IPL 2025: ಸಣ್ಣ ನಿರ್ಲಕ್ಷ್ಯದಿಂದ ವಿಕೆಟ್ ಕಳೆದುಕೊಂಡ CSK; ಎಡವಟ್ಟು ಮಾಡಿಕೊಂಡ Dewald Brevis
ಡೆವಾಲ್ಡ್ ಬ್ರೆವಿಸ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಎನ್ಗಿಡಿಗೆ ಎಲ್ ಬಿ ಬಲೆಗೆ ಬಿದ್ದರು. 17ನೇ ಓವರ್ ನಲ್ಲಿ ಎನ್ಗಿಡಿ ಎಸೆದ ಎಸೆತ ನೇರವಾಗಿ ಬ್ರೆವಿಸ್ ಪ್ಯಾಡ್ ಗೆ ಬಿತ್ತು.

ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯಲ್ಲಿ ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ CSK ಮಾಡಿಕೊಂಡ ಮಹಾ ಎಡವಟ್ಟು ತಂಡ ಪ್ರಮುಖ ವಿಕೆಟ್ ಕಳೆದುಕೊಳ್ಳುವಂತೆ ಮಾಡಿತು.
ನಿನ್ನೆ ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ ಜೇಕಬ್ ಬೆಥೆಲ್ (55 ರನ್), ವಿರಾಟ್ ಕೊಹ್ಲಿ (62 ರನ್) ಮತ್ತು ರೊಮಾರಿಯೋ ಶೆಫರ್ಡ್ (ಅಜೇಯ 53 ರನ್) ಅರ್ಧಶತಕಗಳ ನೆರವಿನಿಂದ 213 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಈ ಗುರಿಯನ್ನು ಬೆನ್ನುಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆಯುಶ್ ಮ್ಹಾತ್ರೆ (94 ರನ್), ರವೀಂದ್ರ ಜಡೇಜಾ (77 ರನ್) ಭರ್ಜರಿ ಬ್ಯಾಟಿಗ್ ಹೊರತಾಗಿಯೂ ನಿಗಧಿತ 20 ಓವರ್ ನಲ್ಲಿ 5 ನವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಕೇವಲ 2 ರನ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿತು.
ಈ ಪಂದ್ಯದ ಗೆಲುವಿನೊಂದಿಗೆ ಆರ್ ಸಿಬಿ ತನ್ನ ಅಂಕಗಳಿಕೆಯನ್ನು 16ಕ್ಕೆ ಏರಿಸಿಕೊಂಡಿದ್ದು, ಆ ಮೂಲಕ ಪ್ಲೇಆಫ್ ನಲ್ಲಿ ಬಹುತೇಕ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ.

IPL 2025: RCB vs CSK ಪಂದ್ಯದ ನಂತರ ಪರಸ್ಪರ ಕೈ-ಕೈ ಮಿಲಾಯಿಸಿದ ಅಭಿಮಾನಿಗಳ; ಪೊಲೀಸರ ಮಧ್ಯಪ್ರವೇಶ! video
ಚೇಸಿಂಗ್ ವೇಳೆ ಸಿಎಸ್ ಕೆ ಎಡವಟ್ಟು
ಇನ್ನು ಆರ್ ಸಿಬಿ ನೀಡಿದ್ದ 214 ರನ್ ಗಳ ಬೃಹತ್ ಗುರಿಯನ್ನು ಬೆನ್ನ ಹತ್ತಿದ್ದ ಸಿಎಸ್ ಕೆ ಪಂದ್ಯ ಗೆಲ್ಲುವ ಹಂತದಲ್ಲಿತ್ತು. ಈ ಹಂತದಲ್ಲಿ 94 ರನ್ ಗಳಿಸಿ ಅಪಾಯಕಾರಿಯಾಗಿದ್ದ ಆಯುಶ್ ಮ್ಹಾತ್ರೆ ಎನ್ಗಿಡಿ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಡೆವಾಲ್ಡ್ ಬ್ರೆವಿಸ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಎನ್ಗಿಡಿಗೆ ಎಲ್ ಬಿ ಬಲೆಗೆ ಬಿದ್ದರು. 17ನೇ ಓವರ್ ನಲ್ಲಿ ಎನ್ಗಿಡಿ ಎಸೆದ ಎಸೆತ ನೇರವಾಗಿ ಬ್ರೆವಿಸ್ ಪ್ಯಾಡ್ ಗೆ ಬಿತ್ತು. ಈ ವೇಳೆ ಬೌಲರ್ ಅಪೀಲ್ ಮಾಡಿದಾಗ ಅಂಪೈರ್ ಔಟ್ ನೀಡಿದರು.
ಎಡವಟ್ಟು ಮಾಡಿಕೊಂಡ Dewald Brevis
ಈ ಹಂತದಲ್ಲಿ ಇದಾವುದರ ಪರಿವೇ ಇಲ್ಲದೇ ಬ್ರೆವಿಸ್ ಮತ್ತು ರವೀಂದ್ರ ಜಡೇಜಾ 2 ರನ್ ಓಡುವುದರಲ್ಲಿ ಮಗ್ನರಾಗಿದ್ದರು. ಆದರೆ ಈ ಹಂತದಲ್ಲಿ ಸಿಎಸ್ ಕೆ ಡಗೌಟ್ ನಿಂದ ಕೂಗು ಕೇಳಿಬರುತ್ತಿದ್ದಂತೆಯೇ ಎಚ್ಚೆತ್ತ ಬ್ರೆವಿಸ್ ಡಿಆರ್ ಎಸ್ ಕೇಳಿದರು. ಆದರೆ ಅಷ್ಟು ಹೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು.
