ಭಾವಿ ಪತಿಯ ಫೋಟೊವನ್ನು ರಿವೀಲ್ ಮಾಡಿದ ನಟಿ ಹನ್ಸಿಕಾ ಮೋಟ್ವಾನಿ, ಇವರೇ ನೋಡಿ ಸೋಹೆಲ್ ಖತುರಿಯಾ!
ಇದೀಗ ಹನ್ಸಿಕಾ ಅವರೇ ತಾವು ಮದುವೆಯಾಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಕಿರುವ ನಟಿ, ಉದ್ಯಮಿ ಸೋಹೆಲ್ ಖತುರಿಯಾರನ್ನು ವಿವಾಹವಾಗಲಿದ್ದಾರೆ.

ಚೆನ್ನೈ: ಬಾಲನಟಿಯಾಗಿ ವೃತ್ತಿಜೀವನವನ್ನು ಆರಂಭಿಸಿದ್ದ ನಟಿ ಹನ್ಸಿಕಾ ಮೋಟ್ವಾನಿ ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಸೂಪರ್ಹಿಟ್ ಚಿತ್ರಗಳನ್ನು ನೀಡಿದ್ದಾರೆ. 31 ವರ್ಷದ ನಟಿ ಹನ್ಸಿಕಾ ಮೋಟ್ವಾನಿ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
ಇದೀಗ ಹನ್ಸಿಕಾ ಅವರೇ ತಾವು ಮದುವೆಯಾಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಕಿರುವ ನಟಿ, ಉದ್ಯಮಿ ಸೋಹೆಲ್ ಖತುರಿಯಾರನ್ನು ವಿವಾಹವಾಗಲಿದ್ದಾರೆ.
ಸೋಹೆಲ್ ಖತುರಿಯಾ ಅವರು ಜನಪ್ರಿಯ ಗಾರ್ಮೆಂಟ್ ಬ್ರ್ಯಾಂಡ್ ಅವಂತ್ ಅನ್ನು ಹೊಂದಿದ್ದಾರೆ.
ಪ್ಯಾರಿಸ್ನ ಐಫೆಲ್ ಟವರ್ನ ಮುಂದೆ ತನಗೆ ಪ್ರಪೋಸ್ ಮಾಡಲು ಮೊಣಕಾಲೂರಿ ಕುಳಿತಿರುವ ತನ್ನ ಭಾವಿ ಪತಿಯ ಫೋಟೊ ಸೇರಿದಂತೆ ಹಲವು ಫೋಟೊಗಳನ್ನು ಬುಧವಾರ ನಟಿ ಪೋಸ್ಟ್ ಮಾಡಿದ್ದಾರೆ.
ಪ್ರಸ್ತಾಪದ ಸಂದರ್ಭದಲ್ಲಿನ ಫೋಟೊದಲ್ಲಿ ಕಂಡುಬರುವ ಹಿನ್ನೆಲೆಯಲ್ಲಿ ಹೂವುಗಳನ್ನು ಬಳಸಿ ಮಾಡಿದ 'ನನ್ನನ್ನು ಮದುವೆಯಾಗು' ಎಂಬ ಪದಗಳು ಇವೆ. ಈ ಸಂದರ್ಭದ ಐದು ಚಿತ್ರಗಳನ್ನು ಪೋಸ್ಟ್ ಮಾಡಿರುವ ಹನ್ಸಿಕಾ, 'ಈಗ ಮತ್ತು ಎಂದೆಂದಿಗೂ' ಎಂದು ಬರೆದಿದ್ದಾರೆ.
ಈ ಪೋಸ್ಟ್ಗೆ ಕಮೆಂಟ್ ಮಾಡಿರುವ ಸೋಹೆಲ್, 'ಐ ಲವ್ ಯೂ ಮೈ ಲೈಫ್ (ಕೆಂಪು ಹೃದಯದ ಎಮೋಜಿ) #NowAndForever' ಎಂದು ಬರೆದಿದ್ದಾರೆ.
ಹನ್ಸಿಕಾ ಪೋಸ್ಟ್ ಹಾಕಿದಾಗಿನಿಂದ ಹಲವಾರು ಟಾಪ್ ಸೆಲೆಬ್ರಿಟಿಗಳು ಅವರನ್ನು ಅಭಿನಂದಿಸುತ್ತಿದ್ದಾರೆ. ನಟಿಯರಾದ ಅನುಷ್ಕಾ ಶೆಟ್ಟಿ, ಖುಷ್ಬು ಮತ್ತು ಶ್ರೀಯಾ ರೆಡ್ಡಿ ಸೇರಿದಂತೆ ಹಲವರು ನಟಿಗೆ ಶುಭಾಶಯ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


