'ರೇಮೋ' ಹಾಡುಗಳಿಗೆ 360 ಡಿಗ್ರಿ ಗ್ರಾಫಿಕ್ ತಂತ್ರಜ್ಞಾನ ಬಳಕೆ: ಪವನ್ ಒಡೆಯರ್
ನಿರ್ದೇಶಕ ಪವನ್ ಒಡೆಯರ್ ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಚಿತ್ರಕ್ಕಾಗಿ ಈ ಮುನ್ನ ಯೋಜಿಸಿದ್ದಂತೆ ಹಿಮಾಲಯ ಹಾಗೂ ರಾಜಸ್ಥಾನದಲ್ಲಿ ಎರಡು ಹಾಡಿನ ಚಿತ್ರೀಕರಣ ಯೋಜನೆಯನ್ನು ಕೈಬಿಟ್ಟು ಪ್ಲ್ಯಾನ್ ಬಿ ಯನ್ನು ಹುಡುಕುತ್ತಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಚಿತ್ರಕ್ಕಾಗಿ ಈ ಮುನ್ನ ಯೋಜಿಸಿದ್ದಂತೆ ಹಿಮಾಲಯ ಹಾಗೂ ರಾಜಸ್ಥಾನದಲ್ಲಿ ಎರಡು ಹಾಡಿನ ಚಿತ್ರೀಕರಣ ಯೋಜನೆಯನ್ನು ಕೈಬಿಟ್ಟು ಪ್ಲ್ಯಾನ್ ಬಿ ಯನ್ನು ಹುಡುಕುತ್ತಿದ್ದಾರೆ. ಇದಕ್ಕೀಗ ವಿವಿಧ ಗ್ರಾಫಿಕ್ ಕಂಪನಿಗಳೊಂದಿಗೆ ಚರ್ಚಿಸುತ್ತಿರುವ ನಿರ್ದೇಶಕ ತಮ್ಮ ಮ್ಯೂಸಿಕಲ್ ಲವ್ ಡ್ರಾಮಾ "ರೆಮೋ" ಗಾಗಿ ಬಿರುಸಿನ ತಯಾರಿ ನಡೆಸಿದ್ದಾರೆ.
ಚಿತ್ರದ ಎರಡು ಹಾಡುಗಳು ಹಾಗೂ ಒಂದು ಫೈಟ್ ಸೀನ್ ಗಳ ಶೂಟಿಂಗ್ ಬಾಕಿ ಇದೆ., ಜುಲೈ 15ರಿಂದ ಶೂಟಿಂಗ್ ಪುನಾರಂಭವಾಗುವ ನಿರೀಕ್ಷೆ ತಂಡಕ್ಕಿದೆ. ಸಾಂಕ್ರಾಮಿಕ ರೋಗ ಕೊರೋನಾ ಕಾರಣದಿಂದ ರಾಜಸ್ಥಾನ ಹಾಗೂ ಹಿಮಾಯಲದ ಶೂಟಿಂಗ್ ರದ್ದಾಗಿದೆ. ಇದಕ್ಕಾಗಿ ನಿರ್ದೇಶಕ ಇದೀಗ 360 ಡಿಗ್ರಿ ಗ್ರಾಫಿಕ್ ತಂತ್ರಜ್ಞಾನದೊಂದಿಗೆ ಎರಡು ಹಾಡುಗಳನ್ನು ಶೂಟ್ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದಾರೆ
"ಸೀಮಿತ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಶೂಟಿಂಗ್ ನರಾರಂಭಿಸಲು ಸರ್ಕಾರ ಅನುಮತಿ ನೀಡುತ್ತಿರುವುದರಿಂದ, ನಾವು ಈಗ ನಮ್ಮ ಚಾತುರ್ಯವನ್ನು ಉಪಯೋಗಿಸಬೇಕಿದೆ. ಇಂಟ್ರಡಕ್ಷನ್ ಸಾಂಗ್ ಗಾಗಿ ನನಗೆ 1,000 ಕಿರಿಯ ಕಲಾವಿದರು ಬೇಕು. ಆದರೆ ಇದೀಗ ಅದು ಸಾಧ್ಯವಿಲ್ಲ. ಅದಕ್ಕಾಗಿ ಣಾನು ಬೇರೆ ಬಗೆಯ ಆಲೋಚನೆ ರೂಪಿಸಿದ್ದೇನೆ. ಕೇವಲ 10 ಕಿರಿಯ ಕಲಾವಿದರನ್ನು ಹೊಂದಿದ್ದು, ಅವರು ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನ ವೇಷಭೂಷಣಗಳೊಂದಿಗೆ ತೋರಿಸಲಾಗುತ್ತದೆ. . 3 ಡಿ ತಂತ್ರಜ್ಞಾನದ ಮೂಲಕ ನಾವು ಅವರನ್ನು ಸಾವಿರ ಸಂಖ್ಯೆಯಲ್ಲಿ ತೋರಿಸಲು ಪ್ರಯತ್ನಿಸುತ್ತೇವೆ. " ಪವನ್ ಒಡೆಯರ್ ಹೇಳಿದ್ದಾರೆ.. "ಗ್ರಾಫಿಕ್ಸ್ ಗಾಗಿ ಭಾರೀ ವೆಚ್ಚವಾಗುತ್ತದೆ. ಆದರೆ ನಮ್ಮ ನಿರ್ಮಾಪಕ (ಸಿ ಆರ್ ಮನೋಹರ್) ಈ ಯೋಜನೆ ಳಸಿಕೊಂಡು ಹಾಡುಗಳನ್ನು ಪೂರ್ಣಗೊಳಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ." ಎಂದು ಅವರು ಹೇಳುತ್ತಾರೆ.
