ಸಿನಿಮಾ ಸುದ್ದಿ

ವರನಟನ ಜತೆಗಿನ ದಿಲೀಪ್ ಕುಮಾರ್ ಚಿತ್ರ ಹಂಚಿಕೊಂಡ ಪುನೀತ್; ಬಾಲಿವುಡ್ ದಂತಕಥೆ ನಿಧನಕ್ಕೆ ಕಿಚ್ಚ ಸುದೀಪ್ ಕಂಬನಿ

ಹಿಂದಿ ಸಿನಿರಂಗದ ಹಿರಿಯ ನಟ ದಿಲೀಪ್ ಕುಮಾರ್ ಇಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಾಲಿವುಡ್, ದಕ್ಷಿಣ ಚಿತ್ರೋದ್ಯಮ ಅವರ ನಿಧನಕ್ಕೆ ಅಪಾರ ಶೋಕ ವ್ಯಕ್ತಪಡಿಸಿದೆ. ಇದರ ನಡುವೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ವರನಟ ಡಾ. ರಾಜ್​ಕುಮಾರ್ ಹಾಗೂ ದಿಲೀಪ್ ಕುಮಾರ್ ಅವರು ಜತೆಯಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ವರನಟನ ಜತೆಗಿನ ದಿಲೀಪ್ ಕುಮಾರ್ ಚಿತ್ರ ಹಂಚಿಕೊಂಡ ಪುನೀತ್; ಬಾಲಿವುಡ್ ದಂತಕಥೆ ನಿಧನಕ್ಕೆ ಕಿಚ್ಚ ಸುದೀಪ್ ಕಂಬನಿ
Published On :

ಹಿಂದಿ ಸಿನಿರಂಗದ ಹಿರಿಯ ನಟ ದಿಲೀಪ್ ಕುಮಾರ್ ಇಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಾಲಿವುಡ್, ದಕ್ಷಿಣ ಚಿತ್ರೋದ್ಯಮ ಅವರ ನಿಧನಕ್ಕೆ ಅಪಾರ ಶೋಕ ವ್ಯಕ್ತಪಡಿಸಿದೆ. ಇದರ ನಡುವೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ವರನಟ ಡಾ. ರಾಜ್​ಕುಮಾರ್ ಹಾಗೂ ದಿಲೀಪ್ ಕುಮಾರ್ ಅವರು ಜತೆಯಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

"ದಿಲೀಪ್ ಕುಮಾರ್ . ಅವರನ್ನು ಎರಡು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ, . ಅಪ್ಪಾಜಿ ಮತ್ತು ದಿಲೀಪ್ ಸರ್ ಇಬ್ಬರೂ ಪರಸ್ಪರ ಗೌರವವನ್ನು ಹೊಂದಿದ್ದರು. . ಅಪ್ಪಾಜಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುವಾಗ ಅವರನ್ನು ಭೇಟಿಯಾದದ್ದು ನನಗೆ ನೆನಪಿದೆ, ಇಂದು ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅದ್ಭುತ ಕೊಡುಗೆಯನ್ನು ನೆನಪಿಸಿಕೊಳ್ಳಲಾಗುತ್ತಿದೆ RIP @TheDilipKumar" ಎಂದು ನಟ  ಪುನೀತ್  ಟ್ವೀಟ್ ಮಾಡಿದ್ದಾರೆ.

ಇನ್ನು ಕಿಚ್ಚ ಸುದೀಪ್ ಸಹ ಹಿರಿಯ ನಟನಿಗೆ ಗೌರವ ಸಲ್ಲಿಸಿದ್ದು "ಜಗತ್ತು ಅವರನ್ನು ಸಾರ್ವಕಾಲಿಕ ಶ್ರೇಷ್ಠ ನಟ, ಅದ್ಭುತ ವಾಗ್ಮಿ ಮತ್ತು ಸರಳತೆಯ ಸಾಕಾರ ಎಂದು ಶ್ಲಾಘಿಸಿದೆ.ಅವರು ಅನೇಕ ತಲೆಮಾರಿನ ನಟರಿಗೆ ಸ್ಫೂರ್ತಿಯಾಗಿ ಮತ್ತು ನನಗೆ ಒಂದು ಎನಿಗ್ಮಾ ಆಗಿ ಉಳಿಯುತ್ತಾರೆ. ದಂತಕಥೆ ಸದಾ ಜೀವಂತವಿರುತ್ತದೆ!! RIP DilipKumarJi" ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.