ಸಿನಿಮಾ ಸುದ್ದಿ

ತೀರ್ಪುಗಾರರ ಮನಗೆದ್ದು ಸರಿಗಮಪ ಸ್ಪರ್ಧಿಯಾದ ಕುರಿಗಾಹಿ ಹನುಮಂತ, ಹಾಡಿನ ವಿಡಿಯೋ ವೈರಲ್!

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರೆಗಮಪ ಸೀಸನ್ 15ರ ಮೆಗಾ ಆಡಿಷನ್ ನಲ್ಲಿ ಸಂಗೀತ ಮಾಂತ್ರಿಕರ ಮನಗೆದ್ದ ಹಾವೇರಿಯ ಕುರಿಗಾಹಿ ಹನುಮಂತ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾಗಿದ್ದಾರೆ...

ತೀರ್ಪುಗಾರರ ಮನಗೆದ್ದು ಸರಿಗಮಪ ಸ್ಪರ್ಧಿಯಾದ ಕುರಿಗಾಹಿ ಹನುಮಂತ, ಹಾಡಿನ ವಿಡಿಯೋ ವೈರಲ್!
ಕುರಿಗಾಹಿ ಹನುಮಂತ
Published On :
ಬೆಂಗಳೂರು: ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರೆಗಮಪ ಸೀಸನ್ 15ರ ಮೆಗಾ ಆಡಿಷನ್ ನಲ್ಲಿ ಸಂಗೀತ ಮಾಂತ್ರಿಕರ ಮನಗೆದ್ದ ಹಾವೇರಿಯ ಕುರಿಗಾಹಿ ಹನುಮಂತ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾಗಿದ್ದಾರೆ. 
ನಿನ್ ಒಳಗೆ ನೀನು ತಿಳಿದು ನೋಡಣ್ಣ ಎಂಬ ಜಾನಪದ ಹಾಡಿನ ಮೂಲಕ ಹನುಮಂತ ತೀರ್ಪುಗಾರರ ಕಣ್ತೇರಿಸಿದ್ದರು. ಅಲ್ಲದೆ ತೀರ್ಪುಗಾರರಿಂದ ಹೊಗಳಿಸಿಕೊಂಡು ಸ್ಫರ್ಧೆಗೆ ಆಯ್ಕೆಯಾಗಿದ್ದರು. ಇನ್ನು ಅಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತೊಮ್ಮೆ ಹಾಡುವಂತೆ ಹನುಮಂತ ನನ್ನು ಕೇಳಿಕೊಂಡರು. ಅಷ್ಟರ ಮಟ್ಟಿಗೆ ಹನುಮಂತನ ಹಾಡು ಜನರಿಗೆ ಇಷ್ಟವಾಗಿತ್ತು. 
ಮುಗ್ಧ ಮನಸಿನ ಹಳ್ಳಿ ಹೈದನ ಪ್ರತಿಭೆಯ ಅನಾವರಣಕ್ಕೆ ಸರಿಗಮಪ ವೇದಿಕೆ ಮೂಲಕ ದೊಡ್ಡ ಅವಕಾಶ ಸಿಕ್ಕಂತಾಗಿದೆ. ಈತನ ಕಂಠದಿಂದ ಹೊರಹೊಮ್ಮಿದ ಜಾನಪದ ಗೀತೆಗೆ ನಾದಬ್ರಹ್ಮ ಹಂಸಲೇಖ ಅವರೇ ಫಿದಾ ಆದರು. ತಮ್ಮ ಬಳಿ ಕರೆದು ಹನುಮಂತನಿಗೆ ತಮ್ಮ ಕೊರಳಿನಲ್ಲಿದ್ದ ವಸ್ತ್ರವನ್ನು ಆತನಿಗೆ ನೀಡಿ ಪ್ರೋತ್ಸಾಹಿಸಿದರು. 
ಯಾವುದೇ ಸಂಗೀತ ತರಬೇತಿಯನ್ನು ಪಡೆಯದೆ ಕುರಿ ಮೇಯಿಸುತ್ತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರೆಗಮಪ ಸೀಸನ್ 15 ಕಾರ್ಯಕ್ರಮಕ್ಕೆ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ ಹನುಮಂತ ಆಯ್ಕೆಯಾಗಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.