ಸಿನಿಮಾ ಸುದ್ದಿ

ಮಾರ್ಚ್ 3 ರಂದು ರಾಬರ್ಟ್ ಮೊದಲನೇ ಹಾಡು 'ಬಾ ಬಾ ಬಾ ನಾ ರೆಡಿ' ರಿಲೀಸ್

'ರಾಬರ್ಟ್‌ ಚಿತ್ರದ ಮೊದಲ ಹಾಡನ್ನು ಮಾರ್ಚ್‌ 3 ರ ಸಂಜೆ 5 ಕ್ಕೆ ರಿಲೀಸ್‌ ಮಾಡಲಾಗುತ್ತದೆ. ಇದು ಸ್ಪೆಷಲ್‌ ಆಗಿ ಡಿ-ಬಾಸ್‌ ಫ್ಯಾನ್ಸ್‌ಗೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ' ಎಂದು ಹಾಡಿನ ಮೊದಲ ಸಾಲುಗಳನ್ನು ನಿರ್ದೇಶಕ ತರುಣ್ ಸುಧೀರ್ ರಿವೀಲ್‌ ಮಾಡಿದ್ದಾರೆ.

ಮಾರ್ಚ್ 3 ರಂದು ರಾಬರ್ಟ್ ಮೊದಲನೇ ಹಾಡು 'ಬಾ ಬಾ ಬಾ ನಾ ರೆಡಿ' ರಿಲೀಸ್
ರಾಬರ್ಟ್ ಸಿನಿಮಾ ಸ್ಟಿಲ್
Published On :

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್‌' ದಿನೇ ದಿನೇ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. 

'ರಾಬರ್ಟ್‌ ಚಿತ್ರದ ಮೊದಲ ಹಾಡನ್ನು ಮಾರ್ಚ್‌ 3 ರ ಸಂಜೆ 5 ಕ್ಕೆ ರಿಲೀಸ್‌ ಮಾಡಲಾಗುತ್ತದೆ. ಇದು ಸ್ಪೆಷಲ್‌ ಆಗಿ ಡಿ-ಬಾಸ್‌ ಫ್ಯಾನ್ಸ್‌ಗೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ' ಎಂದು ಹಾಡಿನ ಮೊದಲ ಸಾಲುಗಳನ್ನು ನಿರ್ದೇಶಕ ತರುಣ್ ಸುಧೀರ್ ರಿವೀಲ್‌ ಮಾಡಿದ್ದಾರೆ.

ಚಿತ್ರೀಕರಣದ ಕೊನೆಯ ಹಂತದಲ್ಲಿರುವ ರಾಬರ್ಟ್‌ ಟೀಂ ಏಪ್ರಿಲ್‌ 10 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.  

ತರುಣ್‌ ಸುಧೀರ್‌ ಮತ್ತು ದರ್ಶನ್‌ ಕಾಂಬಿನೇಷನ್‌ ಎಂಬ ಕಾರಣಕ್ಕಾಗಿಯೇ 'ರಾಬರ್ಟ್‌' ಚಿತ್ರ ದೊಡ್ಡ ಮಟ್ಟದಲ್ಲಿ ಹೈಪ್‌ ಸೃಷ್ಟಿ ಮಾಡಿದೆ. ಅದರಲ್ಲೂ 'ಚಾಲೆಂಜಿಂಗ್‌ ಸ್ಟಾರ್‌' ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ. 

 'ಬಾ ಬಾ ಬಾ ನಾ ರೆಡಿ...' ಎಂಬ ಹಿನ್ನೆಲೆ ಧ್ವನಿ ಸಖತ್‌ ಕುತೂಹಲ ಕೆರಳಿಸಿತ್ತು. ಈಗ ಅದೇ ಸಾಹಿತ್ಯ ಇರುವ ಈ ಹಾಡು ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿದುಕೊಳ್ಳುವ ಸಮಯ ಬಂದಿದೆ. ದರ್ಶನ್‌ ಸಿನಿಮಾ ಎಂದರೆ ಅಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಅದು 'ರಾಬರ್ಟ್‌' ಸಿನಿಮಾದಲ್ಲೂ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.