸ್ ದೈತ್ಯ ಆಲ್ರೌಂಡರ್ ರೊಮಾರಿಯೋ ಶೇಫೆರ್ಡ್ ದೆಹಲಿಯಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಾಗಿರುವ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಗಲ್ಲಿ ಕ್ರಿಕೆಟ್ ಆಡಿದ್ದಾರೆ.

ಇಂದು ದೆಹಲಿ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಆಟಗಾರರು ಬಿಡುವಿನ ಸಂದರ್ಭದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

ಮೈಸುಡುವ ಬಿಸಿಲಿನ ನಡುವೆಯೇ ಭರ್ಜರಿ ಸಿಕ್ಸರ್ ಗಳು

ಇನ್ನು ದೆಹಲಿಯಲ್ಲಿ 45 ಡಿಗ್ರಿ ತಾಪಮಾನವಿದ್ದರೂ ಅದನ್ನು ಲೆಕ್ಕಿಸದ ಟಿಮ್ ಡೇವಿಡ್ ಟೆನ್ನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡಿದ್ದು ಮಾತ್ರವಲ್ಲದೇ ಅವರು ಹೊಡೆದ ಸಿಕ್ಸರ್ ಗಳು ವಸತಿ ಕಟ್ಟಡಗಳ ಮೇಲಿಂದ ಹಾರಿ ಹೋಯಿತು.

ತಾವು ಅಂತಾರಾಷ್ಟ್ರೀಯ ಆಟಗಾರರಾಗಿದ್ದರೂ ಯಾವುದೇ ಬಿಗಿ ಭದ್ರತೆ ಇಲ್ಲದೆ, ಸುಮಾರು ಒಂದು ಗಂಟೆ ಕಾಲ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಸ್ಥಳೀಯ ಯುವಕರೊಂದಿಗೆ ಬೆರೆತು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು.

ಧೂಳಿನಿಂದ ಕೂಡಿದ ದೆಹಲಿಯ ಕಿರಿದಾದ ಗಲ್ಲಿಗಳಲ್ಲಿ ಇವರು ಕ್ರಿಕೆಟ್ ಆಡುತ್ತಿರುವ ದೃಶ್ಯಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಭಾರಿ ಸದ್ದು ಮಾಡುತ್ತಿವೆ.

ಡೆಲ್ಲಿ-ಬೆಂಗಳೂರು ಸೆಣಸು

ಅಂದಹಾಗೆ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗುತ್ತಿವೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆರ್ ಸಿಬಿ ತಂಡ 7ನೇ ಸ್ಥಾನದಲ್ಲಿರುವ ಡೆಲ್ಲಿ ತಂಡವನ್ನು ಎದುರಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.