ಪಾಟ್ನಾದಿಂದ ಬಂದಿದ್ದೀರಾ? ಅಭಿಮಾನಿಗೆ ತಮಾಷೆ ಮಾಡಿದ ಇಶಾನ್ ಕಿಶನ್; Video ವೈರಲ್!
ತಮ್ಮನ್ನು ಭೇಟಿಯಾಗಲೆಂದೇ ಆ ಕುಟುಂಬ ಪಾಟ್ನಾದಿಂದ ಬಂದಿದೆ ಎಂದು ತಿಳಿದಾಗ, ಕಿಶನ್ ತಮಾಷೆಯಾಗಿ, ಪಾಟ್ನಾದಿಂದ ಬಂದಿದ್ದೀರಾ, ಹಾಗಾದರೆ ಆ ಯುವ ಅಭಿಮಾನಿಯನ್ನು ಒಂದು ಪಂದ್ಯ ಆಡಲು ಬಿಡಲೇ?" ಎಂದು ಹೇಳಿದ್ದಾರೆ.

ಭಾರತದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಭಿಮಾನಿಯೊಂದಿಗೆ ನಡೆಸಿದ ತಮಾಷೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಅಭಿಮಾನಿ ಫೋಟೋಕ್ಕಾಗಿ ಕಿಶನ್ ಬಳಿ ಬಂದಾಗ, ಅವರನ್ನು ಭೇಟಿಯಾಗಲೆಂದೇ ಪಾಟ್ನಾದಿಂದ ಬಂದಿರುವುದಾಗಿ ಪೋಷಕರು ತಿಳಿಸಿದ್ದಾರೆ. ಇದಕ್ಕೆ ಕಿಶನ್ ನೀಡಿದ ತಮಾಷೆಯ ಪ್ರತಿಕ್ರಿಯೆ ಒಂದು ಸಾಮಾನ್ಯ ಫೋಟೋ ಅವಕಾಶವನ್ನು ಸ್ಮರಣೀಯ ಕ್ಷಣವನ್ನಾಗಿ ಮಾಡಿತು.
ತಮ್ಮನ್ನು ಭೇಟಿಯಾಗಲೆಂದೇ ಆ ಕುಟುಂಬ ಪಾಟ್ನಾದಿಂದ ಬಂದಿದೆ ಎಂದು ತಿಳಿದಾಗ, ಕಿಶನ್ ತಮಾಷೆಯಾಗಿ, ಪಾಟ್ನಾದಿಂದ ಬಂದಿದ್ದೀರಾ, ಹಾಗಾದರೆ ಆ ಯುವ ಅಭಿಮಾನಿಯನ್ನು ಒಂದು ಪಂದ್ಯ ಆಡಲು ಬಿಡಲೇ?" ಎಂದು ಹೇಳಿದ್ದಾರೆ.
"ಪಾಟ್ನಾ ಸೆ ಆಯೇ ಹುಯೇ ಹೈ ತೋ ಮ್ಯಾಚ್ ಖಿಲಾ ದೂ ಕ್ಯಾ?" (ಪಾಟ್ನಾದಿಂದ ಬಂದಿದ್ದೀರಾ, ಹಾಗಾದರೆ ಪಂದ್ಯ ಆಡಲು ಬಿಡಲೇ?) ಎಂದು ಅವರು ಹೇಳಿದಾಗ ಅಲ್ಲಿದ್ದವರೆಲ್ಲರೂ ನಗೆಗಡಲಲ್ಲಿ ತೇಲಿದರು. ಈ ಕಿರು ಮಾತುಕತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು, ಕಿಶನ್ ಅವರ ಪ್ರತಿಕ್ರಿಯೆಯು ಆ ವೀಡಿಯೊದ ಪ್ರಮುಖ ಆಕರ್ಷಣೆಯಾಗಿದೆ.
ಭಾರತೀಯ ಬ್ಯಾಟರ್ ಆಗಿರುವ ಇಶಾನ್ ಕಿಶನ್ ಮೈದಾನದ ಹೊರಗೆ ತಮ್ಮ ಲವಲವಿಕೆಯ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಅಭಿಮಾನಿಯೊಂದಿಗಿನ ಈ ಸಂಭಾಷಣೆಯು ಅವರ ತಮಾಷೆಯ ಸ್ವಭಾವದ ಮತ್ತೊಂದು ಝಲಕ್ ಅನ್ನು ತೋರಿಸಿಕೊಟ್ಟಿದೆ. ಈ ಮಾತುಕತೆ ಯಾವಾಗ ನಡೆಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಧರಿಸಿದ್ದ ಜೆಎಸ್‌ಡಬ್ಲ್ಯೂ (JSW) ಕಿಟ್ ಬದಲಿಗೆ, ಈ ವೀಡಿಯೊದಲ್ಲಿ ಕಿಶನ್ ಬಿಸಿಸಿಐ (BCCI) ಕಿಟ್ ಧರಿಸಿರುವುದು ಕಂಡುಬರುತ್ತದೆ.
ಆ ಯುವ ಅಭಿಮಾನಿ ಕೇವಲ ಫೋಟೋ ಪಡೆಯುವ ನಿರೀಕ್ಷೆಯಿಂದ ಕಿಶನ್ ಬಳಿ ಬಂದಿದ್ದಾರೆ. ಆದರೆ ತಾವು ಪಾಟ್ನಾದಿಂದ ಬಂದಿರುವುದಾಗಿ ಕುಟುಂಬ ನೀಡಿದ ಮಾಹಿತಿಯಿಂದ ಕಿಶನ್ ತ್ವರಿತಗತಿಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಭಾಷಣೆಯು ಅಭಿಮಾನಿಗಳ ಮನಗೆದ್ದಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್ ವಿಭಾಗದಲ್ಲಿ ಭಾರತವು ಚಿನ್ನದ ಪದಕ ಗೆದ್ದ ನಂತರ ಈ ವೀಡಿಯೊ ಹೊರಬಂದಿದೆ. ಆದಾಗ್ಯೂ ಈ ಸಂಭಾಷಣೆ ನಡೆದ ನಿಖರ ಸಮಯ ಯಾವುದು ಎಂಬುದು ಸ್ಪಷ್ಟವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



