'ಅದ್ಧೂರಿ ಲವರ್' ಚಿತ್ರೀಕರಣ ಆರಂಭಕ್ಕೆ ಬಹು ದಿನಗಳಿಂದ ಕಾಯುತ್ತಿದ್ದೆ: ನಟ ವಿರಾಟ್
ಎ.ಪಿ. ಅರ್ಜುನ್ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಅದ್ಧೂರಿ ಲವರ್ ಚಿತ್ರದ ಚಿತ್ರೀಕರಣ ಇದೇ ಜುಲೈ 21 ರಿಂದ ಪ್ರಾರಂಭವಾಗುತ್ತಿದೆ.

ಎ.ಪಿ. ಅರ್ಜುನ್ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಅದ್ಧೂರಿ ಲವರ್ ಚಿತ್ರದ ಚಿತ್ರೀಕರಣ ಇದೇ ಜುಲೈ 21 ರಿಂದ ಪ್ರಾರಂಭವಾಗುತ್ತಿದೆ.
ಕಿಸ್' ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟು ಭರವಸೆ ಮೂಡಿಸಿರುವ ನಟ ವಿರಾಟ್ ಅವರು ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಅದ್ಧೂರಿ ಲವರ್ ವಿರಾಟ್ ಅವರು ನಟಿಸುತ್ತಿರುವ ಎರಡನೇ ಚಿತ್ರವಾಗಿದೆ.
ಹಲವು ದಿನಗಳಿಂದಲೂ ಚಿತ್ರದ ಚಿತ್ರೀಕರಣ ಪ್ರಾರಂಭಕ್ಕಾಗಿ ಕಾದು ಕುಳಿತಿದ್ದೆ. ಚಿತ್ರದ ಮೂಹೂರ್ತ ನಿಗದಿಯಾಗಾದ ಮೊದಲ ಲಾಕ್ಡೌನ್ ಘೋಷಣೆಯಾಗಿತ್ತು. ಲಾಕ್ಡೌನ್ ಪೂರ್ಣಗೊಂಡು ಇನ್ನೇನು ಚಿತ್ರೀಕರಣ ಆರಂಭ ಮಾಡಬೇಕೆನ್ನುವಷ್ಟರಲ್ಲಿ ಎರಡನೇ ಲಾಕ್ಡೌನ್ ಘೋಷಣೆಯಾಗಿತ್ತು. ಹೀಗಾಗಿ ಚಿತ್ರೀಕರಣ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಚಿತ್ರೀಕರಣ ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ಬಹಳ ಉತ್ಸುಕನಾಗಿದ್ದೇನೆ. ಮತ್ತೆ ಲಾಕ್ಡೌನ್ ಆಗದಿರಲಿ ಎಂಬ ಪ್ರಾರ್ಥನೆಯೊಂದಿಗೆ ಚಿತ್ರೀಕರಣ ಆರಂಭಿಸುತ್ತಿದ್ದೇವೆಂದು ನಟ ವಿರಾಟ್ ಅವರು ಹೇಳಿದ್ದಾರೆ.
ಚಿತ್ರೀಕರಣ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಸಮಯದಲ್ಲಿ ಡ್ಯಾನ್ಸ್ ಹಾಗೂ ಫೈಟಿಂಗ್ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಬಾಡಿ ಬಿಲ್ಡ್ ಮಾಡುತ್ತಿದ್ದೇನೆ. 15 ದಿನಗಳ ಕಾಲ ದಾಂಡೇಲಿಯಲ್ಲಿ ಚಿತ್ರೀಕರಣ ನಡೆಯಲಿದೆ.ನಂತರ ಬೆಂಗಳೂರು, ಊಟಿ, ಕೇರಳದಲ್ಲಿ ನಡೆಯಲಿದೆ ಎಂದು ವಿರಾಟ್ ತಿಳಿಸಿದ್ದಾರೆ.
ಚಿತ್ರದ ಚಿತ್ರೀಕರಣ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ನಡೆಯಲಿದೆ. ದೊಡ್ಡ ಮೊತ್ತದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಅದ್ಧೂರಿ ಲವರ್ ಮೂಲಕ ಟಾಲಿವುಡ್'ಗೂ ಪಾದಾರ್ಪಣೆ ಮಾಡುತ್ತಿರುವುದು ಬಹಳ ಸಂತಸ ತಂದಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


