ಸರಿಗಮಪ

ಜೀ ಕನ್ನಡ ಸರಿಗಮಪ ಜ್ಯೂರಿ ಮೋಹನ್ ಪುತ್ರ- ನಟ ಹೃತಿಕ್ ನಿಧನ: ವಾರದಲ್ಲಿ 2ನೇ ಸ್ಮಶಾನ ಯಾತ್ರೆ ಎಂದಿದ್ದೇಕೆ ಮಂಡ್ಯ ರಮೇಶ್?
ಮೋಹನ್ ಕೃಷ್ಣ ಅವರ ಮೊದಲ ಪತ್ನಿಯ ಪುತ್ರ ಹೃತಿಕ್ ರಾಜರಾಜೇಶ್ವರಿ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

'ಶ್ರೀಕರನೇ' ಹಾಡು ಹಾಡಿ ಮುಸ್ಲಿಂರ ಕೆಂಗಣ್ಣಿಗೆ ಗುರಿಯಾಗಿದ್ದ ಸುಹಾನಾ ಸೈಯದ್, Hindu ಯುವಕನ ಜೊತೆ ಮದುವೆ!
ಝೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಶ್ರೀಕರನೇ ಶ್ರೀನಿವಾಸನೇ ಎಂದು ಹಾಡಿ ಕಲಾಭಿಮಾನಿಗಳ ಮನಸ್ಸು ಕದ್ದಿದ್ದ ಮುಸ್ಲಿಂ ಯುವತಿ ಸುಹಾನಾ ಸೈಯದ್ ನಂತರ ಮುಸ್ಲಿಂ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ನಿಧನ
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ತಡರಾತ್ರಿ ವಿಧಿವಶರಾಗಿದ್ದಾರೆ.

ಕೋವಿಡ್ 19 - ಸರಿಗಮಪ ಖ್ಯಾತಿಯ ಪೊಲೀಸ್ ಸುಬ್ರಹ್ಮಣ್ಯ ಪತ್ನಿ ಸಾವು
ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಜನಮೆಚ್ಚುಗೆಗೆ ಪಾತ್ರವಾಗಿದ್ದ ಪೊಲೀಸ್ ಅಧಿಕಾರಿ ಸುಬ್ರಹ್ಮಣ್ಯ ಪತ್ನಿ ಜ್ಯೋತಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ತೀರ್ಪುಗಾರರ ಮನಗೆದ್ದು ಸರಿಗಮಪ ಸ್ಪರ್ಧಿಯಾದ ಕುರಿಗಾಹಿ ಹನುಮಂತ, ಹಾಡಿನ ವಿಡಿಯೋ ವೈರಲ್!
ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರೆಗಮಪ ಸೀಸನ್ 15ರ ಮೆಗಾ ಆಡಿಷನ್ ನಲ್ಲಿ ಸಂಗೀತ ಮಾಂತ್ರಿಕರ ಮನಗೆದ್ದ ಹಾವೇರಿಯ ಕುರಿಗಾಹಿ ಹನುಮಂತ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾಗಿದ್ದಾರೆ...

ಸರಿಗಮಪ ರನ್ನರ್ ಅಪ್ ಜ್ಞಾನೇಶ್‌ಗೆ ಒಲಿದ ಅದೃಷ್ಟ. ಕನ್ನಡ ಚಿತ್ರಕ್ಕೆ ಧ್ವನಿ!
ಸರಿಗಮಪ 14 ಸೀಸನ್ ನ ರನ್ನಪ್ ಅಪ್ ಗಣಿನಾಡು ಬಳ್ಳಾರಿಯ ಪ್ರತಿಭೆ ಜ್ಞಾನೇಶ್‌ಗೆ ಅದೃಷ್ಟ ಬಲಿದಿದ್ದು ಕನ್ನಡ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ...

ಶ್ರೀಪಂಚಾಕ್ಷರಿ ಗವಾಯಿಗಳ ಮಠದ ಸುನೀಲ್ ಸರಿಗಮಪ 13ರ ವಿಜೇತ
ಜೀ ಕನ್ನಡ ಟಿವಿಯ ರಿಯಾಲಿಟಿ ಶೋ ಸರಿಗಮಪ 13ನೇ ಆವೃತ್ತಿಯಲ್ಲಿ ಗದುಗಿನ ಶ್ರೀಪಂಚಾಕ್ಷರಿ ಗವಾಯಿಗಳ ಮಠದ ಶಿಷ್ಯ ಸುನೀಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ...

