ಕುದುರೆ ಮುಖದಲ್ಲಿ ಗಾಳಿಪಟ ಶೂಟಿಂಗ್: ಹಾಡಿಗಾಗಿ ಗಣೇಶ್, ದಿಗಂತ್, ಪವನ್ ಮಸ್ತ್ ಡ್ಯಾನ್ಸ್
ಗಾಳಿಪಟ-2 ಸಿನಿಮಾವನ್ನುಅತ್ಯುತ್ತಮವಾಗಿ ತರಬೇಕೆಂಬ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ. ಕುದುರೆಮುಖದ ರಮ್ಯ ಮನೋಹರವಾದ ಸ್ಥಳಗಳಲ್ಲಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

ಗಾಳಿಪಟ-2 ಸಿನಿಮಾವನ್ನುಅತ್ಯುತ್ತಮವಾಗಿ ತರಬೇಕೆಂಬ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ. ಕುದುರೆಮುಖದ ರಮ್ಯ ಮನೋಹರವಾದ ಸ್ಥಳಗಳಲ್ಲಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.
ಸಿನಿಮಾದ ಆರಂಭಿಕ ಹಾಡಿನ ಚಿತ್ರೀಕರಣಕ್ಕಾಗಿ ಬೆಂಕಿ ಮತ್ತು ಬೆಳಕಿನ ಸೆಟ್ ಹಾಕಲಾಗಿತ್ತು. ಅರ್ಜನ್ ಜನ್ಯ ಸಂಗೀತ ಸಂಯೋಜಿಸಿರುವ ಗೀತೆಯೊದಕ್ಕೆ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಹೆಜ್ಜೆ ಹಾಕಿದರು. 350 ಜ್ಯೂನಿಯರ್ ಆರ್ಟಿಸ್ಟ್ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಈ ಸಿನಿಮಾಗಾಗಿ ಗಣೇಶ್ ಮತ್ತು ದಿಗಂತ್ ಕಠಿಣವಾದ ವರ್ಕೌಟ್ ಮಾಡಿದ್ದಾರೆ. ಪವನ್ ಕುಮಾರ್ ಮೂವಾಯ್ ತೈ ಅಭ್ಯಾಸ ಮಾಡಿದ್ದಾರೆ. ಮೂವರು ಕೂಡ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸೂರಜ್ ಪ್ರೊಜಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಅನಂತ್ ನಾಗ್, ವೈಭವ ಸಾನಿಧ್ಯಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


