ಸಿನಿಮಾ ಸುದ್ದಿ

'96' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್; Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video

ಈ ಮಧ್ಯೆ ಎಸ್ ಜಾನಕಿ ಅವರು ನಟಿಸಿದ್ದ 96 ಚಿತ್ರದಲ್ಲಿನ ಡಿಲೀಟ್ ಆಗಿರುವ ಸನ್ನಿವೇಶವೊಂದನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ರಾಮ್ ಪಾತ್ರದಲ್ಲಿ ವಿಜಯ್ ಸೇತುಪತಿ ಮತ್ತು ಜಾನಕಿ ಪಾತ್ರದಲ್ಲಿ ತ್ರಿಷಾ ಅಭಿನಯಿಸಿದ್ದಾರೆ.

'96' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್; Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video
ಜಾನಕಿಯಮ್ಮನ ಜೊತೆಗೆ ತ್ರಿಶಾ ಕೃಷ್ಣನ್
Published On :

ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಹೆಸರಾದ ಎಸ್ ಜಾನಕಿ ನಿಧನದ ಸಂದರ್ಭದಲ್ಲಿ ನಟಿ ತ್ರಿಶಾ ಕೃಷ್ಣನ್ ಎಲ್ಲಿಯೂ ಕಾಣಿಸದ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಭಾವಪೂರ್ವಕ ನಮನ ಸಲ್ಲಿಸಿದ್ದಾರೆ.

‘ನನ್ನ ಅತ್ಯಂತ ವಿಶೇಷವಾದ ಚಿತ್ರವೊಂದರಲ್ಲಿ ನಿಮ್ಮ ಹೆಸರಿನ ಪಾತ್ರವನ್ನು ಮಾಡಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಗೌರವಗಳಲ್ಲಿ ಒಂದಾಗಿ ಎಂದೆಂದಿಗೂ ಉಳಿಯುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

'96 ' ಚಿತ್ರದ ಶೂಟಿಂಗ್ ನ ಪೋಟೋಗಳನ್ನು ಹಂಚಿಕೊಂಡಿರುವ ತ್ರಿಶಾ, ಆ ಹಿರಿಯ ಗಾಯಕಿಯನ್ನು ಭೇಟಿಯಾದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಹಳದಿ ಕುರ್ತಾ ಮತ್ತು ನೀಲಿ ಸ್ಕಾರ್ಫ್ ಧರಿಸಿರುವ ತ್ರಿಶಾ, ಜಾನಕಿ ಅಮ್ಮ ಅವರನ್ನು ಅಪ್ಪಿಕೊಳ್ಳುತ್ತಿರುವುದು ಮತ್ತು ಅವರೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವುದು ಈ ಫೋಟೋದಲ್ಲಿದೆ.

ನಿಮ್ಮಿಂದ ಪ್ರೀತಿ ಪಡೆದಿರುವುದು ನಾನು ಜೀವನದಲ್ಲಿ ಎಂದೆಂದಿಗೂ ಸಂಭ್ರಮಿಸುವ ಸಂಗತಿಯಾಗಿದೆ. ನಿಮ್ಮ ಅಪ್ಪುಗೆಗೆ, ನಿಮ್ಮ ದಯೆಗೆ, ನಿಮ್ಮ ನಗುವಿಗೆ ಧನ್ಯವಾದಗಳು. ಕಲಾವಿದರು ಯಾವಾಗಲೂ ಅತ್ಯಂತ ವಿನಮ್ರವಾಗಿರಬೇಕು ಎಂಬುದನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಧ್ವನಿ ಎಂದೆಂದಿಗೂ ಜೀವಂತವಾಗಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಮ್ಮ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.

ಈ ಮಧ್ಯೆ ಎಸ್ ಜಾನಕಿ ಅವರು ನಟಿಸಿದ್ದ 96 ಚಿತ್ರದಲ್ಲಿನ ಡಿಲೀಟ್ ಆಗಿರುವ ಸನ್ನಿವೇಶವೊಂದನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ರಾಮ್ ಪಾತ್ರದಲ್ಲಿ ವಿಜಯ್ ಸೇತುಪತಿ ಮತ್ತು ಜಾನಕಿ ಪಾತ್ರದಲ್ಲಿ ತ್ರಿಶಾ ಅಭಿನಯಿಸಿದ್ದಾರೆ.

ರಾಮು ಪ್ರೀತಿಯಿಂದ ಜಾನು ಎಂದು ಕರೆಯುತ್ತಾ, ಗಾಯಕಿ ಮನೆಗೆ ಭೇಟಿ ನೀಡುತ್ತಾರೆ. ಜಾನು ತನ್ನ ಅನೇಕ ಹಾಡುಗಳನ್ನು ಸುಂದರವಾಗಿ ಹಾಡುತ್ತಿದ್ದರೂ, ಆಕೆ ಎಂದಿಗೂ ತನ್ನ ನೆಚ್ಚಿನ ಹಾಡನ್ನು ಹಾಡುವುದಿಲ್ಲ ಎಂದು ರಾಮ್, ಜಾನಕಿ ಅಮ್ಮನಿಗೆ ಹೇಳುತ್ತಾನೆ. ಆಗ ತ್ರಿಷಾ ಪಾತ್ರದ ಹೆಸರು ಎಸ್ ಜಾನಕಿ ದೇವಿ ಎಂಬುದು ಜಾನಕಿಯಮ್ಮನಿಗೆ ತಿಳಿಯುತ್ತದೆ. ನಗುತ್ತಾ, ಆಕೆ ತನಗಿಂತ ಉತ್ತಮವಾಗಿ ಹಾಡಬೇಕೆಂದು ಹೇಳುತ್ತಾರೆ. ಇದು ಸಿನಿಮಾದಲ್ಲಿ ಅಳಿಸಲಾದ ಅತ್ಯಂತ ಜನಪ್ರಿಯ ದೃಶ್ಯಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.