ಮತ್ತೆ ಒಟ್ಟಾಗಿ ಕಾಣಿಸಿಕೊಂಡ ಸಿಎಂ ವಿಜಯ್, ತ್ರಿಶಾ ಕೃಷ್ಣನ್! ದಳಪತಿ ಫ್ಯಾನ್ಸ್ ಫುಲ್ ಖುಷ್, Video
ಈ ಸಂದರ್ಭದಲ್ಲಿ ವಿಜಯ್ ಅವರ ಆಪ್ತ ಗೆಳತಿ ಎನ್ನಲಾದ ತ್ರಿಶಾ ಕೂಡ ಅವರೊಂದಿಗೆ ಉಪಸ್ಥಿತರಿದ್ದು ಅಜಿತ್ ಗೆ ಬೆಂಬಲ ಸೂಚಿಸಿದ್ದಾರೆ. ರೇಸ್ನ ವಿಡಿಯೋಗಳು ಆನ್ಲೈನ್ನಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ವಿಜಯ್ ಮತ್ತು ಅಜಿತ್ ಕುಮಾರ್ ಪರಸ್ಪರ ಆತ್ಮೀಯವಾಗಿ ಅಪ್ಪಿಕೊಳ್ಳುವ ದೃಶ್ಯವೂ ಇದೆ.

ಯುನೈಟೆಡ್ ಕಿಂಗ್ಡಮ್ (UK) ಪ್ರವಾಸದಲ್ಲಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ ಮತ್ತು ನಟ ವಿಜಯ್ ಅವರು ಅಜಿತ್ ಕುಮಾರ್ ಭಾಗವಹಿಸಿದ್ದ 'ಮೈಕೆಲಿನ್ ಲೆ ಮ್ಯಾನ್ಸ್ ಕಪ್' (Michelin Le Mans Cup) ಕಾರು ರೇಸ್ಗೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯ್ ಅವರ ಆಪ್ತ ಗೆಳತಿ ಎನ್ನಲಾದ ತ್ರಿಶಾ ಕೂಡ ಅವರೊಂದಿಗೆ ಉಪಸ್ಥಿತರಿದ್ದು ಅಜಿತ್ ಗೆ ಬೆಂಬಲ ಸೂಚಿಸಿದ್ದಾರೆ. ರೇಸ್ನ ವಿಡಿಯೋಗಳು ಆನ್ಲೈನ್ನಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ವಿಜಯ್ ಮತ್ತು ಅಜಿತ್ ಕುಮಾರ್ ಪರಸ್ಪರ ಆತ್ಮೀಯವಾಗಿ ಅಪ್ಪಿಕೊಳ್ಳುವ ದೃಶ್ಯವೂ ಇದೆ.
ಸಿಲ್ವರ್ಸ್ಟೋನ್ನಲ್ಲಿ ಎರಡು ಗಂಟೆಗಳ ಸ್ಪರ್ಧೆಗೆ 'ದಳಪತಿ' ವಿಜಯ್ ಹಸಿರು ನಿಶಾನೆ ತೋರಿಸಿದ್ದಾರೆ. ಕಾರುಗಳು ವೇಗವಾಗಿ ಟ್ರ್ಯಾಕ್ಗೆ ಇಳಿಯುತ್ತಿದ್ದಂತೆ ವಿಜಯ್ ರೇಸ್ಗೆ ಚಾಲನೆ ನೀಡುತ್ತಿರುವ ವಿಡಿಯೋವನ್ನು 'ಮಿಚೆಲಿನ್ ಲೆ ಮಾನ್ಸ್ ಕಪ್'ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋದೊಂದಿಗೆ ವಿಶೇಷ ಅತಿಥಿ ದಳಪತಿ ವಿಜಯ್ ಅವರು ಎರಡು ಗಂಟೆಗಳ ರೋಚಕ ರೇಸಿಂಗ್ಗೆ ಚಾಲನೆ ನೀಡುವ ಹಸಿರು ನಿಶಾನೆ ತೋರಿದ್ದಾರೆ. ಭಾರತೀಯ ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಸಿಲ್ವರ್ಸ್ಟೋನ್ನಲ್ಲಿರುವ ಭಾರತೀಯ ರೇಸರ್ ಗಳಿಗೆ ಬೆಂಬಲ ನೀಡಲು ನಮ್ಮೊಂದಿಗೆ ಸೇರಿಕೊಂಡಿದ್ದಾರೆ! ಎಂದು ಆಯೋಜಕರು ಬರೆದುಕೊಂಡಿದ್ದಾರೆ. ಅಜಿತ್ ಕುಮಾರ್ ಅವರು ರೇಸ್ಗೆ ಸಿದ್ಧವಾಗುತ್ತಿರುವ ದೃಶ್ಯವನ್ನೂ ಸಹ ಹಂಚಿಕೊಳ್ಳಲಾಗಿದೆ.
