ಸಿನಿಮಾ ಸುದ್ದಿ

ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ

ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.

ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ
ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿ -ಸಂಗ್ರಹ ಚಿತ್ರ
Published On :

ಹಾಲಿವುಡ್: ಹಾಲಿವುಡ್ ನ ಅಗ್ರಗಣ್ಯ ನಟಿಯರಲ್ಲಿ ಒಬ್ಬರಾದ ಆಂಜೆಲಿನಾ ಜೋಲಿ ತಾವು 2016ರಲ್ಲಿ ಬ್ರಾಡ್ ಪಿಟ್ ಅವರಿಗೆ ಡೈವೊರ್ಸ್ ನೀಡಿದ್ದು ಏಕೆಂದು ಈಗ ಬಹಿರಂಗಪಡಿಸಿದ್ದಾರೆ. 

ಬ್ರಾಡ್ ಮತ್ತು ಆಂಜೆಲಿನಾ ಜೋಲಿ ಜೋಡಿ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿತ್ತು. ಅವರಿಬ್ಬರೂ ಸೇರಿ ಹಲವು ಮಕ್ಕಳನ್ನು ಜೊತೆಯಾಗಿ ದತ್ತು ತೆಗೆದುಕೊಂಡಿದ್ದರು. ಅಲ್ಲದೆ ದೇಣಿಗೆ ಕಾರ್ಯಕ್ರಮಗಳಲ್ಲಿ ಈ ಜೋಡಿ ಭಾಗವಹಿಸಿ ಹಲವು ಸಾಮಾಜಿಕ ಕಾರ್ಯಗಳಿಗೆ ಹಣ ಸಂಗ್ರಹಿಸಿದ್ದರು.

ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.

2005ರಿಂದಲೂ ಬ್ರಾಡ್ ಮತ್ತು ಆಂಜೆಲಿನಾ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ಲೀವಿನ್ ರಿಲೇಶನ್ ಶಿಪ್ ನಲ್ಲಿ ಇದ್ದರು. 2014ರಲ್ಲಿ ಇಬ್ಬರೂ ಮದುವೆಯಾಗಿದ್ದರು. 

ಈಗ ಕಳಂಕಿತ ನಿರ್ದೇಶಕ ಹಣೆಪಟ್ಟಿಯನ್ನು ಹೊತ್ತಿರುವ ಹಾರ್ವೆ ವೈನ್ ಸ್ಟೀನ್ ಬ್ರಾಡ್ ಪಿಟ್ ಗೆ ಸಿನಿಮಾ ಅವಕಾಶ ನೀಡಿದ್ದ. ಹಾರ್ವೆ ವೈನ್ ಸ್ಟೀನ್ ಎಂಥಾ ಕಾಮುಕ ಎನ್ನುವುದು ಆಂಜೆಲಿನಾ ಜೋಲಿಗೆ ಗೊತ್ತಿತ್ತು. ಈ ಹಿಂದೆ ಆತನ ಸಿನಿಮಾವನ್ನು ಜೋಲಿ ನಿರಾಕರಿಸಿದ್ದಳು. 

ಪತಿ ಬ್ರಾಡ್ ಗೂ ಅವನ ಸಿನಿಮಾ ಮಾಡದಂತೆ ಸಲಹೆ ನೀಡಿದ್ದಳು. ಆದರೆ ಬ್ರಾಡ್ ಆತನ ನಿರ್ಮಾಣದ 'ಇಂಗ್ಲೋರಿಯಸ್ ಬಾಸ್ಟರ್ಡ್ಸ್' ಸಿನಿಮಾದಲ್ಲಿ ನಟಿಸಿದ. ಇದರಿಂದಾಗಿ ಆಂಜೆಲಿನಾ ಮತ್ತು ಬ್ರಾಡ್ ದಂಪತಿ ನಡುವೆ ವಿರಸ ಮೂಡಿತ್ತು ಎನ್ನುವುದು ಇದೀಗ ಬಹಿರಂಗವಾಗಿದೆ.

ಮಿ ಟೂ ಸಂದರ್ಭ ಹಾರ್ವೆ ವೈನ್ ಸ್ಟೀನ್ ವಿರುದ್ಧ ಹಾಲಿವುಡ್ ನ ಅನೇಕ ನಟಿಯರು ಲೈಂಗಿಕ ಕಿರುಕುಳ, ಅತ್ಯಾಚಾರ ದೂರುಗಳನ್ನು ದಾಖಲಿಸಿದ್ದು ಅದರ ವಿಚಾರಣೆ ನಡೆಯುತ್ತಿದೆ. ಆತನನ್ನು ಹಾಲಿವುಡ್ ಬಹಿಷ್ಕರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.