ಕ್ರಿಕೆಟ್

'ರಿಷಭ್ ಪಂತ್ ಮೇಲೆ ನನಗೆ ವಿಶ್ವಾಸವಿದೆ': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ LSG ಸೋಲಿಗೆ ಸಂಜೀವ್ ಗೋಯೆಂಕಾ ಪ್ರತಿಕ್ರಿಯೆ!

ಗೋಯೆಂಕಾ ಮೈದಾನದಲ್ಲಿಯೇ ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದವು.

'ರಿಷಭ್ ಪಂತ್ ಮೇಲೆ ನನಗೆ ವಿಶ್ವಾಸವಿದೆ': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ LSG ಸೋಲಿಗೆ ಸಂಜೀವ್ ಗೋಯೆಂಕಾ ಪ್ರತಿಕ್ರಿಯೆ!
ಲಕ್ನೋ ಸೂಪರ್ ಜೈಂಟ್ಸ್
Published On :

ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಆರು ವಿಕೆಟ್‌ ಅಂತರದ ಸೋಲಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 141 ರನ್‌ಗಳಿಗೆ ಆಲೌಟ್ ಮಾಡಿತು. 142 ರನ್ ಗುರಿ ಬೆನ್ನತ್ತಿದ ಡೆಲ್ಲಿ ತಂಡವನ್ನು ಟ್ರಿಸ್ಟಾನ್ ಸ್ಟಬ್ಸ್ ಮತ್ತು ಸಮೀರ್ ರಿಜ್ವಿ 17 ಎಸೆತಗಳು ಬಾಕಿ ಇರುವಾಗಲೇ ಗೆಲುವಿನತ್ತ ಮುನ್ನಡೆಸಿದರು.

ಈ ಸೋಲಿನ ನಂತರ, ಗೋಯೆಂಕಾ ಮೈದಾನದಲ್ಲಿಯೇ ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದವು. ಆದಾಗ್ಯೂ, ಗೋಯೆಂಕಾ ತಮ್ಮ ತಂಡದ ನಾಯಕ ಪಂತ್ ಬಗ್ಗೆ 'ಪೂರ್ಣ ವಿಶ್ವಾಸ' ವ್ಯಕ್ತಪಡಿಸಿದ್ದಾರೆ ಮತ್ತು ತಂಡವು ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತದೆ ಎಂದು ಹೇಳಿದರು.

'ಇದು ಸುದೀರ್ಘ ಆವೃತ್ತಿಯಾಗಿದೆ ಮತ್ತು ಇಂತಹ ಕ್ಷಣಗಳು ಅರ್ಥಪೂರ್ಣವಾದದ್ದನ್ನು ನಿರ್ಮಿಸುವ ಭಾಗವಾಗಿದೆ. ನಮ್ಮ ನಾಯಕ ಮತ್ತು ತಂಡವು ಬಲಿಷ್ಠವಾಗಿ ಬರುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಇಂದು ಏಕಾನಾದಲ್ಲಿ ಬೆಂಬಲ ನೀಡಿದ ನಮ್ಮ ಅಭಿಮಾನಿಗಳಿಗೆ ಧನ್ಯವಾದಗಳು; ನಾವು ಮತ್ತಷ್ಟು ಬಲಿಷ್ಠವಾಗಿ ಹಿಂತಿರುಗುತ್ತೇವೆ. ಈ ಆವೃತ್ತಿಯಲ್ಲಿ ಲಕ್ನೋ ತಂಡದ ಕಥೆ ಬರೆಯಲು ಸಾಕಷ್ಟು ಸಮಯವಿದೆ' ಎಂದು ಗೋಯೆಂಕಾ X ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈಮಧ್ಯೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಿಷಭ್ ಪಂತ್ ಅವರಿಗೆ ಅದೃಷ್ಟ ಕೈಕೊಟ್ಟಿತು. 9 ಎಸೆತಗಳನ್ನು ಎದುರಿಸಿ ಕೇವಲ 7 ರನ್ ಗಳಿಸಿದ್ದ ಪಂತ್ ರನೌಟ್ ಆದರು.

ಎಲ್ಲ ಟಿ20 ಪಂದ್ಯಗಳಲ್ಲಿ ಅವರು ಆರಂಭಿಕರಾಗಿ ಆಡಿರುವ 23 ಪಂದ್ಯಗಳಲ್ಲಿ, ಅವರ ಸ್ಟ್ರೈಕ್-ರೇಟ್ 159 ಆಗಿದ್ದು, ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಒಳಗೊಂಡಿದೆ.

ಐಡನ್ ಮಾರ್ಕ್ರಮ್ ಮತ್ತು ಮಿಚೆಲ್ ಮಾರ್ಷ್ ಅವರ ಬದಲಿಗೆ ತಾವೇ ಇಡೀ ಪಂದ್ಯಾವಳಿಯಲ್ಲಿ ಆರಂಭಿಕರಾಗಿ ಮುಂದುವರಿಯುತ್ತೀರಾ ಎಂದು ಕೇಳಿದಾಗ ಪಂತ್, 'ಇದು 50-50 ಸವಾಲಿನ ಕೆಲಸ' ಎಂದು ಹೇಳಿದರು.

ಅವರ ರನೌಟ್ ಬಗ್ಗೆ ಕೇಳಿದಾಗ, 'ಚೇತರಿಸಿಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ಇದನ್ನು ನಿರ್ಲಕ್ಷಿಸುವುದು. ನೀವು ಅಂತಹದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಅದರ ಬಗ್ಗೆ ಯೋಚಿಸುವುದು ನಿಮ್ಮನ್ನು ಒತ್ತಡಕ್ಕೆ ಒಳಪಡಿಸುತ್ತದೆ' ಎಂದ ಅವರು, ಬ್ಯಾಟಿಂಗ್ ಕುಸಿತದ ನಂತರ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಕರೆತರಬೇಕಾಯಿತು. ಇದರಿಂದ ದಿಗ್ವೇಶ್ ರಾಠಿ ಅವರನ್ನು ಬೆಂಚ್‌ನಲ್ಲಿ ಕೂರಿಸಬೇಕಾಯಿತು ಎಂದರು.

'ನಮಗೆ ಉತ್ತಮ ಜೊತೆಯಾಟ ಮೂಡಿಬರಲಿಲ್ಲ, ಮತ್ತಷ್ಟು ರನ್‌ಗಳ ಕೊರತೆಯಿದ್ದ ಕಾರಣ ಇಂಪ್ಯಾಕ್ಟ್ ಸಬ್ ಆಗಿ ಆಯ್ಕೆಯನ್ನು ಬಳಸಬೇಕಾಯಿತು' ಎಂದರು. ನಿಕೋಲಸ್ ಪೂರನ್ ಅವರಿಗಿಂತ ಆಯುಷ್ ಬದೋನಿ ಅವರನ್ನು ಮುಂದೆ ಕಳುಹಿಸುವ ಕ್ರಮವನ್ನು ಅವರು ಸಮರ್ಥಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.