ನಿರ್ದೇಶಕರು ಮೂರು ಗ್ರಾಫಿಕ್ ಕಂಪನಿಗಳನ್ನು ಸಂಪರ್ಕಿಸಿದ್ದಾರೆ - ಬೆಂಗಳೂರಿನ ಯುನಿಫಿ ಮೀಡಿಯಾ ಹಾಗೂ ಮುಂಬೈ ಮತ್ತು ಚೆನ್ನೈನ ಎರಡು ಕಂಪನಿಗಳನ್ನು ಅವರು ಸಂಪರ್ಕಿಸಿದ್ದಾರೆ. "ನಾವು ಈ ಕಂಪನಿಗಳೊಂದಿಗೆ ಕೆಲಸ ಹಂಚಿಕೊಳ್ಳಲಿದ್ದೇವೆ. ಇದರಿಂದ ಅದು ಆದಷ್ಟು ಬೇಗ ಕೆಲಸ ಪೂರ್ಣಗೊಳ್ಲಲಿದೆ." ಎಂದು ಪವನ್ ಹೇಳಿದ್ದಾರೆ.ಎರಡು ಹಾಡುಗಳನ್ನು ಆರಂಭದಲ್ಲಿ ತಲಕಾಡಿನಲ್ಲಿ ಚಿತ್ರೀಕರಿಸಲಾಗುವುದು. "ತಲಕಾಡಿನಲ್ಲಿ ವಿಶಾಲ ಸ್ಥಳ ನಮಗೆ ದೊರಕಲಿದೆ. . ನಾವು ಕೆಲವು ನೈಜ ಸೆಟ್‌ಗಳನ್ನು ಹಾಕುವ ಮೂಲಕ ಮರುಭೂಮಿಯಂಥಹಾ ದೃಶ್ಯಗಳನ್ನು ಸೆರೆಹಿಡಿಯುತ್ತೇವೆ ಮತ್ತು ನಂತರ ನಾವು ದೃಶ್ಯಗಳನ್ನು ತಂತ್ರಜ್ಞಾನದ ಬಳಕೆಯೊಂದಿಗೆ ವಿಲೀನಗೊಳಿಸುತ್ತೇವೆ ”
"ರೆಮೋ" ಚಿತ್ರದ ಕೆಲ ದೃಶ್ಯಗಳನ್ನು ಥೈಲ್ಯಾಂಡ್, ಮಲೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಸಿಂಗಾಪುರದಂತಹ ರಾಷ್ಟ್ರಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಹಿರಿಯ ನಟರಾದ ಮಧು ಮತ್ತು ಶರತ್‌ಕುಮಾರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದುಚ್ಯುತ್ ಕುಮಾರ್ ಮತ್ತು ರಾಜೇಶ್ ನಟರಂಗ ಸಹ ತೆರೆ ಹಂಚಿಕೊಳ್ಳುತ್ತಿದ್ದಾರೆ. "ರೇಮೋ" ಮೊದಲ ಬಾರಿಗೆ ಸಂಗೀತ ಸಂಯೋಜಕ ಅರ್ಜುನ್ ಜನ್ಯಾ-ಪವನ್ ಜೋಡಿಯಾಗಿಸಿದೆ. ಗಾಯಕರಾದ ಅರಿಜಿತ್ ಸಿಂಗ್, ಶ್ರೇಯಾ ಘೋಶಾಲ್, ಅರ್ಮಾನ್ ಮಲಿಕ್, ಸಂಜಿತ್ ಹೆಗ್ಡೆ, ಸಿದ್ ಶ್ರೀರಾಮ್, ಮತ್ತು ಇಂದೂ ನಾಗರಾಜ್ ವಿವಿಧ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