ಆನ್ಲೈನ್ನಲ್ಲಿ ವೈರಲ್ ಆಗುತ್ತಿರುವ ಮತ್ತೊಂದು ವಿಡಿಯೋದಲ್ಲಿ, ವಿಜಯ್, ಓಡಿಬಂದು ಅಜಿತ್ ಅವರನ್ನು ಅಪ್ಪಿಕೊಳ್ಳುವುದು ಕಂಡುಬಂದಿದೆ. ನಂತರ, ಅಜಿತ್ ತಮ್ಮ ರೇಸಿಂಗ್ ಕಾರಿನೊಳಗೆ ಕುಳಿತಿದ್ದಾಗ ವಿಜಯ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು. ಅಜಿತ್ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾಗ ವಿಜಯ್ ಕಾರಿನ ಮೇಲೆ ಕುಳಿತಿದ್ದರು.
ತ್ರಿಶಾ ಅವರು ಜೀನ್ಸ್, ಟಿ-ಶರ್ಟ್ ಮತ್ತು ಮೆರೂನ್ ಬಣ್ಣದ ಜಾಕೆಟ್ ಧರಿಸಿ ಕ್ಯಾಶುಯಲ್ ಡ್ರೆಸ್ ನಲ್ಲಿ ರೇಸಿಂಗ್ ಸರ್ಕ್ಯೂಟ್ಗೆ ಆಗಮಿಸಿದರು. ಅವರು ಕಾರಿನಿಂದಿಳಿದು ಸ್ಥಳದಲ್ಲಿದ್ದ ಟೆಂಟ್ನತ್ತ ತೆರಳಿದ್ದಾರೆ. ವಿಜಯ್ ಅವರೊಂದಿಗಿನ ಅವರ ದೀರ್ಘಕಾಲದ ಒಡನಾಟ ಮತ್ತು ವರ್ಷಗಳಿಂದ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಅವರ ಈ ಆಗಮನವು ಎಲ್ಲರ ಗಮನ ಸೆಳೆಯಿತು. ನಂತರ ವಿಜಯ್ ಮತ್ತು ತ್ರಿಶಾ ಒಟ್ಟಾಗಿ ರೇಸ್ ವೀಕ್ಷಿಸುತ್ತಿರುವುದು ಕಂಡುಬಂದಿತು.
ತ್ರಿಶಾ ಮತ್ತು ಅಜಿತ್ ತೆರೆಯ ಮೇಲೂ ದೀರ್ಘಕಾಲದ ಒಡನಾಟವನ್ನು ಹೊಂದಿದ್ದಾರೆ. ಜಿ (2005), ಕಿರೀಡಂ (2007), ಮಂಕಥಾ (2011), ಯೆನ್ನೈ ಅರಿಂದಾಲ್ (2015), ವಿದಾಮುಯಾರ್ಚಿ (2025), ಮತ್ತು ಗುಡ್ ಬ್ಯಾಡ್ ಆಗ್ಲಿ (2025) ಎಂಬ ಆರು ತಮಿಳು ಚಿತ್ರಗಳಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



