ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ ಉದಯಪುರಕ್ಕೆ ಪ್ರಯಾಣ: ಏರ್ ಪೋರ್ಟ್ ಲುಕ್ ಫೋಟೋ ವೈರಲ್
ಉದಯಪುರ ಏರ್ ಪೋರ್ಟ್ ನಿಂದ ಹೊರ ಬರುವಾಗ, ಜನರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಎರಡು ಕೈ ಜೋಡಿಸಿ ಕೈ ಮುಗಿದು ಹೊರ ಬಂದ ನಟಿ ರಶ್ಮಿಕಾ ಮಂದಣ್ಣ ಬಳಿಕ ಕಾರ್ ಹತ್ತಿ ಹೋಟೇಲ್ ನತ್ತ ಹೊರಟರು.

ಫೆಬ್ರವರಿ 26 ರಂದು ಕೊಡಗು ಮೂಲದ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ನಟ ವಿಜಯ ದೇವರಕೊಂಡ ಜೋಡಿ ರಾಜಸ್ಥಾನದ ಜೈಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಇಬ್ಬರ ಕುಟುಂಬ ಇಂದೇ ಉದಯಪುರಕ್ಕೆ ತೆರಳಿದ್ದಾರೆ. ಇಬ್ಬರು ಅವರ ಕುಟುಂಬಸ್ಥರೊಂದಿಗೆ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಉದಯಪುರ ಏರ್ ಪೋರ್ಟ್ ನಿಂದ ಹೊರ ಬರುವಾಗ, ಜನರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಎರಡು ಕೈ ಜೋಡಿಸಿ ಕೈ ಮುಗಿದು ಹೊರ ಬಂದ ನಟಿ ರಶ್ಮಿಕಾ ಮಂದಣ್ಣ ಬಳಿಕ ಕಾರ್ ಹತ್ತಿ ಹೋಟೇಲ್ ನತ್ತ ಹೊರಟರು.

ಇನ್ನೂ ಮದುವೆ ಗಂಡು ಟಾಲಿವುಡ್ ಹೀರೋ ನಟ ವಿಜಯ ದೇವರಕೊಂಡ ಕೂಡ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಏರ್ ಪೋರ್ಟ್ ನಿಂದ ತಮ್ಮ ಸ್ನೇಹಿತನ ಹೆಗಲ ಮೇಲೆ ಕೈಹಾಕಿ ನಗುತ್ತಾ ಬಂದಿರುವುದು ವೈರಲ್ ಆಗಿದೆ. ಏರ್ ಪೋರ್ಟ್ ಹೊರಗೆ ಸೇರಿದ್ದ ಜನರು ಮತ್ತು ಮಾಧ್ಯಮಗಳತ್ತ ಕೈ ಬೀಸಿ ವಿಶ್ ಮಾಡಿದ್ದರು. ಬಳಿಕ ಕಾರ್ ಹತ್ತಿ ಹೋಟೇಲ್ ನತ್ತ ಹೊರಟರು.

ನಟ ವಿಜಯ ದೇವರಕೊಂಡ ಸೋದರ ಆನಂದ್ ದೇವರಕೊಂಡ ಮತ್ತು ತಂದೆ ಒಂದೇ ಕಾರ್ ಹತ್ತಿ ಹೋಗುವ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ರಶ್ಮಿಕಾ ಮಂದಣ್ಣ ತಾಯಿ ಹಾಗೂ ಸೋದರಿ ಸೈಮನ್ ಕೂಡ ಉದಯಪುರ ಏರ್ ಪೋರ್ಟ್ ಹೊರಗೆ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



