ಸಿನಿಮಾ ಸುದ್ದಿ

ಅಭಿಮಾನಿಗಳಿಗಾಗಿ ಅದ್ಬುತ ಆಲೋಚನೆ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ!

ತೆಲುಗು ಚಿತ್ರರಂಗದಲ್ಲಿ ತನ್ನ ಕೆಲಸದಿಂದಲೇ ಸಾಕಷ್ಟು ಖ್ಯಾತಿಯಾಗಿರುವ, 'ಮಿಷನ್ ಮಜ್ನು ಮೂಲಕ ಬಾಲಿವುಡ್ ಪ್ರವೇಶಿಸಿರುವ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ, ತನ್ನ ಅಭಿಮಾನಿಗಳನ್ನು ಹುರಿದುಬಂದಿಸಲು ಬುಧವಾರ ಟ್ವಿಟರ್ ನಲ್ಲಿ ಅವರು ಸುಂದರವಾದ ಆಲೋಚನೆಯೊಂದನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗಾಗಿ ಅದ್ಬುತ ಆಲೋಚನೆ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ!
ನಟಿ ರಶ್ಮಿಕಾ ಮಂದಣ್ಣ
Published On :

ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ತನ್ನ ಕೆಲಸದಿಂದಲೇ ಸಾಕಷ್ಟು ಖ್ಯಾತಿಯಾಗಿರುವ, 'ಮಿಷನ್ ಮಜ್ನು ಮೂಲಕ ಬಾಲಿವುಡ್ ಪ್ರವೇಶಿಸಿರುವ  ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ, ತನ್ನ ಅಭಿಮಾನಿಗಳನ್ನು ಹುರಿದುಬಂದಿಸಲು ಬುಧವಾರ ಟ್ವಿಟರ್ ನಲ್ಲಿ ಅವರು ಸುಂದರವಾದ ಆಲೋಚನೆಯೊಂದನ್ನು ಹಂಚಿಕೊಂಡಿದ್ದಾರೆ. 

ಸಾಂಕ್ರಾಮಿಕದ ದುರಿತ ಸಮಯದಲ್ಲಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತನ್ನ ಅಭಿಮಾನಿಗಳನ್ನು ಹುರಿದುಂಬಿಸಲು ಸಕಾರಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೆ ಗುಡ್ ಬೈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ರಶ್ಮಿಕಾ ಮಂದಣ್ಣ, "ನನ್ನ ಸ್ನೇಹಿತರೊಬ್ಬರು ನನಗೆ ಹೇಳಿದ್ದರು ಮತ್ತು ಎಲ್ಲವನ್ನು ನಾನು ನಿಮಗೆ ಹೇಳಬೇಕಾದ ಅಗತ್ಯವಿದೆ ಅನಿಸಿತು. ನಿಮಗೆ ಸಂತೋಷ ಅಥವಾ ಹಣ ಅಥವಾ ಜ್ಞಾನ ಕೊಡುವುದರೊಂದಿಗೆ ಸಮಯ ಕಳೆಯಿರಿ..ಮತ್ತೇನಿಲ್ಲ..Period!ಎಂದು ಅವರು ಟ್ವಿಟ್ ಮಾಡಿದ್ದಾರೆ. 

ತೆಲುಗಿನಲ್ಲಿ ಡಿಯರ್ ಕಾಮ್ರೆಡ್ ಮತ್ತು ಗೀತಾ ಗೊವಿಂದಮ್ ನಂತಹ ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ರಶ್ಮಿಕಾ ಮಂದಣ್ಣ, ಇತ್ತೀಚೆಗೆ, ಸಾಂಕ್ರಾಮಿಕ ರೋಗದ ವಿನಾಶಕಾರಿ ಎರಡನೇ ಅಲೆಯ ಸಮಯದಲ್ಲಿ ಇತರರಿಗೆ ಸಹಾಯ ಮಾಡುವ ಜನರಿಗಾಗಿ ಭರವಸೆ ಹಂಚುವ ಎನ್ನುವ ಉಪ ಕಾರ್ಯಕ್ರಮವೊಂದನ್ನು ಆರಂಭಿಸಿದ್ದಾರೆ.

ಸೂಪರ್ ಹಿರೋಗಳ ಮೌಲ್ಯಗಳನ್ನು ಜನರಲ್ಲಿ ಪ್ರೋತ್ಸಾಹಿಸುವುದು, ಅವರ ಕೆಲಸಗಳಿಂದ ಪ್ರೇರಣೆಗೊಳ್ಳುವುದು ರಶ್ಮಿಕಾ ಮಂದಣ್ಣ ಅವ ಗುರಿಯಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.