ಗಮನ ಸೆಳೆಯುತ್ತಿದೆ ಕನ್ನಡದ 'ವೈಟ್ ಅಂಡ್ ಬ್ಲಾಕ್' ವೆಬ್ ಸೀರಿಸ್, ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ
ಹೊಸ ಕನ್ನಡ ವೆಬ್ ಸೀರಿಸ್ ವೈಟ್ ಅಂಡ್ ಬ್ಲಾಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕ್ರೈಮ್ ಥ್ರಿಲ್ಲರ್ ಮತ್ತು ವೈಜ್ಞಾನಿಕ ಕಾದಂಬರಿಗಳ ಸಂಯೋಜನೆಯಾದ ವೆಬ್ ಸೀರಿಸ್ ಸದ್ಯ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ.

ಹೊಸ ಕನ್ನಡ ವೆಬ್ ಸೀರಿಸ್ ವೈಟ್ ಅಂಡ್ ಬ್ಲಾಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕ್ರೈಮ್ ಥ್ರಿಲ್ಲರ್ ಮತ್ತು ವೈಜ್ಞಾನಿಕ ಕಾದಂಬರಿಗಳ ಸಂಯೋಜನೆಯಾದ ವೆಬ್ ಸೀರಿಸ್ ಸದ್ಯ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ.
ಜೋಗೇಶ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸರಣಿಯನ್ನು ಅಭಿನಂದನ್ ನಿರ್ದೇಶಿಸಿದ್ದಾರೆ. ರಂಗಭೂಮಿ ಕಲಾವಿದ ಮತ್ತು ಬರಹಗಾರ ಆಗಿರುವ ಅಭಿನಂದನ್ ವೆಬ್ ಸರಣಿ ಮೂಲಕ ಚೊಚ್ಚಲ ನಿರ್ದೇಶನದ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಅಭಿನಂದನ್ ಅವರು ಸತ್ಯ ಶಶಿ ರಾಜ್, ಅಶ್ವಿತಾ ಹೆಗ್ಡೆ, ಪ್ರಿಯಾಂಕಾ ಪ್ರಕಾಶ್, ಚನ್ನಕೇಶವ ಮತ್ತು ಸವಿತಾ ಎನ್‌ಎಸ್‌ಡಿ ಅವರಂತಹ ಕೆಲವು ಪ್ರತಿಭಾವಂತ ರಂಗಭೂಮಿ ಕಲಾವಿದರು ಮತ್ತು ಟೆಕ್ಕಿಗಳನ್ನು ತಮ್ಮ ಸರಣಿಯಲ್ಲಿ ನಟಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

ರಾಮಾ ರಾಮಾ ರೇ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಅವರು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ವೆಬ್ ಸರಣಿಯನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ತಂಡದ ಉತ್ಸಾಹ, ಕಂಟೆಂಟ್ ಮತ್ತು ಕ್ರೈಮ್ ಥ್ರಿಲ್ಲರ್ ಅನ್ನು ತೆರೆಯ ಮೇಲೆ ಪ್ರಸ್ತುತಪಡಿಸಿರುವ ರೀತಿಯಿಂದ ಆಶ್ಚರ್ಯಚಕಿತರಾಗಿದ್ದಾಗಿ ಅವರು ತಿಳಿಸಿದ್ದಾರೆ.
ತಮ್ಮ ಮೊದಲ ಪ್ರಯತ್ನಕ್ಕೆ ಪ್ರೋತ್ಸಾಹ ಸಿಗುತ್ತಿರುವುದಕ್ಕೆ ನಿರ್ದೇಶಕ ಅಭಿನಂದನ್ ಮತ್ತು ತಂಡ ಖುಷಿಯಾಗಿದೆ. ವೆಬ್ ಸೀರೀಸ್‌ಗೆ ಸತ್ಯ ರಾಧಾಕೃಷ್ಣ ಸಂಗೀತ ನೀಡಿದ್ದಾರೆ ಮತ್ತು ಕಮಲ್ ವಿ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


