100 Notout: ಮಹಾವತಾರ ನರಸಿಂಹ ಬಾಕ್ಸಾಫಿಸ್ ವಿಜಯೋತ್ಸವ ಓಟ, ಹಿಂದಿಯಲ್ಲಿ 104 ಕೋಟಿ ರೂ ಗಳಿಕೆ!
ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ ನರಸಿಂಹ ಚಿತ್ರ ಸತತ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಹಿಂದಿ ಅವತರಣಿಕೆಯ ಗಳಿಕೆ 100 ಕೋಟಿ ರೂ ದಾಟಿದೆ.

ಬೆಂಗಳೂರು: ಕನ್ನಡದ ಆ್ಯನಿಮೇಷನ್ ಸಿನಿಮಾ ಮಹಾವತಾರ ನರಸಿಂಹ (MahavatarNarsimha) ಚಿತ್ರದ ಬಾಕ್ಸ್ ಆಫಿಸ್ ವಿಜಯೋತ್ಸವ ಮುಂದುವರೆದಿದ್ದು, ಹಿಂದಿ ಭಾಷೆಯೊಂದರಲ್ಲೇ ಚಿತ್ರದ ಗಳಿಕೆ 100 ಕೋಟಿ ರೂ ದಾಟಿದೆ.
ಹೌದು... ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ ನರಸಿಂಹ ಚಿತ್ರ ಸತತ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಹಿಂದಿ ಅವತರಣಿಕೆಯ ಗಳಿಕೆ 100 ಕೋಟಿ ರೂ ದಾಟಿದೆ.
ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಚಿತ್ರ ತನ್ನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಬ್ಬರ ಆರ್ಭಟ ನಡೆಸುತ್ತಿದ್ದು, ಈಗಾಗಲೇ ಚಿತ್ರ ನೂರು ಕೋಟಿ ಕ್ಲಬ್ ಸೇರಿ, ಹಿಂದಿಯಲ್ಲಿ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾವುದೇ ಸ್ಟಾರ್ ಕಲಾವಿದರು ಅಥವಾ ಬಹುದೊಡ್ಡ ಪಾತ್ರವರ್ಗವಿಲ್ಲದೆ ರಿಲೀಸ್ ಆದ ಈ ಚಿತ್ರವು ಇದೀಗ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಿಸಿದ ಈ ಚಿತ್ರ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಅನಿಮೇಷನ್ ಸಿನಿಮಾ ದಾಖಲೆ ಮುರಿದ Mahavatar Narsimha: 150 ಕೋಟಿ ರೂ ಗಳಿಸಿ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ!
ಹಿಂದಿಯಲ್ಲಿ 100 ಕೋಟಿ ರೂ ಗಳಿಕೆ
ಕೇವಲ 6 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಮಹಾವತಾರ ನರಸಿಂಹ, ಇಲ್ಲಿಯವರೆಗೆ ಹಿಂದಿ ಭಾಷೆಯಲ್ಲಿ 104 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಆ ಮೂಲಕ ಹಿಂದಿಯಲ್ಲಿ 100 ಕೋಟಿ ರೂ. ಗಳಿಸಿದ ಮೊದಲ ಭಾರತೀಯ ಅನಿಮೇಷನ್ ಚಿತ್ರವಾಗಿ ಹೊಸ ದಾಖಲೆ ಸೃಷ್ಟಿಸಿದೆ. ಹಿಂದಿಯಲ್ಲಿ ಚಿತ್ರದ ಪ್ರೇಕ್ಷಕರ ಸಂಖ್ಯೆ ಬರೊಬ್ಬರಿ ಶೇ.219.15ರಷ್ಟು ಏರಿಕೆಯಾಗಿದ್ದು, ಚಿತ್ರ ತೆರೆಗೆ ಬಂದ ಕೇವಲ 16 ದಿನಗಳಲ್ಲೇ ಚಿತ್ರದ ಗಳಿಕೆ 100 ಕೋಟಿ ರೂ ದಾಟಿದೆ.
ಮೂರನೇ ವಾರದ ಶುಕ್ರವಾರದಂದು 4.70 ಕೋಟಿ ರೂ ಗಳಿಸಿದ್ದ ನರಸಿಂಹ ಚಿತ್ರ, ಅದೇ ವಾರದ ಶನಿವಾರದಂದು ದಾಖಲೆಯ 15 ಕೋಟಿ ಗಳಿಕೆ ಕಂಡಿತ್ತು. ಆ ಮೂಲಕ ಚಿತ್ರದ ಹಿಂದಿ ಅವತರಣಿಕೆಯ ಗಳಿಕೆ ಬರೊಬ್ಬರಿ 104.14 ಕೋಟಿ ರೂಗೆ ಏರಿಕೆಯಾಗಿದೆ ಎಂದು ತರಣ್ ಆದರ್ಶ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


