ಸಿನಿಮಾ ಸುದ್ದಿ

Mahavatar Narsimha ಬಾಕ್ಸ್ ಆಫಿಸ್ ಅಬ್ಬರ; ಹಿಂದಿಯಲ್ಲೇ 100 ಕೋಟಿ ಗಳಿಕೆಯತ್ತ ದಾಪುಗಾಲು!

ಭಾರತೀಯ ಸಿನಿಮಾ ಬಾಕ್ಸಾಫಿಸ್ ಗಳಿಕೆಯಲ್ಲಿ ಮಹಾವತಾರ ನರಸಿಂಹ ಚಿತ್ರದ ಅಬ್ಬರ ಮುಂದುವರೆದಿದ್ದು. ಹಿಂದಿ ಭಾಷೆಯೊಂದರಲ್ಲೇ ಚಿತ್ರದ ಗಳಿಕೆ 80 ಕೋಟಿ ರೂ ದಾಟಿದ್ದು, ಚಿತ್ರ 100 ಕೋಟಿ ರೂಗಳಿಕೆಯತ್ತ ದಾಪುಗಾಲಿರಿಸಿದೆ.

Mahavatar Narsimha ಬಾಕ್ಸ್ ಆಫಿಸ್ ಅಬ್ಬರ; ಹಿಂದಿಯಲ್ಲೇ 100 ಕೋಟಿ ಗಳಿಕೆಯತ್ತ ದಾಪುಗಾಲು!
ಮಹಾವತಾರ ನರಸಿಂಹ
Published On :

ಬೆಂಗಳೂರು: ಕನ್ನಡದ ಆ್ಯನಿಮೇಷನ್ ಸಿನಿಮಾ ಮಹಾವತಾರ ನರಸಿಂಹ ಚಿತ್ರ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದ್ದು, ಹಿಂದಿ ಭಾಷೆಯೊಂದರಲ್ಲೇ ಚಿತ್ರ 100 ಕೋಟಿ ರೂಗಳಿಕೆಯತ್ತ ದಾಪುಗಾಲಿರಿಸಿದೆ.

ಹೌದು.. ಭಾರತೀಯ ಸಿನಿಮಾ ಬಾಕ್ಸಾಫಿಸ್ ಗಳಿಕೆಯಲ್ಲಿ ಮಹಾವತಾರ ನರಸಿಂಹ ಚಿತ್ರದ ಅಬ್ಬರ ಮುಂದುವರೆದಿದ್ದು. ಹಿಂದಿ ಭಾಷೆಯೊಂದರಲ್ಲೇ ಚಿತ್ರದ ಗಳಿಕೆ 80 ಕೋಟಿ ರೂ ದಾಟಿದ್ದು, ಚಿತ್ರ 100 ಕೋಟಿ ರೂಗಳಿಕೆಯತ್ತ ದಾಪುಗಾಲಿರಿಸಿದೆ.

ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಚಿತ್ರ ತನ್ನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಬ್ಬರ ಆರ್ಭಟ ನಡೆಸುತ್ತಿದೆ.

ಈಗಾಗಲೇ ಚಿತ್ರ ಜಾಗತಿಕವಾಗಿ ನೂರು ಕೋಟಿ ಕ್ಲಬ್ ಸೇರಿದ್ದು, ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದ್ದು ಮಾತ್ರವಲ್ಲದೇ ಹಿಂದಿಯಲ್ಲಿ 100 ಕೋಟಿ ರೂಗಳಿಕೆಯತ್ತ ಮುನ್ನುಗ್ಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಮಹಾವತಾರ ನರಸಿಂಹ ಚಿತ್ರ ಹಿಂದಿಯಲ್ಲಿ 2ನೇ ವಾರವೂ ಭರ್ಜರಿ ಗಳಿಕೆ ಮಾಡುತ್ತಿದ್ದು, ಮೊದಲ ವಾರಕ್ಕಿಂತ ಶೇ.57.28 ರಷ್ಟು ಹೆಚ್ಚು ಗಳಿಕೆ ಮಾಡಿದೆ. 2ನೇ ವಾರಾಂತ್ಯಕ್ಕೆ ಚಿತ್ರದ ಒಟ್ಟು ಗಳಿಕೆ 84.44 ಕೋಟಿ ರೂ ಏರಿಕೆಯಾಗಿದೆ. ಆ ಮೂಲಕ ಚಿತ್ರವು ಹಿಂದಿ ಭಾಷೆಯೊಂದರಲ್ಲೇ 100 ಕೋಟಿ ರೂಗಳತ್ತ ದಾಪುಗಾಲಿರಿಸಿದೆ.

ಯಾವುದೇ ಸ್ಟಾರ್​ ಕಲಾವಿದರು ಅಥವಾ ಬಹುದೊಡ್ಡ ಪಾತ್ರವರ್ಗವಿಲ್ಲದೆ ರಿಲೀಸ್ ಆದ ಈ ಚಿತ್ರವು ಇದೀಗ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಅಶ್ವಿನ್ ಕುಮಾರ್​ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.