'ಆಪ್ತಮಿತ್ರ' ಸಿನಿಮಾಗೆ 18 ವರ್ಷ: ವಿಷ್ಣುವರ್ಧನ್, ಸೌಂದರ್ಯ ನೆನಪು ಹಂಚಿಕೊಂಡ ರಮೇಶ್ ಅರವಿಂದ್
ಡಾ. ವಿಷ್ಣುವರ್ದನ್ ನಾಯಕರಾಗಿದ್ದ ಆಪ್ತಮಿತ್ರ ಸಿನಿಮಾ ಬಿಡುಗಡೆಯಾಗಿ 18 ವರ್ಷವಾಗಿದೆ. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಆಪ್ತಮಿತ್ರ ಸಿನಿಮಾದ ಕೆಲವು ಫೋಟೋಗಳನ್ನು ಹಂಚಿಕೊಂಡು ಸಿನಿಮಾದ ಗೋಲ್ಡನ್ ಗಳಿಗೆಯನ್ನು ಸ್ಮರಿಸಿದ್ದಾರೆ.

ಬೆಂಗಳೂರು: ಡಾ. ವಿಷ್ಣುವರ್ದನ್ ನಾಯಕರಾಗಿದ್ದ ಆಪ್ತಮಿತ್ರ ಸಿನಿಮಾ ಬಿಡುಗಡೆಯಾಗಿ 18 ವರ್ಷವಾಗಿದೆ. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಆಪ್ತಮಿತ್ರ ಸಿನಿಮಾದ ಕೆಲವು ಫೋಟೋಗಳನ್ನು ಹಂಚಿಕೊಂಡು ಸಿನಿಮಾದ ಗೋಲ್ಡನ್ ಗಳಿಗೆಯನ್ನು ಸ್ಮರಿಸಿದ್ದಾರೆ.
ವಿಷ್ಣುವರ್ಧನ್ ಜೊತೆಗೆ ಪ್ರೇಮಾ, ಸೌಂದರ್ಯ, ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ದುರಂತವೆಂದರೆ ಇದು ಸೌಂದರ್ಯಾ ಅವರ ಕೊನೆಯ ಸಿನಿಮಾವಾಗಿತ್ತು. ಈ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ.
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕರಿಯರ್‌ನ ಟಾಪ್ 5 ಸಿನಿಮಾಗಳಲ್ಲಿ 'ಆಪ್ತಮಿತ್ರ' ಚಿತ್ರ ಸ್ಥಾನ ಪಡೆದುಕೊಳ್ಳುತ್ತದೆ. 2004ರಲ್ಲಿ ತೆರೆಕಂಡ ಈ ಸಿನಿಮಾ ಆ ಕಾಲಕ್ಕೆ ಮಾಡಿದ ಸಾಧನೆ ಸಾಮಾನ್ಯದ್ದಲ್ಲ. ಇದೀಗ ಈ ಸಿನಿಮಾ ತೆರೆಕಂಡು 18 ವರ್ಷಗಳಾಗಿದ್ದು, ಚಿತ್ರತಂಡ ಅದನ್ನು ನೆನಪು ಮಾಡಿಕೊಂಡಿದೆ. ದ್ವಾರಕೀಶ್ ನಿರ್ಮಾಣದ ಈ ಸಿನಿಮದಲ್ಲಿ ವಿಷ್ಣು ತುಂಬ ಗ್ಯಾಪ್ ನಂತರ ಬಣ್ಣ ಹಚ್ಚಿದ್ದರು. ಚಿತ್ರ ಕೂಡ ದೊಡ್ಡಮಟ್ಟದ ಗೆಲುವು ಕಾಣುವಲ್ಲಿ ಯಶಸ್ವಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


