ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್, ಭಾರತ ಎ ತಂಡದ ದಾಂಡಿಗ ಕಂಗಾಲು; ವಿಡಿಯೋ ವೈರಲ್!
ಬ್ಯಾಟ್ಸ್ ಮನ್ ಗಳು ಕೆಲವೊಮ್ಮೆ ವಿಚಿತ್ರವಾಗಿ ರನೌಟ್ ಆಗಿ ಪೆವಿಲಿಯನ್ ಸೇರುತ್ತಾರೆ. ಅಂತೆ ಭಾರತ ಎ ತಂಡದ ದಾಂಡಿಗ ಜಯದೇವ್ ಉನದ್ಕಟ್ ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಬೆಂಗಳೂರು: ಬ್ಯಾಟ್ಸ್ ಮನ್ ಗಳು ಕೆಲವೊಮ್ಮೆ ವಿಚಿತ್ರವಾಗಿ ರನೌಟ್ ಆಗಿ ಪೆವಿಲಿಯನ್ ಸೇರುತ್ತಾರೆ. ಅಂತೆ ಭಾರತ ಎ ತಂಡದ ದಾಂಡಿಗ ಜಯದೇವ್ ಉನದ್ಕಟ್ ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಬಿ ತಂಡ 50 ಓವರ್ ಗಳಲ್ಲಿ 302 ರನ್ ಬಾರಿಸಿ ಭಾರತ ಎ ತಂಡಕ್ಕೆ 303 ರನ್ ಗಳ ಗುರಿ ನೀಡಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ಭಾರತ ಎ 176 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
ಈ ವೇಳೆ ಬ್ಯಾಟಿಂಗ್ ಗೆ ಬಂದ ಉನದ್ಕಟ್ ನದೀಮ್ ಬೌಲಿಂಗ್ ನಲ್ಲಿ ಕ್ರಿಸ್ ಬಿಟ್ಟು ಮುಂದೆ ಬಂದು ಡಿಫೇನ್ಸ್ ಆಡುತ್ತಾರೆ. ಆಗ ಸ್ವಲ್ಪ ಎಡವಿದ್ದರಿಂದ ಕೂಡಲೇ ಕ್ರಿಸ್ ಗೆ ತೆರಳದೆ ಚೆಂಡು ಬಿದ್ದ ಜಾಗದಲ್ಲಿ ಮಣ್ಣನ್ನು ತೆರವುಗೊಳಿಸುವ ವೇಳೆ ಫೀಲ್ಡರ್ ಕೂಡಲೇ ಚೆಂಡನ್ನು ಕೀಪರ್ ಗೆ ಎಸೆಯುತ್ತಾರೆ.
ಕೀಪಿಂಗ್ ಮಾಡುತ್ತಿದ್ದ ಪಾರ್ಥಿವ್ ಪಟೇಲ್ ಬ್ಯಾಟ್ಸ್ ಮನ್ ಕ್ರಿಸ್ ಒಳಗೆ ಬರದೆ ಇರುವುದನ್ನು ಗಮನಿಸಿದ್ದು ಕೂಡಲೇ ಚೆಂಡನ್ನು ಹಿಡಿದು ವಿಕೆಟ್ ಗೆ ಹೊಡೆದು ರನೌಟ್ ಮಾಡುತ್ತಾರೆ. ಅಚಾನಕ್ ಆಗಿ ನಡೆದ ಈ ರನೌಟ್ ನಿಂದಾಗಿ ಉನದ್ಕಟ್ ಕಂಗಾಲಾಗಿ ಅಂಪೈರ್ ಕಡೆ ನೋಡುತ್ತಾರೆ. ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರಿಂದ ಬ್ಯಾಟ್ಸ್ ಮನ್ ಪೆವಿಲಿಯನ್ ಸೇರುತ್ತಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


