ಸಿನಿಮಾ ಸುದ್ದಿ

ಮದುವೆ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ಅಭಿಷೇಕ್; ನಿಶ್ಚಿತಾರ್ಥದ ಬಗ್ಗೆ ಯಂಗ್ ರೆಬೆಲ್ ಸ್ಟಾರ್ ಹೇಳಿದ್ದೇನು?

ರೆಬಲ್ ಸ್ಟಾರ್ ಮತ್ತು ಸಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಅಭಿಷೇಕ್ ಮದುವೆ ಸುದ್ದಿ ಹರಿದಾಡುತ್ತಿದೆ.

ಮದುವೆ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ಅಭಿಷೇಕ್; ನಿಶ್ಚಿತಾರ್ಥದ ಬಗ್ಗೆ ಯಂಗ್ ರೆಬೆಲ್ ಸ್ಟಾರ್ ಹೇಳಿದ್ದೇನು?
ಅಭಿಷೇಕ್ ಅಂಬರೀಷ್
Published On :

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪುತ್ರ, ಸ್ಯಾಂಡಲ್ ವುಡ್‌ನ ಭರವಸೆಯ ನಟ ಅಭಿಷೇಕ್ ಅಂಬರೀಶ್ ಅವರಿಗೆ ಕಂಗಣ ಭಾಗ್ಯ ಕೂಡಿ ಬಂದಿದೆ. ರೆಬಲ್ ಸ್ಟಾರ್ ಮತ್ತು ಸಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಅಭಿಷೇಕ್ ಮದುವೆ ಸುದ್ದಿ ಹರಿದಾಡುತ್ತಿದೆ.

ಅಭಿಷೇಕ್ ನಿಶ್ಚಿತಾರ್ಥ ಸಮಾರಂಭ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎನ್ನಲಾಗಿದೆ. ಡಿಸೆಂಬರ್ 11ರಂದು ಅಭಿಷೇಕ್ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಗಳು ಆಗಿದ್ದು ಈಗಾಗಲೇ ತಯಾರಿ ನಡೆಯುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ನಿಶ್ಚಿತಾರ್ಥಕೆ ಬೇಕಾಗಿರುವ ಎಲ್ಲ ತಯಾರಿಗಳನ್ನ ಖಾಸಗಿ ಈವೆಂಟ್ ಕಂಪನಿಗೆ ನೀಡಲಾಗಿದೆಯಂತೆ. ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಗುಟ್ಟಾಗಿ ಇಟ್ಟಿದ್ದಾರಂತೆ ಸುಮಲತಾ ಅಂಬರೀಶ್.

ಇನ್ನೂ ತಮ್ಮ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್, ಹುಡುಗಿ ಯಾರೂ ಅಂತಾನೆ ನಂಗೆ ಗೊತ್ತಿಲ್ಲ, ಪ್ರತಿ ವರ್ಷ ನನಗೆ ಎಂಗೇಜ್ ಮೆಂಟ್ ಮಾಡಿಸ್ತೀರಾ, ನೀವು ಮಾಧ್ಯಮಗಳು ಹರಡಿಸುತ್ತಿರೋ ಸುದ್ದಿ ನಂಬಿ ಮುಂದೆ ನನಗೆ ಯಾರು ಹೆಣ್ಣು ಕೊಡೊದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕಳೆದ 15 ದಿನಗಳಿಂದ ನಾನು ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದೀನಿ,  ಇದರ ಮದ್ಯೆ ಹೇಗೆ ನಾನು ಎಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿ ಎಂದು ಪ್ರಶ್ನಿಸುವ ಮೂಲತ ತಮ್ಮ ಮದುವೆ ಸಂಬಂಧ ಹರಡಿದ ಸುದ್ದಿ ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.