ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 2' ಸಿನಿಮಾ ಶೂಟಿಂಗ್ ಪುನರಾರಂಭ
ನಟ- ನಿರ್ದೇಶಕ ಕೃಷ್ಣ ತಮ್ಮ ಪತ್ನಿ ಮಿಲನಾ ನಾಗರಾಜ್ ಸಿನಿಮಾದ ಸಹಹ ನಿರ್ಮಾಪಕಿಯಾಗಿದ್ದಾಕೆ, ಈ ಮೊದಲು ಲೇಹ್-ಲಡಾಕ್ ನಲ್ಲಿ ಹಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ.

ಲವ್ ಮಾಕ್ಟೇಲ್ -2 ಸಿನಿಮಾ ಚಿತ್ರೀಕರಣವನ್ನು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಪುನಾರಾರಂಭಿಸಿದ್ದಾರೆ.
ನಟ- ನಿರ್ದೇಶಕ ಕೃಷ್ಣ ತಮ್ಮ ಪತ್ನಿ ಮಿಲನಾ ನಾಗರಾಜ್ ಸಿನಿಮಾದ ಸಹಹ ನಿರ್ಮಾಪಕಿಯಾಗಿದ್ದಾಕೆ, ಈ ಮೊದಲು ಲೇಹ್-ಲಡಾಕ್ ನಲ್ಲಿ ಹಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ.
ಲವ್ ಮಾಕ್ಟೇಲ್ -2 ಸಿನಿಮಾಗಾಗಿ ಕೆಲವು ಮಾಂಟೇಜ್ ಸನ್ನಿವೇಶಗಳು ಬೇಕಾಗಿತ್ತು, ಈಪ್ರವಾಸದಲ್ಲಿ ಅದನ್ನು ಚಿತ್ರೀಕರಿಸಲು ನಾವು ಯಶಸ್ವಿಯಾಗಿದ್ದೇವೆ.ಸದ್ಯ ನಾವು ಬೆಂಗಳೂರಿಗೆ ಆಗಮಿಸಿದ್ದೇವೆ ಎಂದು ಕೃಷ್ಣ ತಿಳಿಸಿದ್ದಾರೆ.
ಲವ್ ಮಾಕ್ಟೇಲ್ ಸಿನಿಮಾದ ಕೆಲವು ಫಿಕ್ಚರ್ ಗಳನ್ನು ಕೃಷ್ಣ ಶೇರ್ ಮಾಡಿದ್ದಾರೆ. 2021 ರಲ್ಲೇ ತಮ್ಮ ಸಿನಿಮಾ ರಿಲೀಸ್ ಮಾಡುವ ಭರವಸೆ ವ್ಯಕ್ತ ಪಡಿಸಿದ್ದಾರೆ.
ನನ್ನ ಎಲ್ಲಾ ಕಮಿಟ್ ಮೆಂಟ್ ಗಳ ಜೊತೆ ಜೊತೆಗೆ ಲವ್ ಮಾಕ್ಟೇಲ್-2 ಸಿನಿಮಾ ಕಡೆಯೂ ಗಮನ ಕೇಂದ್ರಿಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಉಳಿದಿದ್ದು, ಅದನ್ನು ಪೂರ್ಣಗೊಳಿಸಲು ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ ಒಳಗೆ ನನ್ನ ಸಿನಿಮಾ ರಿಲೀಸ್ ಮಾಡುವ ಭರವಸೆಯಿದೆ, ಆದರೆ ಕೋವಿಡ್ ಮತ್ತೆ ನನ್ನ ನಂಬಿಕೆಯನ್ನು ಹಾಳು ಮಾಡುವುದಿಲ್ಲ ಎಂಬ ಭರವಸೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಲವ್ ಮಾಕ್ಟೇಲ್ 2 ಸಿನಿಮಾವನ್ನು ನಿರ್ದೇಶಿಸುತ್ತಿರುವ ಕೃಷ್ಣ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ರಚೇಲ್ ಡೇವಿಡ್ ಕನ್ನಡದಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸುಶ್ಮಿತಾ ಮತ್ತು ಅಭಿಲಾಷ್ ನಟಿಸಿದ್ದು, ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


