ದೇಶ

ಇಂಥ ಅಸಹ್ಯಕ್ಕೂ ನಿಮ್ಮ ಬಳಿ ಸಮರ್ಥನೆಯಿದೆಯೇ? ಧ್ವಜಾರೋಹಣದ ಜೊತೆ ನಿಮ್ಮ ಘನತೆ ಗಾಳಿಗೆ ಹಾರಿ ಹೋಗಲಿಲ್ಲವೇ?

ಒಂದು ವಿಡಿಯೋದಲ್ಲಿ, ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಾ ಜೀಪಿನಲ್ಲಿ ಹಾದು ಹೋಗುತ್ತಿದ್ದಾಗ ತ್ರಿಶಾ ಅವರಿಗೆ ನಮಸ್ಕರಿಸುತ್ತಿರುವುದನ್ನು ತೋರಿಸಲಾಗಿದೆ.

ಇಂಥ ಅಸಹ್ಯಕ್ಕೂ ನಿಮ್ಮ ಬಳಿ ಸಮರ್ಥನೆಯಿದೆಯೇ?  ಧ್ವಜಾರೋಹಣದ ಜೊತೆ ನಿಮ್ಮ ಘನತೆ ಗಾಳಿಗೆ ಹಾರಿ ಹೋಗಲಿಲ್ಲವೇ?
ಸ್ವತಂತ್ರ್ಯ ದಿನಾಚರಣೆಯಂದು ವಿಜಯ್ ಪೋಷಕರ ಪಕ್ಕದಲ್ಲಿ ಕುಳಿತ ತ್ರಿಶಾ
Published On :

ಚೆನ್ನೈ: ನಗರದ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ 80 ನೇ ಸ್ವಾತಂತ್ರ್ಯ ದಿನಾಚರಣೆಯ ಅಧಿಕೃತ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಭಾಗವಹಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಧ್ವಜಾರೋಹಣ ನೆರವೇರಿಸಿದ ಈ ಸಮಾರಂಭದಲ್ಲಿ ತ್ರಿಶಾ ಮುಂಚೂಣಿಯ ಸಾಲಿನಲ್ಲಿ ಕುಳಿತಿದ್ದರು.

ಒಂದು ವಿಡಿಯೋದಲ್ಲಿ, ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಾ ಜೀಪಿನಲ್ಲಿ ಹಾದು ಹೋಗುತ್ತಿದ್ದಾಗ ತ್ರಿಶಾ ಅವರಿಗೆ ನಮಸ್ಕರಿಸುತ್ತಿರುವುದನ್ನು ತೋರಿಸಲಾಗಿದೆ.

ಇದನ್ನು ಪ್ರಶ್ನಿಸಿರುವ ಡಿಎಂಕೆ ಸಿಎಂ ಅವರ ಅಧಿಕೃತ ಕಾರ್ಯಕ್ರಮದ ಸಮಯದಲ್ಲಿ ತ್ರಿಶಾಗೆ ಹೇಗೆ ಆಸನ ವ್ಯವಸ್ಥೆ ಮಾಡಲಾಯಿತು ಎಂದು ಕಿಡಿಕಾರಿದೆ. ತನ್ನ ಮುಖವಾಣಿ ಮುರಸೋಲಿಯಲ್ಲಿ ಈ ಬಗ್ಗೆ ಟೀಕಿಸಿರುವ ಡಿಎಂಕೆ ಹೇಗೆ ಸೆಲ್ಯೂಟ್ ವಿನಿಮಯ ಮಾಡಿಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದೆ.

ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ವದಂತಿಯ ಗೆಳತಿ ನಟಿ ತ್ರಿಶಾ ಕೃಷ್ಣನ್ ವಿರುದ್ಧ ಡಿಎಂಕೆ ಹರಿಹಾಯ್ದಿದೆ.

ಹಸಿರು ಬ್ಲೌಸ್‌ನೊಂದಿಗೆ ಹಳದಿ ಸೀರೆಯನ್ನು ಧರಿಸಿದ ತ್ರಿಶಾ, ವಿಜಯ್ ಅವರ ಪೋಷಕರಾದ ಎಸ್‌ಎ ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಅವರ ಪಕ್ಕದಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದರು.

ವೈರಲ್ ಆಗಿರುವ ವೀಡಿಯೊಗಳಲ್ಲಿ, ಸಮಾರಂಭದಲ್ಲಿ ಮುಖ್ಯಮಂತ್ರಿ ವಿಜಯ್ ಹಾದುಹೋಗುವಾಗ ನಟಿ ತ್ರಿಶಾ ಅವರಿಗೆ ನಮಸ್ಕರಿಸುತ್ತಿರುವುದು ಕಂಡುಬರುತ್ತದೆ. ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ವಿಜಯ್ ಅವರ ಘನತೆ ಗಾಳಿಯಲ್ಲಿ ಹಾರಿಹೋಗಿದೆ.

ಅವರಿಗೆ ಮತ ಹಾಕಿದ ಜನರು ಸಹ ನಾಚಿಕೆಯಿಂದ ಅಥವಾ ಮುಜುಗರದಿಂದ ಅವರನ್ನು ನೋಡಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಒಬ್ಬ ನಟಿಯನ್ನು ಮುಂದಿನ ಸಾಲಿನಲ್ಲಿ ಕೂರಿಸಿ ಇಬ್ಬರೂ ಪರಸ್ಪರ ನಮಸ್ಕರಿಸುತ್ತಿದ್ದರು. ಅಂತಹ ಅಸಭ್ಯತೆ ಮತ್ತು ಅಸಹ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳಬಹುದು ಎಂದು ಭಾವಿಸುವ ವ್ಯಕ್ತಿ ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಬಂದಿದ್ದಾರೆ ಎಂದು ಬರೆದು ಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.