ಸೊಸೆ ರಶ್ಮಿಕಾ ಮಂದಣ್ಣಗೆ ಒಂದೇ ಒಂದು ಷರತ್ತು ವಿಧಿಸಿದ ವಿಜಯ್ ದೇವರಕೊಂಡ ಪೋಷಕರು; ಏನದು?
ಅವರ ಬಹು ನಿರೀಕ್ಷಿತ ವಿವಾಹಕ್ಕೂ ಮುನ್ನ, ಅಭಿಮಾನಿಗಳು ದಂಪತಿ ಮತ್ತು ಅವರ ಪೋಷಕರ ಹಿಂದಿನ ವಿಡಿಯೋಗಳು ಮತ್ತು ಸಂದರ್ಶನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಉದಯಪುರದ ಸುಂದರ ಸ್ಥಳಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹಪೂರ್ವ ಸಂಭ್ರಮಗಳು ಈಗಾಗಲೇ ಆರಂಭವಾಗಿವೆ. ಫೆಬ್ರುವರಿ 26 ರಂದು ಉದಯಪುರದಿಂದ 25 ಕಿಮೀ ದೂರದಲ್ಲಿರುವ ಐಷಾರಾಮಿ ಐಟಿಸಿ ಮೆಮೆಂಟೋಸ್‌ನಲ್ಲಿ ಈ ಜೋಡಿ ವಿವಾಹವಾಗಲಿದ್ದಾರೆ.
ಅವರ ಬಹು ನಿರೀಕ್ಷಿತ ವಿವಾಹಕ್ಕೂ ಮುನ್ನ, ಅಭಿಮಾನಿಗಳು ದಂಪತಿ ಮತ್ತು ಅವರ ಪೋಷಕರ ಹಿಂದಿನ ವಿಡಿಯೋಗಳು ಮತ್ತು ಸಂದರ್ಶನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
2018 ರಲ್ಲಿ ನಡೆದ ಗೀತಾ ಗೋವಿಂದಂ ಸಕ್ಸಸ್ ಮೀಟ್‌ನಲ್ಲಿ, ನಿರೂಪಕಿ ಸುಮಾ ವಿಜಯ್ ಅವರು ವಿಜಯ್ ದೇವರಕೊಂಡ ಅವರ ಪೋಷಕರನ್ನು ನಿಮಗೆ ಎಂತಹ ಸೊಸೆ ಬೇಕು ಎಂದು ಕೇಳಿದರು.
ವಿಜಯ್ ಅವರ ತಾಯಿ ಮಾಧವಿ ಅವರನ್ನು ಯಾವ ರೀತಿಯ ಸೊಸೆ ಬೇಕೆಂದು ಕನಸು ಕಂಡಿದ್ದೀರಿ ಎಂದು ಕೇಳಿದಾಗ, 'ಬಾಬು ನಿ ಮಂಚಿ ಗಾ ಚುಸ್ಕೋನೆ ಕೋಡಲು ವಸ್ತೆ ಚಾಲು (ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುವ ಸೊಸೆ ಸಿಕ್ಕರೆ ಸಾಕು). ಅವಳು ಅವನನ್ನು ಬೇಷರತ್ತಾಗಿ ಪ್ರೀತಿಸಬೇಕು- ಅಷ್ಟೇ. ಅವನು ಚಿತ್ರರಂಗದಲ್ಲಿದ್ದಾನೆ. ಆದ್ದರಿಂದ, ಅವಳು ಅವನನ್ನು ಅರ್ಥಮಾಡಿಕೊಳ್ಳಬೇಕು' ಎಂದಿದ್ದರು.
ಗೋವರ್ಧನ್ ಅವರನ್ನು ಕೇಳಿದಾಗ, ಅವರು, 'ಅವನು ಯಾರನ್ನು ಬೇಕಾದರೂ ಮದುವೆಯಾಗಬೇಕೆಂದು ನಾನು ಬಯಸುತ್ತೇನೆ. ನನಗೆ ಯಾವುದೇ ಆಕ್ಷೇಪಣೆಗಳು ಅಥವಾ ನಿರೀಕ್ಷೆಗಳಿಲ್ಲ. ನನಗೆ ಜಾತಿ ಅಥವಾ ಧರ್ಮದ ಯಾವುದೇ ನಿರೀಕ್ಷೆಗಳಿಲ್ಲ. ಅವರು ಭಾರತೀಯರನ್ನು, ವಿಶೇಷವಾಗಿ ದಕ್ಷಿಣ ಭಾರತೀಯರನ್ನು ಮದುವೆಯಾದರೆ ನನಗೆ ಸಂತೋಷವಾಗುತ್ತದೆ' ಎಂದು ಹೇಳಿದರು.
ಆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಜಯ್ ದೇವರಕೊಂಡ, 'ತನಗೆ ಆರೇಂಜ್ ಮ್ಯಾರೇಜ್ ಆಗಿ ಬರುವುದಿಲ್ಲ. ನನಗೆ ಲವ್ ಮ್ಯಾರೇಜ್ ಸರಿಹೊಂದುತ್ತದೆ. ಆದರೆ, ನನ್ನ ಹೆತ್ತವರಿಗೂ ಆ ಹುಡುಗಿ ಇಷ್ಟವಾಗಬೇಕು' ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ದಿನಗಳಲ್ಲಿ, ರಶ್ಮಿಕಾ ಕೂಡ ವಿಜಯ್ ಅವರ ಪೋಷಕರೊಂದಿಗೆ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