ಡಿಆರ್ ಎಸ್ ಕೇಳಲು ಇದ್ದ 15 ಸೆಕೆಂಡ್ ಗಳ ಬದಲಿಗೆ ಅಂಪೈರ್ ಔಟ್ ಕೊಟ್ಟ 25 ಸೆಕೆಂಡ್ ಗೆ ಬ್ರೆವಿಸ್ ಡಿಆರ್ ಎಸ್ ಕೇಳಿದರು. ಹೀಗಾಗಿ ಅಂಪೈರ್ ಡಿಆರ್ ಎಸ್ ಸಮಯ ಮುಗಿದಿದೆ ಎಂದು ಹೇಳಿ ಡಿಆರ್ ಎಸ್ ನಿರಾಕರಿಸಿದರು. ಈ ವೇಳೆ ಮೈದಾನದಲ್ಲಿ ರವೀಂದ್ರ ಜಡೇಜಾ ಅಂಪೈರ್ ಜೊತೆ ಚರ್ಚೆ ನಡೆಸಿದರೂ ಅಂಪೈರ್ ಗಳು ಡಿಆರ್ ಎಸ್ ಗೆ ಅವಕಾಶ ನೀಡಲಿಲ್ಲ. ಹೀಗಾಗಿ ಬ್ರೆವಿಸ್ ಮರುಮಾತಿಲ್ಲದೇ ಹೊರನಡೆದರು.
ಪರದೆ ಮೇಲೆ ಕಾಣಲಿಲ್ಲವೇ ಟೈಮ್
ಇನ್ನು ಸಾಮಾನ್ಯವಾಗಿ ಅಂಪೈರ್ ಔಟ್ ಕೊಟ್ಟ ತಕ್ಷಣದಿಂದಲೇ ಪರದೆ ಮೇಲೆ ಟೈಮ್ ಕಾಣುತ್ತದೆ. ಆದರೆ ಬ್ರೆವಿಸ್ ಔಟಾದಾಗ ಟಿವಿ ಪರದೆ ಮೇಲೆ ಟೈಮ್ ಕಾಣಲಿಲ್ಲ. ಇದನ್ನೇ ಸಿಎಸ್ ಕೆ ಅಂಪೈರ್ ಗಳು ಫಿಕ್ಸಿಂಗ್ ಎಂದು ಕಿಡಿಕಾರುತ್ತಿದ್ದಾರೆ. ಆದರೆ ಮೈದಾನದಲ್ಲಿ ಇರುವ ದೊಡ್ಡ ಪರದ ಮೇಲೆ ಟೈಮ್ ಪ್ರದರ್ಶನ ಮಾಡಲಾಗುತ್ತದೆ. ಅದಾಗ್ಯೂ ಬ್ರೆವಿಸ್ ಅತ್ತ ನೋಡದೇ ಡಿಆರ್ಎಸ್ ಪಡೆಯದೇ ಎಡವಟ್ಟು ಮಾಡಿಕೊಂಡರು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಬ್ರೇವಿಸ್ ನಾಟೌಟ್
ಇನ್ನು ಆ ಎಸೆತದಲ್ಲಿ ಬ್ರೆವಿಸ್ ಅಸಲಿಗೆ ಔಟಾಗಿರಲಿಲ್ಲ. ಚೆಂಡು ಪ್ಯಾಡ್ ಗೆ ತಗುಲಿ ಸ್ಟಂಪ್ ನಿಂದ ಹೊರಕ್ಕೆ ಸಾಗಿತ್ತು. ಒಂದು ವೇಳೆ ಬ್ರೆವಿಸ್ ಡಿಎರ್ ಎಸ್ ಪಡೆದಿದ್ದರೆ ನಾಟೌಟ್ ಆಗುವ ಸಾಧ್ಯತೆ ಇತ್ತು. ಆದರೆ ಅವರೇ ಮಾಡಿಕೊಂಡ ಎಡವಟ್ಟಿನಿಂದಾಗಿ ವಿಕೆಟ್ ಒಪ್ಪಿಸಿದ್ದಾರೆ. ಇದೇ ವಿಚಾರವಾಗಿ ಸಿಎಸ್ ಕೆ ಕೋಚ್ ಫ್ಲೆಮಿಂಗ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, 'ಇದು ಒಂದು ದೊಡ್ಡ ಕ್ಷಣವಾಗಿತ್ತು. ಬ್ಯಾಟ್ಸ್ಮನ್ಗಳಾದ ಡೆವಾಲ್ಡ್ ಬ್ರೆವಿಸ್ ಮತ್ತು ರವೀಂದ್ರ ಜಡೇಜಾ ಸಾಕಷ್ಟು ಜಾಗರೂಕರಾಗಿರದ ಕಾರಣ ಸಿಎಸ್ಕೆ ವಿಕೆಟ್ ಕಳೆದುಕೊಂಡಿತು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


